ಚೆನ್ನೈ ತಂಡಕ್ಕೆ ಮತ್ತೊಂದು ಶಾಕ್?? ಜಡೇಜಾ ಕಠಿಣ ನಿರ್ಧಾರದ ಬೆನ್ನಲ್ಲೇ ಮತ್ತಿಬ್ಬರು ಆಟಗಾರರು ಹೊರಕ್ಕೆ? ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಆಗಿರುವ ರವೀಂದ್ರ ಜಡೇಜಾ ಸಿಎಸ್ಕೆ ಕುರಿತಂತೆ ಇರುವಂತಹ ಎಲ್ಲಾ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಿರುವ ವಿಚಾರದಿಂದ ಅವರು ಮುಂದಿನ ಐಪಿಎಲ್ ಸೀಸನ್ ನಲ್ಲಿ ಖಂಡಿತವಾಗಿ ಚೆನ್ನೈ ತಂಡದಿಂದ ಹೊರ ಬರಲಿದ್ದಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.

2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ರವೀಂದ್ರ ಜಡೇಜಾ ರವರು ಕಳೆದ ಸೀಸನ್ ವರೆಗೂ ಕೂಡ ಆಟಗಾರರಾಗಿದ್ದರು ಆದರೆ ಈ ಸೀಸನ್ ನಲ್ಲಿ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು ಆದರೆ ಅದರ ಜೊತೆಗೆ ಅವರ ಹಾಗೂ ತಂಡದ ಕಳಪೆ ಪ್ರದರ್ಶನ ಕೂಡ ಕಂಡು ಬಂದಿತ್ತು. ಹೀಗಾಗಿ ಮತ್ತೆ ಮಹೇಂದ್ರ ಸಿಂಗ್ ಧೋನಿ ರವರನ್ನು ನಾಯಕನ ಪಟ್ಟಕ್ಕೆ ಆಯ್ಕೆ ಮಾಡಲಾಗಿತ್ತು. ಇದಾದ ಕೂಡಲೇ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬರುವ ಪ್ರಯತ್ನ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದಕ್ಕೆ ತಂಡದ ಸಿಇಒ ಕೂಡ ನಮ್ಮ ಹಾಗೂ ಜಡೇಜಾ ನಡುವೆ ಸಂಬಂಧ ಎಲ್ಲವೂ ಚೆನ್ನಾಗಿದೆ ಎಂಬುದಾಗಿ ಶುಗರ್ ಕೋಟೆಡ್ ಹೇಳಿಕೆಯನ್ನು ನೀಡಿದ್ದರು. ಆದರೆ ಈಗ ಸಿಎಸ್ಕೆ ಸಂಬಂಧಪಟ್ಟಂತಹ ಪೋಸ್ಟ್ಗಳನ್ನು ಡಿಲೀಟ್ ಮಾಡುವ ಮೂಲಕ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.

ಜಡೇಜಾ ಅವರ ಜೊತೆಗೆ ಮತ್ತೆ ಇಬ್ಬರು ಆಟಗಾರರು ಕೂಡ ತಂಡವನ್ನು ಬಿಟ್ಟು ಹೊರ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೌದು ಗೆಳೆಯರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತಿಬ್ಬರು ಪ್ರಮುಖ ಆಟಗಾರರು ಆಗಿರುವ ಅಂಬಾಟಿ ರಾಯ್ಡು ಹಾಗೂ ದೀಪಕ್ ಚಹರ್ ಮುಂದಿನ ಐಪಿಎಲ್ ಗೂ ಮುನ್ನ ಚೆನ್ನೈ ತಂಡದಿಂದ ಹೊರ ಹೋಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇಬ್ಬರ ಜೊತೆಗೂಡಿ ಮ್ಯಾನೇಜ್ಮೆಂಟ್ ಚೆನ್ನಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಸುದ್ದಿ ಇದಕ್ಕೆ ಕಾರಣ ಎಂಬುದಾಗಿ ಒಳ ಮೂಲಗಳು ತಿಳಿಸಿವೆ. ಈ ವಿಚಾರ ಇನ್ನೂ ಕೂಡ ಗಾಳಿ ಸುದ್ದಿಯಲ್ಲಿದ್ದು ಮುಂದಿನ ದಿನಗಳಲ್ಲಿ ಈ ವಿಚಾರದ ಕುರಿತಂತೆ ಅಧಿಕೃತ ಘೋಷಣೆಗಳು ಕಂಡುಬರಲಿದೆ ಎಂಬುದಾಗಿ ಹೇಳಬಹುದಾಗಿದೆ.