ಮೊದಲ ಬಾರಿಗೆ ಭುಗಿಲೆದ್ದ ಅಸಮಾಧಾನ: ದ್ರಾವಿಡ್ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಗಂಗೂಲಿ. ರೋಹಿತ್, ರಾಹುಲ್ ಗೂ ಖಡಕ್ ವಾರ್ನಿಂಗ್.

ಮೊದಲ ಬಾರಿಗೆ ಭುಗಿಲೆದ್ದ ಅಸಮಾಧಾನ: ದ್ರಾವಿಡ್ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಗಂಗೂಲಿ. ರೋಹಿತ್, ರಾಹುಲ್ ಗೂ ಖಡಕ್ ವಾರ್ನಿಂಗ್.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಆಗಿರುವ ಬಹುತೇಕ ಸರಣಿಗಳನ್ನು ಗೆದ್ದು ಬೀಗಿದೆ. ಇನ್ನು ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೂಡ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಗೆದ್ದಿದೆ. ಹೀಗಿದ್ದರೂ ಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಮೇಲೆ ಬಿಸಿಸಿಐ ಅಧ್ಯಕ್ಷ ಆಗಿರುವ ಸೌರವ್ ಗಂಗೂಲಿ ಅವರು ಗರಮ್ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೆ ಸೌರವ್ ಗಂಗೂಲಿ ಅವರು ಕೋಚ್ ರಾಹುಲ್ ದ್ರಾವಿಡ್ ಹಾಗೂ ಟೀ ಮ್ಯಾನೇಜ್ಮೆಂಟ್ ಮೇಲೆ ಕೋಪ ಹಾಗೂ ಅಸಮಾಧಾನವನ್ನು ಹೊಂದಿರುವ ಬಗ್ಗೆ ಉತ್ತಮ ಕಾರಣವೂ ಕೂಡ ಇದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಟಿ ಟ್ವೆಂಟಿ ವಿಶ್ವಕಪ್ ಆದಮೇಲೆ ಇದುವರೆಗೂ 7 ನಾಯಕರು ಬದಲಾಗಿದ್ದಾರೆ. ರೋಹಿತ್ ಶರ್ಮಾ ರವರು ಇಂಜುರಿ ಆಗಿದ್ದ ಕಾರಣದಿಂದಾಗಿ ಹಾಗೂ ಬೇರೆ ಬೇರೆ ಕಾರಣಗಳಿಂದಾಗಿ ಈಗಾಗಲೇ ವಿರಾಟ್ ಕೊಹ್ಲಿ ಅಜಿಂಕ್ಯಾ ರಹಾನೆ ಕೆಎಲ್ ರಾಹುಲ್ ಹಾರ್ದಿಕ್ ಪಾಂಡ್ಯ ರಿಷಬ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರಾ ಕೂಡ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ನಾಯಕರಾಗಿದ್ದರು. ಇನ್ನು ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ಶಿಖರ್ ಧವನ್ ಅವರು ಭಾರತೀಯ ಕ್ರಿಕೆಟ್ ತಂಡದ ಇತ್ತೀಚಿನ ದಿನಗಳ ಎಂಟನೇ ನಾಯಕರಾಗಿ ಕೂಡ ಆಯ್ಕೆಯಾಗಿದ್ದಾರೆ. ಪದೇ ಪದೇ ನಾಯಕತ್ವದ ಬದಲಾವಣೆ ಆಗುತ್ತಿರುವುದು ಸೌರವ್ ಗಂಗೂಲಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಇದರ ಕುರಿತಂತೆ ಪ್ರತಿಕ್ರಿಯಿಸಿರುವ ಸೌರವ್ ಗಂಗುಲಿ ರವರು ನಾಯಕತ್ವದ ಪದೇಪದೇ ಬದಲಾವಣೆ ಪರಿಸ್ಥಿತಿಗೆ ಅನುಗುಣವಾಗಿ ನಡೆದಿದೆ ನಿಜ ಆದರೆ ಇದನ್ನೇ ರೂಢಿಯಾಗಿರಿಸಿ ಕೊಳ್ಳಬಾರದು. ಮುಂಬರುವ ಟಿ-20ವಿಶ್ವಕಪ್ ದೃಷ್ಟಿಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದಾಗಿ ಹೇಳಿದ್ದಾರೆ. ಪದೇ ಪದೇ ನಾಯಕತ್ವದ ಬದಲಾವಣೆ ಹಾಗೂ ಆಟಗಾರರ ಇಂಜುರಿ ಪ್ರಕರಣ ನಿಜಕ್ಕೂ ಕೂಡ ತಲೆನೋ’ವಿನ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಕೇವಲ ರಾಹುಲ್ ದ್ರಾವಿಡ್ ರವರಿಗೆ ಮಾತ್ರವಲ್ಲದೆ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಕೆಎಲ್ ರಾಹುಲ್ ಅವರಿಗೆ ಕೂಡ ಪರೋಕ್ಷವಾಗಿ ವಾರ್ನಿಂಗ್ ಸಿಕ್ಕಿದೆ ಎಂಬುದಾಗಿ ತಿಳಿದುಬಂದಿದೆ.