ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದ ದೀಪಕ್ ಹೂಡಾ ಬದಲು ಕೊಹ್ಲಿ ಆಯ್ಕೆ. ಈ ಕುರಿತು ನೆಟ್ಟಿಗರು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಇಂಗ್ಲೆಂಡ್ ವಿರುದ್ಧದ ಮೂರು ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡುತ್ತಿದ್ದು ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಕೂಡ ಗೆದ್ದು ಸರಣಿಯನ್ನು ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಪಡೆದಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ರಿಷಬ್ ಪಂತ್ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ರವೀಂದ್ರ ಜಡೇಜಾ ರವರಂತಹ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಮೊದಲ ಟಿ20 ಪಂದ್ಯವನ್ನು ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಆಡಿತ್ತು.

ಆದರೂ ಕೂಡ 50 ರನ್ನುಗಳ ಅನಾಯಾಸ ಗೆಲುವನ್ನು ಸಾಧಿಸಿಕೊಂಡಿದೆ. ಇದಾದ ನಂತರ ನಿನ್ನೆ ನಡೆದಿರುವ ಎರಡನೇ ಟಿ-ಟ್ವೆಂಟಿ ಪಂದ್ಯದಲ್ಲಿ ಈ ಹಿರಿಯ ಆಟಗಾರರಿಗೆ ಮತ್ತೆ ಅವಕಾಶವನ್ನು ನೀಡಲಾಗಿತ್ತು ಹಾಗೂ ತಂಡದಿಂದ ದೀಪಕ್ ಹೂಡ ಹಾಗೂ ಇಶಾನ್ ಕಿಶನ್ ರವರಂತಹ ಅದ್ಭುತ ಆಟಗಾರರನ್ನು ಕೈಬಿಡಲಾಗಿತ್ತು. ಆದರೂ ಕೂಡ ನಿನ್ನೆ 49 ರನ್ನುಗಳ ಗೆಲುವು ಸಾಧಿಸಿತ್ತು. ಆದರೆ ನೆಟ್ಟಿದ್ದರು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಇದಕ್ಕಲ್ಲ ಬದಲಾಗಿ ಅತ್ಯುತ್ತಮವಾಗಿ ಆಡುತ್ತಿದ್ದ ದೀಪಕ್ ಹೂಡ ರವರ ಬದಲಿಗೆ ವಿರಾಟ್ ಕೊಹ್ಲಿ ರವರನ್ನು ಆಡಿಸಿತ್ತು.

ಆದರೆ ವಿರಾಟ್ ಕೊಹ್ಲಿ ರವರು ಗಳಿಸಿದ್ದು ಕೇವಲ 1ರನ್ನು ಮಾತ್ರ. ದೀಪಕ್ ಕೂಡಾ ಅವರ ಬದಲಿಗೆ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ರವರಿಗೆ ಅವಕಾಶ ನೀಡಿ ಅದರಲ್ಲಿ ವಿಫಲವಾಗಿದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಅಸಮಧಾನವನ್ನು ತಂದಿತ್ತು ಎನ್ನುವುದು ನೆಟ್ಟಿಗ ರಲ್ಲಿ ಮೂಡಿರುವ ಅಸಮಾಧಾನದ ಟ್ವೀಟ್ ಗಳ ಮೂಲಕ ತಿಳಿದುಬಂದಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಮತ್ತೆ ವಿರಾಟ್ ಕೊಹ್ಲಿ ಅವರ ಬದಲಿಗೆ ದೀಪಕ್ ತಂಡದಲ್ಲಿ ಮರಳುತ್ತಾರೆ ಎಂಬುದಾಗಿ ಕಾದುನೋಡಬೇಕಾಗಿದೆ. ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ರವರ ಸಂಪೂರ್ಣ ಒತ್ತಡದಲ್ಲಿದ್ದಾರೆ ಎಂಬುದು ಸತ್ಯ ಎಂಬುದಾಗಿ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.