ಟೆಲೆಕಾಂ ಕ್ಷೇತ್ರದಲ್ಲಿ ಮೆರೆಯುತ್ತಿರುವ ಜಿಯೋ, ಏರ್ಟೆಲ್ ಗೆ ಶಾಕ್ ನೀಡಿದ ಅದಾನಿ, ತಲ್ಲಣ ಸೃಷ್ಟಿಸಿದ ಅದಾನಿ ನಡೆ. ಏನು ಗೊತ್ತೇ?

ಟೆಲೆಕಾಂ ಕ್ಷೇತ್ರದಲ್ಲಿ ಮೆರೆಯುತ್ತಿರುವ ಜಿಯೋ, ಏರ್ಟೆಲ್ ಗೆ ಶಾಕ್ ನೀಡಿದ ಅದಾನಿ, ತಲ್ಲಣ ಸೃಷ್ಟಿಸಿದ ಅದಾನಿ ನಡೆ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಈಗ ಪಾರುಪತ್ಯವನ್ನು ವಹಿಸಿರುವ ಎರಡು ದಿಗ್ಗಜ ಸಂಸ್ಥೆಗಳೆಂದರೆ ಅದು ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಹಾಗೂ ಭಾರತಿ ಏರ್ಟೆಲ್. ಹಲವಾರು ವರ್ಷಗಳಿಂದ ಟೆಲಿಕಾಂ ಕ್ಷೇತ್ರದ ಬಹುಪಾಲು ಗ್ರಾಹಕರನ್ನು ಹೊಂದಿರುವ ಈ ಎರಡು ಸಂಸ್ಥೆಗಳು ಜಿದ್ದಾಜಿದ್ದಿನ ಪೈಪೋಟಿಯನ್ನು ಪರಸ್ಪರ ಹೊಂದಿವೆ. ಜಿಯೋ ಸಂಸ್ಥೆಯನ್ನು ಮುಕೇಶ್ ಅಂಬಾನಿ ಅವರು ನಡೆಸುತ್ತಿದ್ದರೆ ಈಕಡೆ ಭಾರತಿ ಏರ್ಟೆಲ್ ಸಂಸ್ಥೆಯನ್ನು ಸುನೀಲ್ ಮಿತ್ತಲ್ ರವರು ನಡೆಸುತ್ತಿದ್ದಾರೆ.

ಈ ಟೆಲಿಕಾಂ ಕ್ಷೇತ್ರದ ಅಕಾಡಕ್ಕೆ ಈಗ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ರವರು ಎಂಟ್ರಿ ನೀಡಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಹೌದು ಗೆಳೆಯರೇ ಈಗಾಗಲೇ ಮುಕೇಶ್ ಅಂಬಾನಿ ಅವರನ್ನು ಸಂಪತ್ತಿನ ಆಧಾರದ ಮೇಲೆ ಹಿಂದಿಕ್ಕಿರುವ ಗೌತಮ್ ಅದಾನಿ ಈಗ ಜಿಯೋ ಪ್ರಾಬಲ್ಯವಿರುವ ಟೆಲಿಕಾಂ ಕ್ಷೇತ್ರಕ್ಕೆ ಕೂಡ ಕಾಲಿಟ್ಟಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯ 5g ಸ್ಪೆಕ್ಟ್ರಮ್ ಹರಾಜಿನಲ್ಲಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಭಾಗವಹಿಸುವ ಎಲ್ಲ ನಿರೀಕ್ಷೆಗಳು ಎದ್ದುಕಾಣುತ್ತಿದೆ. ಇದು ಈಗಾಗಲೇ ಹಲವಾರು ಮೂಲಗಳಿಂದ ಈಗಾಗಲೇ ದೃಢೀಕರಿಸು ವಾಗಿರುವ ಅಂಶವಾಗಿದೆ.

ಇದೇ ಜುಲೈ 26ರಂದು ಭಾರತದಲ್ಲಿ 5g ಸೇವೆಗಳನ್ನು ಒದಗಿಸುವ ಏರ್ ವೇವ್ ಗಳನ್ನು ಹರಾಜಿಗಿಡಲಾಗಿದೆ ಇದರಲ್ಲಿ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಭಾಗವಹಿಸುವ ನಿರೀಕ್ಷೆ ಇದೆ. ಒಂದು ವೇಳೆ ಅದಾನಿ ಈ ಹರಾಜಿನಲ್ಲಿ ಭಾಗವಹಿಸಿದ್ದೇ ಆದರೆ ಖಂಡಿತವಾಗಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳಿಗೆ ದೊಡ್ಡಮಟ್ಟದ ಕಾಂಪಿಟೇಶನ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಊಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಮಗೆ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ರೀತಿಯ ಬದಲಾವಣೆ ಕಂಡುಬಂದರೂ ಕೂಡ ಅಚ್ಚರಿಪಡಬೇಕಾಗಿಲ್ಲ. ಈ ಬೆಳವಣಿಗೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.