ಇಬ್ಬರು ಸ್ಟಾರ್ ಆಟಗಾರರು ಕಥೆ ಮುಗಿಯಿತೇ?? ಇನ್ನು ಇವರಿಬ್ಬರು ತಂಡಕ್ಕೆ ವಾಪಸ್ಸಾಗಲು ಸಾಧ್ಯವೇ ಇಲ್ಲವೇ??

ಇಬ್ಬರು ಸ್ಟಾರ್ ಆಟಗಾರರು ಕಥೆ ಮುಗಿಯಿತೇ?? ಇನ್ನು ಇವರಿಬ್ಬರು ತಂಡಕ್ಕೆ ವಾಪಸ್ಸಾಗಲು ಸಾಧ್ಯವೇ ಇಲ್ಲವೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಟಿ-ಟ್ವೆಂಟಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿ ಆರಂಭವಾಗಿದ್ದು ಈಗಾಗಲೇ ಆಡಿರುವ ಎರಡೂ ಪಂದ್ಯಗಳನ್ನು ಕೂಡ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮಾ ರವರ ನಾಯಕತ್ವದಲ್ಲಿ ಗೆದ್ದುಕೊಂಡಿದೆ. ಮೊದಲ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ 50 ರನ್ನುಗಳಿಂದ ಗೆದ್ದರೆ ಎರಡನೇ ಪಂದ್ಯವನ್ನು 49 ರನ್ನುಗಳಿಂದ ಗೆದ್ದುಕೊಂಡಿದೆ. ಆದರೆ ಈಗ ಭಾರತೀಯ ಕ್ರಿಕೆಟ್ ತಂಡವನ್ನು ನೋಡುತ್ತ ಹೋದರೆ ಟಿ20 ತಂಡದಲ್ಲಿ ಇಬ್ಬರು ಸ್ಟಾರ್ ಆಟಗಾರರು ಕಾಲಕ್ರಮೇಣವಾಗಿ ಮಿಸ್ ಆಗುತ್ತಾ ತಂಡದಿಂದ ಹೊರಕ್ಕೆ ಹೋಗುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಈ ಸಾಲಿನಲ್ಲಿ ಕಂಡುಬರುವ ಇಬ್ಬರು ಪ್ರಮುಖ ಆಟಗಾರರು ಎಂದರೆ ಅದು ಭಾರತೀಯ ಕ್ರಿಕೆಟ್ ತಂಡದ ಎಡಗೈ ಆರಂಭಿಕ ಆಟಗಾರ ಆಗಿರುವ ಶಿಖರ್ ಧವನ್ ಹಾಗೂ ತಮ್ಮ ವಿಶೇಷ ಶೈಲಿಯ ಸ್ವಿಂಗ್ ಹಾಗೂ ವೇಗದ ಮೂಲಕ ಎದುರಾಳಿ ಬ್ಯಾಟ್ಸ್ಮನ್ ಗಳಲ್ಲಿ ನಡುಕ ಹುಟ್ಟಿಸುವ ಶಮಿ ಎಂದು ಹೇಳಬಹುದಾಗಿದೆ. ಈ ಕುರಿತಂತೆ ಬಿಸಿಸಿಐ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಕೂಡ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿರುವ ಬೆಳವಣಿಗೆಗಳು ಇದಕ್ಕೆ ಪೂರಕವಾಗಿವೆ ಎಂದು ಹೇಳಬಹುದಾಗಿದೆ. ಮೊದಲಿಗೆ ಶಿಖರ್ ಧವನ್ ರವರನ್ನು ನೋಡುವುದಾದರೆ ಈಗಾಗಲೇ ಅವರು ಟೆಸ್ಟ್ ತಂಡದಿಂದ ಹೊರ ಹೋಗಿದ್ದಾರೆ. ಕಳೆದ ಬಾರಿ ಟಿ-ಟ್ವೆಂಟಿ ವಿಶ್ವಕಪ್ ತಂಡದಿಂದ ದವನ ರವರನ್ನು ಹೊರಹಾಕಲಾಗಿತ್ತು ಹೀಗಾಗಿ ಅವರು ಪಂದ್ಯವನ್ನು ವೀಕ್ಷಿಸಲು ಬಂದಿದ್ದರು.

ಇನ್ನು ಏಕದಿನ ತಂಡದಲ್ಲಿ ಅವರನ್ನು ಬ್ಯಾಕಪ್ ಆಟಗಾರನಾಗಿ ಇರಿಸಿಕೊಂಡಿದ್ದಾರೆ. ಒಬ್ಬ ಸ್ಟಾರ್ ಆಟಗಾರ ಹೀಗೆ ತೆರೆಮರೆಗೆ ಸರಿದು ಕೊಳ್ಳುತ್ತಿರುವುದು ನಿಜಕ್ಕೂ ಕೂಡ ಬೇಸರವಾದ ವಿಚಾರವಾಗಿದೆ. ಇನ್ನು ಮೊಹಮ್ಮದ್ ಶಮಿ ಅವರ ವಿಚಾರವನ್ನು ಮಾತನಾಡುವುದಾದರೆ ಕಳೆದ ವರ್ಷದ ಟಿ-20ವಿಶ್ವಕಪ್ ನಂತರ ಮೊಹಮ್ಮದ್ ಶಮಿ ಅವರನ್ನು ಟಿ20 ಕ್ರಿಕೆಟ್ ತಂಡದಿಂದ ದೂರವಿಟ್ಟಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್ ನಂತರ ಏಕದಿನ ತಂಡದಿಂದಲೂ ಕೂಡ ಹೊರ ಹೋಗುವ ಸಾಧ್ಯತೆಯಿದೆ ಇನ್ನು ಟೆಸ್ಟ್ ತಂಡದಲ್ಲಿ ಫಿಟ್ನೆಸ್ ಇರುವವರೆಗೂ ಮಾತ್ರ ಇರುವ ಸಾಧ್ಯತೆ ಇದೆ. ಹೀಗಾಗಿ ಇಬ್ಬರು ಆಟಗಾರರು ಅತಿ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್ ತಂಡದಿಂದ ಮೂಲೆಗುಂಪಾಗುವ ಸಾಧ್ಯತೆ ಹೆಚ್ಚಿದೆ.