ಸೂರ್ಯ ದೇವನನ್ನು ಮಾರ್ಥಂಡ ಎಂದು ಕೂಡ ಕರೀತಾರೆ. ಆದರೆ ಈ ಹೆಸರು ಸೂರ್ಯ ದೇವನಿಗೆ ಬರಲು ಕಾರಣವೇನು ಗೊತ್ತೇ??

ಸೂರ್ಯ ದೇವನನ್ನು ಮಾರ್ಥಂಡ ಎಂದು ಕೂಡ ಕರೀತಾರೆ. ಆದರೆ ಈ ಹೆಸರು ಸೂರ್ಯ ದೇವನಿಗೆ ಬರಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ, ನಾವು ಪುರಾಣಗಳ ಹಲವು ಕಥೆಗಳನ್ನು ಕೇಳುತ್ತೇವೆ. ಎಲ್ಲವೂ ಬೇರೆ ಬೇರೆ ನೀತಿಯನ್ನ ಹೇಳುತ್ತೆ. ಬೇರೆ ಬೇರೆ ಅರ್ಥಗಳನ್ನ ಕೊಡತ್ತೆ. ಹಾಗೆಯೇ ನಾವು ನಮಗೆ ಗೊತ್ತಿಲ್ಲದ ಸಾಕಷ್ಟು ವಿಷಯಗಳನ್ನ ವೈಜ್ಞಾನಿಕವಾಗಿಯೂ ಕೂಡ ತಿಳಿದುಕೊಳ್ಳಬಹುದು. ಅಂಥ ಒಂದು ಅರ್ಥವತ್ತಾದ ಕಥೆಯನ್ನ ನಾವು ಹೇಳ್ತೀವಿ.

ಸ್ನೇಹಿತರೆ, ನಮಗೆಲ್ಲಾ ಗೊತ್ತು, ಜಗತ್ತನ್ನು ಬೆಳಗಿಸುವವನು ಸೂರ್ಯ. ಪ್ರಪಂಚದ ಎಲ್ಲಾ ಜೀವಿಗಳಿಗೂ ಸೂರ್ಯನೇ ಆಧಾರ. ಸೂರ್ಯನನ್ನ ಪರಬ್ರಹ್ಮ ಸ್ವರೂಪ ಎನ್ನುತ್ತಾರೆ. ಭಾನುವಾರ ಸೂರ್ಯನಿಗೆ ಶ್ರೇಷ್ಠವಾದ ದಿನ. ಭಾನು, ರವಿ ಎಂದೆಲ್ಲಾ ಕರೆಸಿಕೊಳ್ಳುವ ಸೂರ್ಯನನ್ನ ಭಾನುವಾರ ಪೂಜಿಸಿದರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇನ್ನು ಸೂರ್ಯನಿಗೆ ಮಾರ್ತಾಂಡ ಎನ್ನುವ ಹೆಸರೂ ಇದೆ. ಗೊತ್ತಾ? ಸೂರ್ಯನಿಗೆ ಈ ಹೆಸರು ಬರಲು ಕಾರಣವೇನು ? ಬನ್ನಿ ಹೇಳ್ತೀವಿ.

ಸೂರ್ಯ ದೇವ ಅದಿತಿ ಹಗೂ ಕಶ್ಯಪನ ಪುತ್ರ. ದಿತಿಯ ಮಕ್ಕಳಾದ ಅಸುರರ ಕಾಟವನ್ನ ತಾಳಲಾರದೆ ಅಧಿತಿಯು ಸೂರ್ಯದೇವನಲ್ಲಿ ನೀವು ನನ್ನ ಗರ್ಭದಲ್ಲಿ ಬಂದು ದಿತಿ ಮಕ್ಕಳ ಕಾಟದಿಂದ ಎಲ್ಲರನ್ನೂ ಉಳಿಸುವಂತೆ ಕೇಳಿಕೊಳ್ಳುತ್ತಾಳೆ. ಅದರಂತೆ ಸೂರ್ಯದೇವ ಅಧಿತಿಯ ಹೊಟ್ಟೆಯಲ್ಲಿ ಜನಿಸುತ್ತಾನೆ. ಸೂರ್ಯ ಒಂದು ಮೊಟ್ಟೆಯ ಆಕಾರದಲ್ಲಿ ಮೊದಲು ಕಾಣಿಸಿಕೊಳ್ಳುತ್ತಾನೆ. ಹಾಗಾಗಿ ಆತನನನು ಮಾರ್ತಾಂಡ ಅಂದು ಅದಿತಿ ಕರೆಯುತ್ತಾಳೆ. ಇನ್ನೂ ಕೆಲವು ಕಥೆಗಳ ಪ್ರಕಾರ ಮಗು ಹುಟ್ಟುವುದಕ್ಕೂ ಮೊದಲೇ ಅದಿತಿ ಹೊಟ್ಟೆಯಿಂದ ಅಂಡ ಅಂದರೆ ಮೊಟ್ಟೆ ಹೊರಬಂತು. ಸ್ವಲ್ಪ ಸಮಯದ ನಂತರ ಬೆಳಗುವ ಸೂರ್ಯ ಅದರಿಂದ ಹುಟ್ಟಿದ ಎಂದೂ ಹೇಳುತ್ತಾರೆ. ಕಥೆಗಳು ಏನೇ ಇರಲಿ, ಅದರೆ ಈ ಜಗತ್ತು ಬೆಳಗುತ್ತಿರುವುದೇ ಸೂರ್ಯದೇವನಿಂದ ಎನ್ನುವ ಮಾತು ಮಾತ್ರ ಸಾರ್ವಕಾಲಿಕ ಸತ್ಯ. ಏನಂತೀರಿ?