ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ಕೆಳಗಿಳಿದ ಬಳಿಕ 6 ನಾಯಕರ ಬದಲಾವಣೆ ಕುರಿತು ಮೊದಲ ಬಾರಿಗೆ ರೋಹಿತ್ ಮಾತನಾಡಿ ಹೇಳಿದ್ದೇನು ಗೊತ್ತೇ? ಯಾಕೆ ಅಂತೇ ಗೊತ್ತೇ?

129

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಮಹೇಂದ್ರ ಸಿಂಗ್ ಧೋನಿ ರವರ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಮೂರು ಫಾರ್ಮೆಟ್ ಗಳಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿ ರವರು ವಹಿಸಿಕೊಳ್ಳುತ್ತಾರೆ. ಸಖತ್ ಫಾರ್ಮ್ ನಲ್ಲಿ ಇದ್ದ ವಿರಾಟ್ ಕೊಹ್ಲಿ ರವರು 2019 ರಿಂದ ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಕಳಪೆ ಫಾರ್ಮ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇದೇ ವರ್ಷದ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ಮೂರು ಫಾರ್ಮೆಟ್ ಗಳಲ್ಲಿ ನಾಯಕನ ಸ್ಥಾನದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು 3 ಫಾರ್ಮೆಟ್ ಗಳಲ್ಲಿ ನಾಯಕನ ಸ್ಥಾನಕ್ಕೆ ನೇಮಿಸಿತ್ತು.

ರೋಹಿತ್ ಶರ್ಮಾ ರವರು ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡದ ಬಹುತೇಕ ಎಲ್ಲಾ ಸರಣಿಗಳನ್ನು ಕೂಡ ಗೆದ್ದಿದ್ದಾರೆ. ಆದರೆ ಅವರು ಇಂಜುರಿ ಹಾಗೂ ವಿಶ್ರಾಂತಿ ಕಾರಣದಿಂದಾಗಿ ತಂಡದಿಂದ ಹೊರಹೋದಾಗ ಇದುವರೆಗೂ ಒಟ್ಟಾರೆಯಾಗಿ 6 ಹೊಸ ನಾಯಕರು ತಂಡವನ್ನು ಮುನ್ನಡೆಸಿದ್ದರು. ಹೌದು ಗೆಳೆಯರೇ ಇದುವರೆಗೂ ರೋಹಿತ್ ಶರ್ಮ ರವರನ್ನು ಹೊರತುಪಡಿಸಿ ರಿಷಬ್ ಪಂತ್ ಹಾರ್ದಿಕ್ ಪಾಂಡ್ಯ ಕೆ ಎಲ್ ರಾಹುಲ್ ಹಾಗೂ ಅಭ್ಯಾಸ ಪಂದ್ಯಕ್ಕೆ ದಿನೇಶ್ ಕಾರ್ತಿಕ್ ಹಾಗೂ ಕಳೆದ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರು ಕೂಡ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಸಂದರ್ಶಕರು ಭಾರತೀಯ ಕ್ರಿಕೆಟ್ ತಂಡದಲ್ಲಿ ನಾಯಕತ್ವದ ಬದಲಾವಣೆ ಸಾಕಷ್ಟು ಬಾರಿ ನಡೆದಿದೆಯಲ್ಲ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬುದಾಗಿ ರೋಹಿತ್ ಶರ್ಮಾ ರವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ.

ಇದಕ್ಕೆ ಕಡಕ್ ಉತ್ತರವನ್ನು ನೀಡಿರುವ ರೋಹಿತ್ ಶರ್ಮಾ ನೀವಂದುಕೊಂಡಂತೆ ಏನಿಲ್ಲ ನಾವು ಹಲವಾರು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ನಮಗೆ ನಮ್ಮ ಶೆಡ್ಯೂಲ್ ಕುರಿತಂತೆ ತಿಳಿದಿದೆ ಹೀಗಾಗಿ ಮುಂದೆಯೂ ಕೂಡ ಇದೇ ರೀತಿಯ ಹೊಸ ಪ್ರಯತ್ನಗಳು ಮುಂದುವರೆಯಲಿದೆ. ಈಗಾಗಲೇ ಈ ಪ್ರಯತ್ನದಲ್ಲಿ ನಾವು ಹಲವಾರು ಆಟಗಾರರಿಗೆ ಅವಕಾಶವನ್ನು ನೀಡಿದ್ದೇವೆ ಹಾಗೂ ನಮ್ಮ ಬೆಂಚ್ ಸ್ಟ್ರೆಂಗ್ತ್ ಅನು ಪರೀಕ್ಷಿಸುತ್ತಿದ್ದೆವು ಎಂಬುದಾಗಿ ರೋಹಿತ್ ಶರ್ಮಾ ರವರು ಪ್ರತಿಕ್ರಿಯೆ ನೀಡಿದ್ದಾರೆ.

Get real time updates directly on you device, subscribe now.