ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮೊದಲ ಟಿ 20 ಪಂದ್ಯದಲ್ಲಿ ದಿನೇಶ್ ರವರ ವಿಚಾರದಲ್ಲಿ ರೋಹಿತ್ ರವರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು. ರೋಹಿತ್ ಈಗ್ಯಾಕೆ ಮಾಡಿದ್ರು??

ಮೊದಲ ಟಿ 20 ಪಂದ್ಯದಲ್ಲಿ ದಿನೇಶ್ ರವರ ವಿಚಾರದಲ್ಲಿ ರೋಹಿತ್ ರವರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು. ರೋಹಿತ್ ಈಗ್ಯಾಕೆ ಮಾಡಿದ್ರು??

1,889

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಸೋತಿರಬಹುದು ನಿಜ ಆದರೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಮೊದಲ ಪಂದ್ಯದ ಗೆಲುವಿನೊಂದಿಗೆ ಆರಂಭಿಸಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ದೊಡ್ಡಮಟ್ಟದ ಸಂತೋಷವನ್ನು ತಂದಿದೆ. ಹೌದು ಗೆಳೆಯರೇ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಅಧಿಕಾರಯುತವಾಗಿ ಗೆದ್ದು ಬೀಗಿದೆ ಎಂದು ಹೇಳಬಹುದಾಗಿದೆ.

Follow us on Google News

ಅತಿಥೇಯರ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಈ ಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವನ್ನು ತಂದಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡ 8 ವಿಕೆಟ್ ನಷ್ಟಕ್ಕೆ 198 ರನ್ನುಗಳನ್ನು ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕ್ರಿಕೆಟ್ ತಂಡ ಕೇವಲ 148 ರನ್ನುಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡ ಬರೋಬ್ಬರಿ 50 ರನ್ನುಗಳ ಗೆಲುವನ್ನು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ರವರು ನಾಯಕನಾಗಿ ತೆಗೆದುಕೊಂಡ ಒಂದು ನಿರ್ಧಾರದ ಕುರಿತಂತೆ ಕ್ರಿಕೆಟ್ ಅಭಿಮಾನಿಗಳು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೇ ಭಾರತ ತಂಡದ ಸದ್ಯದ ಮಟ್ಟಿಗೆ ಫಾರ್ಮ್ ನಲ್ಲಿರುವ ಆಟಗಾರ ಆಗಿರುವ ದಿನೇಶ್ ಕಾರ್ತಿಕ್ ರವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಲಾಗಿತ್ತು. ಹಾಗೂ ಅಕ್ಷರ ಪಟೇಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳುಹಿಸಲಾಗಿತ್ತು. ಒಂದು ವೇಳೆ ದಿನೇಶ್ ಕಾರ್ತಿಕ್ ರವರನ್ನು ಮೊದಲೇ ಕಳುಹಿಸಿದ್ದರೆ ಖಂಡಿತವಾಗಿ ತಂಡದ ಮೊತ್ತವನ್ನು 200 ರನ್ನುಗಳ ಮೇಲೆ ಸೇರಿಸುತ್ತಿದ್ದರು ಎಂಬುದಾಗಿ ನೆಟ್ಟಿಗರು ರೋಹಿತ್ ಶರ್ಮ ರವರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.