ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ, ಮತ್ತೊಮ್ಮೆ ಅಡುಗೆ ಎಣ್ಣೆಯ ಬೆಳೆಯನ್ನು ಕಡಿಮೆ ಮಾಡಲು ಆದೇಶ ಹೊರಡಿಸಿದ ಕೇಂದ್ರ, ಈ ಬಾರಿ ಎಷ್ಟು ರೂಪಾಯಿ ಗೊತ್ತೇ?

144

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಹಾರ ಸಚಿವಾಲಯವು ಇತ್ತೀಚಿಗಷ್ಟೇ ಹಮ್ಮಿಕೊಂಡಿದ್ದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಿಂದ ಅಡುಗೆ ಟೈಲುಗಳ ಮೇಲೆ ಪ್ರತಿನಿತ್ಯ ಇಪ್ಪತ್ತು ರೂಪಾಯಿಗಳ ಕಡಿತ ಕಂಡುಬಂದಿದೆ ಎಂಬುದಾಗಿ ತಿಳಿದುಬಂದಿದೆ. ಇದು ಖಂಡಿತವಾಗಿ ಸಾಮಾನ್ಯ ಗ್ರಾಹಕರಿಗೆ ಸಂತೋಷದ ಸುದ್ದಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ಸಂದರ್ಭಗಳಲ್ಲಿ ಅಡುಗೆ ತೈಲಗಳ ಬೆಲೆಯನ್ನು ಏರಿಸಲಾಗಿತ್ತು..

Follow us on Google News

ಇದು ಸಾಮಾನ್ಯ ಕುಟುಂಬದ ಗ್ರಾಹಕರಿಗೆ ಸಾಕಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ ಹೀಗಾಗಿ ಜನರ ಪರಿಸ್ಥಿತಿಯನ್ನು ಅರಿತುಕೊಂಡಿರುವ ಸರ್ಕಾರ ಸರ್ಕಾರದ ಪರವಾಗಿ ಆಮದು ಹಾಗೂ ಉತ್ಪಾದನೆ ಮಾಡುವ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಸಭೆಯನ್ನು ನಡೆಸಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಗ್ರಾಹಕರಿಗೆ ಬೆಲೆಯನ್ನು ಕಡಿಮೆ ದರದಲ್ಲಿ ನೀಡುವ ನಿರ್ಧಾರವನ್ನು ಅಂತಿಮಗೊಳಿಸಲಾಗಿದೆ. ಈ ಪ್ರಕಾರ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆಯಲ್ಲಿ ಸರಾಸರಿ 20 ರೂಪಾಯಿಗಳ ಬೆಲೆ ಇಳಿಕೆ ಖಂಡಿತವಾಗಿ ಕಂಡುಬರಲಿದೆ ಎಂಬುದಾಗಿ ಆಹಾರ ಇಲಾಖೆಯಿಂದ ತಿಳಿದುಬಂದಿದೆ.

ಕೇವಲ ಬೆಲೆ ಇಳಿಕೆಯ ಗೋಷಣೆ ಮಾತ್ರವಲ್ಲದೆ ಎಂಆರ್ಪಿ ನಲ್ಲಿ ಕೂಡ ಬೆಲೆಇಳಿಕೆ ಯನ್ನು ನಮೂದಿಸುವಂತೆ ಸರ್ಕಾರ ಈಗಾಗಲೇ ಘೋಷಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ತೈಲದ ಬೆಲೆ $400 ಗಳಷ್ಟು ಕುಸಿದಿದೆ. ಹೀಗಾಗಿ ಈ ಕೊರತೆಯ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಆಶಯವನ್ನು ವ್ಯಕ್ತಪಡಿಸಿದ್ದು ಪ್ರತಿ ಲೀಟರ್ ಗೆ 20 ರೂಪಾಯಿಗಳಷ್ಟು ಕಡಿಮೆ ಮಾಡಿದರೆ ಜನರಿಗೆ ಕೊಂಚಮಟ್ಟಿಗೆ ನಿರಾಳತೆ ಸಿಗಬಹುದು ಎನ್ನುವ ಆಶಯ ಸರ್ಕಾರದ್ದಾಗಿದೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದಾಗಿದೆ.