ಮತ್ತೊಂದು ದಾಖಲೆ ಬರೆದ ಭಾರತ ಸ್ವಿಂಗ್ ಕಿಂಗ್ ಭುವಿ, ವಿಶ್ವದಲ್ಲಿಯೇ ಮೊದಲ ಬಾರಿಗೆ ಸೃಷ್ಟಿಸಿದ ದಾಖಲೆ ಏನು ಗೊತ್ತೇ??
ಮತ್ತೊಂದು ದಾಖಲೆ ಬರೆದ ಭಾರತ ಸ್ವಿಂಗ್ ಕಿಂಗ್ ಭುವಿ, ವಿಶ್ವದಲ್ಲಿಯೇ ಮೊದಲ ಬಾರಿಗೆ ಸೃಷ್ಟಿಸಿದ ದಾಖಲೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಸರಣಿಯನ್ನು ಜಯಿಸಿ ಈಗಾಗಲೇ ದೊಡ್ಡಮಟ್ಟದ ಗೆಲುವಿನ ಕೇಕೆಯನ್ನು ಹಾಕುತ್ತಿದೆ. ಭಾರತ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಕ್ರಿಕೆಟಿಗರಲ್ಲಿ ಭುವನೇಶ್ವರ್ ಕುಮಾರ್ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಇತ್ತೀಚಿಗೆ ನಡೆದ ಕೆಲವೊಂದು ಸರಣಿಗಳಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಲು ಭುವನೇಶ್ವರ್ ಕುಮಾರ್ ವಿಫಲರಾಗಿದ್ದರು ಕೂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿಜಕ್ಕೂ ಕೂಡ ತಮ್ಮ ನೈಜವಾದ ಪ್ರದರ್ಶನವನ್ನು ನೀಡುವ ಮೂಲಕ ತಮ್ಮ ಕಂಬ್ಯಾಕ್ ಅನ್ನು ಘೋಷಿಸಿದ್ದಾರೆ.
ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಟಿ-20ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಫಾರ್ಮಿಗೆ ವಾಪಾಸು ಮರಳಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಸದ್ಯಕ್ಕೆ ಇಂಗ್ಲೆಂಡ್ ತಂಡದ ಘಟಾನುಘಟಿ ಬ್ಯಾಟ್ಸ್ಮನ್ ಗಳನ್ನು ಮಂಕಾಗಿ ಕುಳಿತುಕೊಳ್ಳುವಂತೆ ಮಾಡಿದ ಮ್ಯಾಜಿಕ್ ಭುವನೇಶ್ವರ್ ಕುಮಾರ್ ಅವರದು ಎಂದರೆ ತಪ್ಪಾಗಲಾರದು. ಎರಡು ಕಡೆಗಳಲ್ಲಿ ಸ್ವಿಂಗ್ ಮಾಡುವ ಚಾತುರ್ಯತೆ ಹೊಂದಿರುವ ಭುವನೇಶ್ವರ್ ಕುಮಾರ್ ಈಗಾಗಲೇ ವಿದೇಶಿ ಬ್ಯಾಟ್ಸ್ಮನ್ಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದಾರೆ. ಈ ಸಂದರ್ಭದಲ್ಲಿಯೇ ಭುವನೇಶ್ವರ್ ಕುಮಾರ್ ಇನ್ನೊಂದು ವಿಶ್ವದಾಖಲೆಯನ್ನು ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು ಗೆಳೆಯರೇ ಭುವನೇಶ್ವರ್ ಕುಮಾರ್ ರವರು ಟಿ-ಟ್ವೆಂಟಿ ಕ್ರಿಕೆಟ್ನಲ್ಲಿ ಪವರ್ ಪ್ಲೇ ಓವರ್ ನಲ್ಲಿ 500 ಬಾಲ್ ಎಸೆತವನ್ನು ದಾಖಲಿಸಿರುವ ಮೊದಲ ವಿಶ್ವದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟಿಮ್ ಸೌಥಿ ಹಾಗೂ ಸ್ಯಾಮುವೆಲ್ ಬದ್ರಿ 383 ಎಸೆತಗಳನ್ನು ದಾಖಲಿಸುವ ಮೂಲಕ ಭುವನೇಶ್ವರ್ ಕುಮಾರ್ ಅವರ ನಂತರದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಭುವನೇಶ್ವರ್ ಕುಮಾರ್ ಅವರು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ.