ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕೊಹ್ಲಿ ರವರನ್ನು ತೆಗೆದುಹಾಕಿ ಎಂದ ತಮ್ಮನ್ನು ತಾವು ತಜ್ಞರು ಎಂದು ಕೊಳ್ಳುವವರಿಗೆ ಖಡಕ್ ಆಗಿ ರೋಹಿತ್ ಹೇಳಿದ್ದೇನು ಗೊತ್ತೇ??

895

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2019 ರಿಂದ ವಿರಾಟ್ ಕೊಹ್ಲಿ ರವರು ಯಾವುದೇ ಶತಕಗಳನ್ನು ಯಾವುದೇ ಮಾದರಿಯ ಕ್ರಿಕೆಟ್ ಫಾರ್ಮೆಟ್ ಗಳಲ್ಲಿ ಇದುವರೆಗೂ ದಾಖಲಿಸಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ಐಪಿಎಲ್ ನಲ್ಲಿ ಕೂಡ ನಾಯಕತ್ವದಿಂದ ಕೆಳಗಿಳಿದಿದ್ದರು ಯಾವುದೇ ಅತ್ಯುತ್ತಮ ಪ್ರದರ್ಶನ ಅವರಿಂದ ಕಂಡುಬಂದಿಲ್ಲ. ಸದ್ಯ ಮುಗಿದಿರುವ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಕೂಡ ವಿರಾಟ್ ಕೊಹ್ಲಿ ರವರು ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅವರು ಅವರ ಹೆಸರಿಗೆ ತಕ್ಕಂತೆ ಆಡುತ್ತಿಲ್ಲ ಎಂಬುದಂತೂ ಸತ್ಯ.

ಇನ್ನು ವಿರಾಟ್ ಕೊಹ್ಲಿ ರವರ ಈ ಕಳಪೆ ಫಾರ್ಮ್ ಕುರಿತಂತೆ ಕ್ರಿಕೆಟ್ ತಜ್ಞರು ಮೊದಲಿನಿಂದಲೂ ಕೂಡ ಟೀಕಾಪ್ರಹಾರವನ್ನು ಮಾಡುತ್ತಿರುವುದು ನಿಮಗೆಲ್ಲ ತಿಳಿದಿದೆ. ಈ ಕುರಿತಂತೆ ಪ್ರೆಸ್ಮೀಟ್ ಸಂದರ್ಭದಲ್ಲಿ ರೋಹಿತ್ ಶರ್ಮಾ ರವರಿಗೆ ಬಂದಂತಹ ಪ್ರಶ್ನೆಯ ಸಂದರ್ಭದಲ್ಲಿ ಕೂಡ ಖಡಕ್ ಆಗಿ ಅಂತಹ ಸೋ ಕಾಲ್ಡ್ ಕ್ರಿಕೆಟ್ ತಜ್ಞರಿಗೆ ಬಿಸಿ ಮುಟ್ಟಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಹಿನ್ನಲೆಯಲ್ಲಿ ಅವರನ್ನು ತಂಡದಿಂದ ತೆಗೆದುಹಾಕಿ ಎಂದು ಕ್ರಿಕೆಟ್ ತಜ್ಞರು ಹೇಳುತ್ತಿರುವ ಸವಾಲಿಗೆ ರೋಹಿತ್ ಶರ್ಮಾ ರವರು ನೀಡಿರುವ ಉತ್ತರ ಈಗ ಪ್ರತಿಯೊಬ್ಬರನ್ನು ಆಶ್ಚರ್ಯಕ್ಕೆ ತಳ್ಳಿದೆ.

ಈ ಕುರಿತಂತೆ ಮಾತನಾಡುತ್ತಾ ರೋಹಿತ್ ಶರ್ಮಾ ರವರು ಅವರನ್ನು ತಜ್ಞರು ಎಂಬುದಾಗಿ ಯಾರು ಕರೆಯುತ್ತಾರೋ ನನಗೆ ತಿಳಿಯುತ್ತಿಲ್ಲ. ತಂಡದ ಒಳಗೆ ಏನು ನಡೆಯುತ್ತಿದೆ ಏನು ನಡೆಯಬೇಕು ಎನ್ನುವುದು ನಮಗೆ ತಿಳಿದಿದೆ ಅವರು ಸದ್ಯಕ್ಕೆ ಫಾರ್ಮ್ ನಲ್ಲಿ ಇಲ್ಲದೆ ಇರಬಹುದು ಪ್ರತಿಯೊಬ್ಬರ ಕರಿಯರ್ ನಲ್ಲಿ ಇಂತಹ ಏರುಪೇರು ಕಂಡುಬರುತ್ತದೆ ಹಾಗೆಂದ ಮಾತ್ರಕ್ಕೆ ಅಂತಹ ಕ್ವಾಲಿಟಿ ಹೊಂದಿರುವ ಆಟಗಾರನನ್ನು ತಂಡದಿಂದ ಕೈಬಿಡುವುದು ಮೂರ್ಖತನ. ಅವರ ಮಹತ್ವ ಏನು ಎಂಬುದು ನಮಗೆ ತಿಳಿದಿದೆ ಅವರ ಕ್ವಾಲಿಟಿ ತಂಡಕ್ಕೆ ಪ್ರಮುಖವಾಗಿದೆ. ಅವರಿಗೆ ಅವಕಾಶವನ್ನು ನೀಡಿದಾಗ ಮಾತ್ರ ಅತ್ಯುತ್ತಮ ತಂಡವನ್ನು ಕಟ್ಟಲು ಸಾಧ್ಯ ಎಂಬುದಾಗಿ ರೋಹಿತ್ ಶರ್ಮ ಹೇಳಿದ್ದಾರೆ.

Get real time updates directly on you device, subscribe now.