ಈ ಬಾರಿಯ ಸ್ವಾತಂತ್ರ ದಿನಾಚರಣೆಗೆ ವಿಶೇಷ ಪಂದ್ಯ ಆಯೋಜಿಸಲು ಬಿಸಿಸಿಐ ಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ. ಬಿಸಿಸಿಐ ಒಪ್ಪಿಕೊಂಡರೆ ಹೇಗಿರಲಿದೆ ಗೊತ್ತೇ ಪಂದ್ಯ??
ಈ ಬಾರಿಯ ಸ್ವಾತಂತ್ರ ದಿನಾಚರಣೆಗೆ ವಿಶೇಷ ಪಂದ್ಯ ಆಯೋಜಿಸಲು ಬಿಸಿಸಿಐ ಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ. ಬಿಸಿಸಿಐ ಒಪ್ಪಿಕೊಂಡರೆ ಹೇಗಿರಲಿದೆ ಗೊತ್ತೇ ಪಂದ್ಯ??
ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ವಿಶ್ವ ಕ್ರಿಕೆಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಸರ್ವ ಶಕ್ತವಾಗಿದೆ ಎಂದರೆ ತಪ್ಪಾಗಲಾರದು. ಸದ್ಯ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಗೆದ್ದುಕೊಂಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಹಲವಾರು ಸರಣಿಗಳನ್ನು ಸತತವಾಗಿ ಗೆಲ್ಲುತ್ತಿದ್ದು ಕಳೆದ ವರ್ಷ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಅಕ್ಟೋಬರ್ ಹಾಗೂ ನವೇಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಕಪ್ ಅನ್ನು ಗೆಲ್ಲಲೇ ಬೇಕೆನ್ನುವ ಛಲವನ್ನು ಹೊಂದಿದೆ.
ಹೌದು ಸ್ನೇಹಿತರೇ ಇದಕ್ಕಾಗಿ ಹಲವಾರು ಬದಲಾವಣೆಗಳನ್ನು ಹಾಗೂ ಹೊಸ ಹೊಸ ಆಟಗಾರರನ್ನು ಪ್ರಯತ್ನಿಸುತ್ತಿದ್ದರೂ ಕೂಡ ಪ್ರತಿಯೊಂದು ಪ್ರಯತ್ನವೂ ಕೂಡ ಇದೇ ವಿಚಾರದ ಹಿನ್ನಲೆಯಲ್ಲಿ ನಡೆಯುತ್ತಿದೆ. ಇನ್ನು ಇದೇ ವರ್ಷ ಭಾರತ ದೇಶ ಸ್ವಾತಂತ್ರ್ಯ ವನ್ನು ಪಡೆದು 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ್ ಮಹೋತ್ಸವ್ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಒಂದು ಭಾಗವಾಗಿ ಕ್ರಿಕೆಟ್ ಪಂದ್ಯಾಟವನ್ನು ಆಡಿಸುವ ಪ್ರಪೋಸಲ್ ಅನ್ನು ಕೂಡ ಬಿಸಿಸಿಐ ಮುಂದಿಟ್ಟಿದೆ.
ಹೌದು ಭಾರತೀಯ ದಿಗ್ಗಜ ಆಟಗಾರರು ವಿಶ್ವದ ಶ್ರೇಷ್ಠ ಕ್ರಿಕೇಟಿಗರ ವಿರುದ್ಧ ಈ ಪಂದ್ಯಾಟವನ್ನು ಆಡಲಿದ್ದಾರೆ. ಅಂದರೆ ಇಂಡಿಯಾ 11 ವಿರುದ್ಧ ವರ್ಲ್ಡ್ 11 ಆಡಲಿದೆ. ಇದರ ಕುರಿತಂತೆ ಆಟಗಾರರ ಲಭ್ಯತೆಯ ದೃಷ್ಟಿಯಲ್ಲಿರಿಸಿಕೊಂಡು ಆಗಸ್ಟ್ 22ರಂದು ಈ ಕ್ರಿಕೆಟ್ ಪಂದ್ಯಾಟವನ್ನು ನಡೆಸುವ ಪೀಠಿಕೆಯನ್ನು ಬಿಸಿಸಿಐ ಮುಂದೆ ಕೇಂದ್ರ ಸರ್ಕಾರ ಇಟ್ಟಿದ್ದೆ ಎಂಬುದಾಗಿ ತಿಳಿದುಬಂದಿದೆ. ಈ ಕ್ರಿಕೆಟ್ ಪಂದ್ಯಾಟ ನಡೆಯುವ ವಿಧಾನವನ್ನು ಕೇಳಿರುವ ಪ್ರತಿಯೊಬ್ಬರು ಕೂಡ ಇದು ನಡೆಯಲಿ ಎಂಬುದಾಗಿ ಆಶಿಸುತ್ತಿದ್ದಾರೆ.