ವಿಶ್ವ ಜನಸಂಖ್ಯಾ ದಿನಾಚರಣೆಯ ದಿನ ಖಡಕ್ ಭಾಷಣ ಮಾಡಿದ ಯೋಗಿ, ಒಂದು ವರ್ಗದ ಜನಸಂಖ್ಯೆಯ ಕುರಿತು ಮಾತನಾಡಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಸದ್ಯಕ್ಕೆ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಅತ್ಯಂತ ಜನಪ್ರಿಯ ರಾಜಕೀಯ ನಾಯಕರು ಎಂದರೆ ನಿಜಕ್ಕೂ ಕೂಡ ಕೇಳಿ ಬರುವ ಒಂದೇ ಒಂದು ಹೆಸರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.
ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜನರ ಹಿತಾಸಕ್ತಿಯ ದೃಷ್ಟಿಯಲ್ಲಿ ಜಾರಿಗೆ ತಂದು ಈಗಾಗಲೇ ಯಶಸ್ವಿಯಾಗಿದ್ದಾರೆ.

ಭಾರತ ದೇಶದಲ್ಲಿ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಹಲವಾರು ಸಕಾರಾತ್ಮಕ ಬೆಳವಣಿಗೆ ನಾಂದಿ ಹಾಡಲು ಪ್ರಮುಖ ಬುನಾದಿ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚೆಗಷ್ಟೇ ಅವರು ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ಒಂದು ದೊಡ್ಡ ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. ಹೌದು ಗೆಳೆಯರೆ ಜನಸಂಖ್ಯಾ ನಿಯಂತ್ರಣ ಮಾತ್ರವಲ್ಲದೆ ಜನಸಂಖ್ಯಾ ಸಮತೋಲನ ಕೂಡ ಪ್ರಮುಖವಾಗಿ ಇರಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ಯಾವುದೋ ಒಂದೇ ವರ್ಗದ ಜನಸಂಖ್ಯೆಯ ಹೆಚ್ಚಳ ನಿಜಕ್ಕೂ ಕೂಡ ಸಮಾಜದ ಸಮತೋಲನವನ್ನು ತಪ್ಪಿಸುತ್ತದೆ ಎಂಬುದಾಗಿ ಯೋಗಿ ಆದಿತ್ಯನಾಥ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಯಾವುದೇ ವರ್ಗದ ಜನಸಂಖ್ಯೆ ಶೇಕಡಾವಾರು ಹೆಚ್ಚಾಗಬಾರದು ಎಂಬುದಾಗಿ ಹೇಳಿದ್ದಾರೆ. ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಯಾವುದೋ ಒಂದು ವರ್ಗದ ಜನಸಂಖ್ಯೆಯ ಹೆಚ್ಚು ಆಗಿ ಸಮತೋಲನ ತಪ್ಪುವುದು ದೇಶದ ಅರಾಜಕತೆಗೆ ಕಾರಣವಾಗುತ್ತದೆ ಎಂಬುದಾಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಎರಡು ಮಕ್ಕಳ ಜನನದ ನಡುವಿನ ಮಧ್ಯಂತರ ಕಡಿಮೆ ಆದರೆ ತಾಯಿ ಹಾಗೂ ಮಗುವಿನ ಮರಣದ ಸಂಖ್ಯೆ ಹೆಚ್ಚಾಗುತ್ತಿದೆ ಇದನ್ನು ಸರಿಪಡಿಸಲು ಹಾಗೂ ಸಮಾಜವನ್ನು ಉತ್ತಮ ದಿಕ್ಕಿನತ್ತ ತೆಗೆದುಕೊಂಡು ಹೋಗಲು ಧಾರ್ಮಿಕ ಮುಖಂಡರು ತಮ್ಮ ವರ್ಗದ ಜನರಿಗೆ ಜನಸಂಖ್ಯಾ ಸಮತೋಲನಕ್ಕೆ ಪ್ರೇರೇಪಿಸಬೇಕು ಎಂಬುದಾಗಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ ರವರ ಈ ಹೇಳಿಕೆ ಹೊರತಂದ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.