ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿನ್ನೆಯ ಪಂದ್ಯದಲ್ಲಿ ವಿರಾಟ್ ಹೊರಗುಳಿಯಲು ಅಸಲಿ ಕಾರಣ ತಿಳಿಸಿದ ನಾಯಕ ರೋಹಿತ್ ಶರ್ಮ. ಏನು ಗೊತ್ತೇ?

810

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟಿ-ಟ್ವೆಂಟಿ ಸರಣಿಯನ್ನು ಗೆದ್ದುಕೊಂಡಿರುವ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಈಗ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಾಟವನ್ನು ಕೂಡ ಅಧಿಕಾರಯುತವಾಗಿ ಗೆದ್ದುಕೊಂಡಿದೆ. ತವರು ನೆಲದಲ್ಲಿ ಮಾತ್ರ ಅಬ್ಬರಿಸುವ ತಂಡ ಭಾರತೀಯ ಕ್ರಿಕೆಟ್ ತಂಡ ಎಂದು ಹೇಳುತ್ತಿದ್ದ ವರಿಗೆ ರೋಹಿತ್ ಶರ್ಮಾ ನೇತೃತ್ವದ ಯಂಗ್ ಟೀಮ್ ಇಂಡಿಯಾ ಮುಖಕ್ಕೆ ಹೊಡೆದಂತೆ ಉತ್ತರವನ್ನು ನೀಡಿದೆ ಎಂದರೆ ತಪ್ಪಾಗಲಾರದು.

ಈಗ ಮೊದಲ ಏಕದಿನ ಪಂದ್ಯವನ್ನು ಕೂಡ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿದ್ದು ಜಸ್ಪ್ರೀತ್ ಬುಮ್ರಾ ರವರ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ ಕೇವಲ 110 ರನ್ನುಗಳಿಗೆ ಆಲೌಟ್ ಆಗಿತ್ತು. ಜಸ್ಪ್ರೀತ್ ಬುಮ್ರಾ ಕೇವಲ 19 ರನ್ನುಗಳನ್ನು ನೀಡಿ ಬರೋಬ್ಬರಿ ಆರು ವಿಕೆಟ್ ಗಳನ್ನು ಕಬಳಿಸಿದರು. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಅನಾಯಾಸವಾಗಿ ರೋಹಿತ್ ಶರ್ಮ 75 ರನ್ನುಗಳು ಹಾಗೂ ಶಿಖರ್ ಧವನ್ 31 ರನ್ನುಗಳನ್ನು ಬಾರಿಸುವ ಮೂಲಕ ಯಾವುದೇ ವಿಕೆಟ್ ಕಳೆದುಕೊಳ್ಳದೆ ವಿಜಯವನ್ನು ಸಾಧಿಸಿದ್ದಾರೆ. ಇನ್ನು ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು ತಂಡದಲ್ಲಿ ಇರಲಿಲ್ಲ ಇದಕ್ಕೆ ಸ್ವತಃ ನಾಯಕ ರೋಹಿತ್ ಶರ್ಮಾ ರವರೇ ಉತ್ತರವನ್ನು ನೀಡಿದ್ದಾರೆ.

ಹೌದು ಗೆಳೆಯರೇ ರೋಹಿತ್ ಶರ್ಮಾ ರವರು ಟಾಸ್ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರು ತೊಡೆಸಂದು ಇಂಜುರಿಯ ಕಾರಣದಿಂದಾಗಿ ಮೊದಲ ಪಂದ್ಯವನ್ನು ಮಾಡಿಕೊಳ್ಳಲಿದ್ದಾರೆ ಎಂಬುದಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಅಭಿಮಾನಿಗಳು ಆದಷ್ಟು ಬೇಗ ವಿರಾಟ್ ಕೊಹ್ಲಿ ರವರು ಇಂಜುರಿ ಯಿಂದ ಹೊರಬಂದು ಮತ್ತೆ ತಮ್ಮ ಅಸಲಿ ಫಾರ್ಮ್ ಗೆ ಮರಳಿ ಎಂಬುದಾಗಿ ಆಶಿಸುತ್ತಿದ್ದಾರೆ.

Get real time updates directly on you device, subscribe now.