ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿರುವ ಕೆ ಎಲ್ ರಾಹುಲ್ ರವರ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ. ಏನು ಗೊತ್ತೇ?

ಪದೇ ಪದೇ ಸಂಕಷ್ಟಕ್ಕೆ ಸಿಲುಕುತ್ತಿರುವ ಕೆ ಎಲ್ ರಾಹುಲ್ ರವರ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಎಲ್ಲವೂ ಸರಿಯಾಗಿದ್ದರೆ ಭಾರತದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳ ಸರಣಿಯ ನಾಯಕನಾಗಿ ನಮ್ಮ ಕನ್ನಡಿಗ ಕೆಎಲ್ ರಾಹುಲ್ ರವರು ಕಾಣಿಸಿಕೊಳ್ಳಬೇಕಾಗಿತ್ತು ಆದರೆ ಅವರ ಇಂಜುರಿಯ ಕಾರಣದಿಂದಾಗಿ ಅವರು ಸರಣಿಯಿಂದ ಹೊರಬರಬೇಕಾಯಿತು. ಕೇವಲ ಇಷ್ಟು ಮಾತ್ರವಲ್ಲದೆ ಇದುವರೆಗೂ ನಡೆದಿರುವ ಐರ್ಲೆಂಡ್ ಸರಣಿಯಿಂದ ಹಿಡಿದು ಇಂಗ್ಲೆಂಡ್ ಟೆಸ್ಟ್ ಹಾಗೂ ಟಿ-ಟ್ವೆಂಟಿ ಸರಣಿಯ ತನಕವು ಕೂಡ ಕೆ ಎಲ್ ರಾಹುಲ್ ರವರು ಇಂಜುರಿಯ ಕಾರಣದಿಂದಾಗಿ ತಂಡದ ಹೊರಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕೆಎಲ್ ರಾಹುಲ್ ರವರು ಪದೇ ಪದೇ ಎದುರಿಗೆ ಒಳಗಾಗುತ್ತಿರುವುದು ನಿಜಕ್ಕೂ ಕೂಡ ಮುಂದಿನ ದಿನಗಳಲ್ಲಿ ಅವರ ಕರಿಯರ್ ಗೆ ದೊಡ್ಡಮಟ್ಟದ ಸಂಕಷ್ಟವನ್ನು ತಂದಿಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಪ್ರಮುಖ ಟೂರ್ನಮೆಂಟ್ ಆಗಿರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಕೆ ಎಲ್ ರಾಹುಲ್ ರವರ ಉಪನಾಯಕನ ಸ್ಥಾನ ಖಾಯಂ ಆಗಿದ್ದರೂ ಕೂಡ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ಸ್ಥಾನಕ್ಕೆ ಸಾಕಷ್ಟು ಪೈಪೋಟಿಗಳು ಕೂಡ ಸಮರ್ಥ ಮಟ್ಟದಲ್ಲಿ ಎದ್ದುಕಾಣುತ್ತಿದೆ. ಇದರ ಕುರಿತಂತೆ ಮಾಜಿ ಭಾರತೀಯ ಆಟಗಾರ ಆಗಿರುವ ಕನ್ನಡದ ಮೂಲದ ದೊಡ್ಡಗಣೇಶ್ ಪ್ರತಿಕ್ರಿಸಿದ್ದಾರೆ.

ಕೆ ಎಲ್ ರಾಹುಲ್ ಅವರ ಸ್ಥಾನಕ್ಕೆ ಸೂರ್ಯ ಕುಮಾರ್ ಯಾದವ್ ಹಾಗೂ ದೀಪಕ್ ಹೂಡ ಸಮರ್ಥ ಮಟ್ಟದ ಪೈಪೋಟಿಯನ್ನು ನೀಡುತ್ತಿದ್ದಾರೆ ಹೀಗಾಗಿ ಕೆ ಎಲ್ ರಾಹುಲ್ ರವರು 2016 ಹಾಗೂ 17 ರಲ್ಲಿ ತೋರ್ಪಡಿಸುತ್ತಿದ್ದರು ಪ್ರದರ್ಶನವನ್ನು ಈಗ ಮತ್ತೊಮ್ಮೆ ತೋರಿಸಬೇಕಾಗಿದೆ ಹಾಗೂ ಐಪಿಎಲ್ ನಲ್ಲಿ ನೀಡಿರುವ ಸ್ಥಿರ ಪ್ರದರ್ಶನವನ್ನು ಮತ್ತೆ ಒಂದು ವರ್ಷ ಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನವನ್ನು ಪಡೆಯಲು ಪರದಾಡಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ದೊಡ್ಡ ಗಣೇಶ ರವರ ಹೇಳಿಕೆ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಅಭಿವ್ಯಕ್ತಪಡಿಸಿ.