ಲಾಲ್ ಸಿಂಗ್ ಚಡ್ಡಾ ಮಕಾಡಿ ಮಲಗಿದ ಬೆನ್ನಲ್ಲೇ ಅಮೀರ್ ಖಾನ್ ರವರಿಗೆ ಮತ್ತೊಂದು ಶಾಕ್. ಮುಗಿಯಿತೆ ಅಮೀರ್ ಖಾನ್ ಸಿನಿ ಜೀವನ??
ಲಾಲ್ ಸಿಂಗ್ ಚಡ್ಡಾ ಮಕಾಡಿ ಮಲಗಿದ ಬೆನ್ನಲ್ಲೇ ಅಮೀರ್ ಖಾನ್ ರವರಿಗೆ ಮತ್ತೊಂದು ಶಾಕ್. ಮುಗಿಯಿತೆ ಅಮೀರ್ ಖಾನ್ ಸಿನಿ ಜೀವನ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಮೀರ್ ಖಾನ್ ರವರು ಒಂದು ಕಡೆ ಬಾಲಿವುಡ್ ನಲ್ಲಿ ನಟರಾಗಿ ಹೆಸರು ಮಾಡಿದರೆ ಮತ್ತೊಂದು ಕಡೆ ವಿವಾದಗಳ ಮೂಲಕ ಸುದ್ದಿಯಲ್ಲಿ ಇದ್ದ ನಟನಾಗಿದ್ದರು. ಅದರಲ್ಲಿಯೂ ದೇಶದ ಕುರಿತಂತೆ ಹಲವಾರು ಬಾರಿ ಅನಗತ್ಯ ಹೇಳಿಕೆಗಳನ್ನು ನೀಡಿ ಹಾಗೂ ವಿವಿಧ ವಿಚಾರಗಳಲ್ಲಿ ದೇಶದ ಬಗ್ಗೆ ಪರೋಕ್ಷವಾಗಿ ಅಗೌರವ ತೋರಿಸಿ ದೇಶಭಕ್ತರನ್ನು ಕೆಣಕಿದ ವಿಚಾರ ಎಲ್ಲರಿಗೂ ತಿಳಿದಿದೆ.
ಲಾಲ್ ಸಿಂಗ್ ಚಡ್ಡಾದಲ್ಲಿಯೂ ಕೂಡ ಸೈನಿಕರಿಗೆ ಅವಮಾನ ಮಾಡುವ ವರ್ತನೆ ಮಾಡಲಾಗಿದೆ ಎಂಬುದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕೂಡ ಗ್ರಾಸವಾಗಿದೆ. ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ಖ್ಯಾತ ಬೌಲರ್ ಮೊಂಟಿ ಪನೇಸರ್ ಕೂಡ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಭಾರತೀಯ ಸೈನಿಕ ಈ ರೀತಿಯ ಅಗೌರವ ಸಲ್ಲಿಸುವುದು ಒಳ್ಳೆಯದಲ್ಲ ಅದಕ್ಕಾಗಿ ಸಿನಿಮಾ ನೋಡಬೇಡಿ ಎಂದು ಕೂಡ ಟ್ವೀಟ್ ಮಾಡಿದರು.
ಇನ್ನು ಹೀಗೆ ಸೈನಿಕರ ಕುರಿತು ಹಾಗೂ ಧರ್ಮದ ಕುರಿತು ಹಲವಾರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಅಮೀರ್ ಖಾನ್ ರವರಿಗೆ ಶಾಕ್ ನೀಡಲು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ರೀತಿಯಲ್ಲಿ ಅಭಿಯಾನಗಳನ್ನು ನಡೆಸಲಾಯಿತು. ಈ ಅಭಿಯಾನಗಳ ಕಾರಣದಿಂದಾಗಿ ನೂರಾರು ಕೋಟಿ ಬಂಡವಾಳ ಹೂಡಿದ್ದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯವಾಗಿ ಸೋಲನ್ನುಕಂಡಿತು. ಈ ವಾದಕ್ಕೆ ಕೆಲವರು ಒಪ್ಪದೇ ಹೋದರು ಕೂಡ ಲಾಲ್ ಸಿಂಗ್ ಚಡ್ಡಾ ಸೋತದ್ದು ಸುಳ್ಳಲ್ಲ .
ಆದರೆ ಈ ಮಾತನ್ನು ಕೆಲವರು ಒಪ್ಪುತ್ತಿಲ್ಲ ಯಾಕೆಂದರೆ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಮುನ್ನವೇ ದುಡ್ಡು ಮಾಡಿದೆ ಎನ್ನುವುದು ಅವರ ವಾದ. ಆದರೆ ನಾವು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲಿನಿಂದಲೂ OTT ಹಾಗೂ ಬಿಡುಗಡೆಗೂ ಮುನ್ನ ಅಮೀರ್ ಖಾನ್ ರವರ ಚಿತ್ರ ದುಡ್ಡು ಮಾಡುತ್ತಿತ್ತು. ಆದರೆ ಅದರ ಜೊತೆಗೆ ಸಿನಿಮಾ ಬಿಡುಗಡೆಯಾದ ಮೇಲೆ ಕೂಡ ನೂರಾರು ಕೋಟಿ ಬಾಚುತ್ತಿತ್ತು. ಆದರೆ ಈ ಬಾರಿ ಬಿಡುಗಡೆಗೋ ಮುನ್ನ ಮಾಡಿದ ಬಿಸಿನೆಸ್ ಗೆ ಅಷ್ಟೇ ಸೀಮಿತವಾಗಿದೆ.
ಇನ್ನು ಅಷ್ಟೇ ಅಲ್ಲದೆ ಬಿಡುಗಡೆಗೂ ಮುನ್ನ ಮಾಡಿಕೊಂಡ OTT ಒಪ್ಪಂದಗಳು ಕೂಡ ರದ್ದು ಆಗುತ್ತಿವೆ. ಈಗಾಗಲೇ ದೊಡ್ಡ ದೊಡ್ಡ OTT ಪ್ಲಾಟ್ಫಾರ್ಮ್ ಗಳು ಕೂಡ ಲಾಲ್ ಸಿಂಗ್ ಚಡ್ಡಾ ಸಿನಿಮ ಬಿಡುಗಡೆ ಮಾಡಲು ಹಿಂದೇಟು ಹಾಕಿ ಒಪ್ಪಂದವನ್ನು ರದ್ದುಗೊಳಿಸಿದೆ. ಹೀಗಿರುವಾಗ ಅಮೆರಿಕನ್ ರವರ ಲಾಲು ಸಿಂಗ್ ಚಡ್ಡ ಅಕ್ಷರ ಸಹ ಮಖಣೆ ಮಲಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗೆ ಇಡೀ ದೇಶದ ಎಲ್ಲೆಡೆ ಹಲವಾರು ಜನ ಅಭಿಯಾನಗಳನ್ನು ಮಾಡುವ ಮೂಲಕ ಅಮೀರ್ ಖಾನ್ ರವರಿಗೆ ಸೋಲಿನ ರುಚಿ ತೋರಿಸಿರುವ ಸಮಯದಲ್ಲಿ ಅಮೀರ್ ಖಾನ್ ರವರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು ಸ್ನೇಹಿತರೇ, ಇದೀಗ ಬಂದಿರುವ ಮೂಲಗಳ ಪ್ರಕಾರ ಲಾಲ್ ಸಿಂಗ್ ಚಡ್ಡಾ ಸೋತ ಕಾರಣಕ್ಕಾಗಿ ಮುಂದಿನ ಚಿತ್ರಗಳಿಗೆ ಈಗಾಗಲೇ ಸಹಿ ಮಾಡಿದ್ದ ನಿರ್ಮಾಪಕರು ಹಾಗೂ ತಯಾರಕರು ಅಮೀರ್ ಖಾನ್ ರವರ ಜೊತೆ ಸಿನಿಮಾ ಮಾಡುವ ವಿಚಾರದಲ್ಲಿ ಹಿಂದೆ ಸರಿದಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಅಮೀರ್ ಖಾನ್ ರವರು ಮೊಘಲ್ ಎಂಬ ಚಿತ್ರದಲ್ಲಿ ನಟಿಸಬೇಕಾಗಿತ್ತು, ಈ ಚಿತ್ರ ಗುಲ್ಶನ್ ಕುಮಾರ್ ರವರ ಜೀವನ ಆಧಾರಿತ ಚಿತ್ರವಾಗಿತ್ತು, ಈ ಸಿನಿಮಾವನ್ನು ಗುಲ್ಜನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ಮಾಡಬೇಕಾಗಿತ್ತು ಹಾಗೂ ಟಿ ಸಿರೀಸ್ ನಿರ್ಮಾಣ ಮಾಡಬೇಕಾಗಿತ್ತು. ಆದರೆ ಈ ಚಿತ್ರದಿಂದ ಅಮೀರ್ ಖಾನ್ ರವರನ್ನು ಕೈ ಬಿಡಲಾಗಿದೆ ಎಂಬ ಸುದ್ದಿ ಇತಿಗಾ ತಿಳಿದು ಬಂದಿದೆ