ಕೊನೆಗೂ ತನ್ನ ಕಳಪೆ ಫಾರ್ಮ್ ಬಗ್ಗೆ ತಾನೇ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ: ತಾನು ಹೀಗೇ ಬ್ಯಾಟಿಂಗ್ ಮಾಡಲು ಕಾರಣ ಏನಂತೆ ಗೊತ್ತೇ??
ಕೊನೆಗೂ ತನ್ನ ಕಳಪೆ ಫಾರ್ಮ್ ಬಗ್ಗೆ ತಾನೇ ಕಾರಣ ಬಿಚ್ಚಿಟ್ಟ ವಿರಾಟ್ ಕೊಹ್ಲಿ: ತಾನು ಹೀಗೇ ಬ್ಯಾಟಿಂಗ್ ಮಾಡಲು ಕಾರಣ ಏನಂತೆ ಗೊತ್ತೇ??
ಕ್ರಿಕೆಟ್ ಲೋಕದ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೋಹ್ಲಿ ಅವರು ಒಂದೆರಡು ವರ್ಷಗಳಿಂದ ಕಳಪೆ ಫಾರ್ಮ್ ನಲ್ಲಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. 2019ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕ ಗಳಿಸದೆ ಕೋಹ್ಲಿ ಅವರು ಕಳಪೆ ಫಾರ್ಮ್ ನಲ್ಲಿದ್ದಾರೆ. ಈಗಲೂ ಸಹ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ಅವರ ಕಳಪೆ ಫಾರ್ಮ್ ಇಂದಾಗಿ ಅವರು ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರಿಂದ ಕೋಹ್ಲಿ ಅವರು ಜಿಂಬಾಬ್ವೆ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕೆ ಇಳಿಯಲಿಲ್ಲ. ಬದಲಾಗಿ ಅವರು ಒಂದು ತಿಂಗಳ ಕಾಲ ಸುಧೀರ್ಘ ಸಮಯ ವಿಶ್ರಾಂತಿ ಪಡೆದಿದ್ದಾರೆ.
ಆಗಸ್ಟ್ 27ರಿಂದ ಯುಎಇ ನಲ್ಲಿ ಏಷ್ಯಾಕಪ್ ಪಂದ್ಯಗಳು ಶುರುವಾಗಲಿದೆ. ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ್ ವಿರುದ್ಧ ಮೊದಲ ಪಂದ್ಯ ಶುರುವಾಗಲಿದ್ದು, ವಿರಾಟ್ ಕೋಹ್ಲಿ ಅವರು ಪ್ಲೇಯಿಂಗ್ 11ಗೆ ಆಯ್ಕೆಯಾಗಿದ್ದಾರೆ, ಕೋಹ್ಲಿ ಅವರು ಏಷ್ಯಾಕಪ್ ಪಂದ್ಯಗಳ ಮೂಲಕ ಫಾರ್ಮ್ ಗೆ ಕಂಬ್ಯಾಕ್ ಮಾಡಲಿ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದು, ಈ ಬಗ್ಗೆ ಖಾಸಗಿ ವಾಹಿನಿಯ ಗೇಮ್ ಪ್ಲಾನ್ ನಲ್ಲಿ ಮಾತನಾಡಿ, ತಮ್ಮ ಫಾರ್ಮ್ ಈ ರೀತಿ ಆಗಲು ಕಾರಣ ಏನು ಮತ್ತು ಮುಂದಿನ ಪ್ಲಾನ್ ಏನು ಎಂದು ತಿಳಿಸಿದ್ದಾರೆ. “ಇಂಗ್ಲೆಂಡ್ ಪಂದ್ಯಗಳಲ್ಲಿ ನಡೆದಿದ್ದೆ ಬೇರೆ. ಈಗ ನನ್ನ ಶಾಟ್ ಆಯ್ಕೆಗಳನ್ನು ಸುಧಾರಿಸಿದ್ದೇನೆ. ಬ್ಯಾಟಿಂಗ್ ನಲ್ಲಿ ಈಗ ನನಗೆ ಯಾವುದೇ ತೊಂದರೆ ಇಲ್ಲ..” ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ..
ಈ ವಿಚಾರದಿಂದ ಆಟದ ವಿಷಯದಲ್ಲಿ ಮಾತ್ರವಲ್ಲದೆ, ಜೀವನದಲ್ಲಿ ಕೂಡ ಅವರ ದೃಷ್ಟಿಕೋನ ಬದಲಾಗಿದೆ ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ. “ಉತ್ತಮವಾದ್ ಬ್ಯಾಟಿಂಗ್ ಪ್ರದರ್ಶನ ನೀಡಲು ನಾನು ಪ್ರಯತ್ನ ಪಡುತ್ತ ಇರುವವರೆಗೂ ಈ ಏರಿಳಿತ ಇದ್ದೇ ಇರುತ್ತದೆ ಎಂದು ನನಗೆ ತಿಳಿದಿದೆ. ಇವುಗಳಿಂದ ನಾನು ಹೊರಬಂದಾಗ, ಇನ್ನಷ್ಟು ಸ್ಥಿರವಾಗಿ ಇರುತ್ತೇನೆ ಎಂದು ನನಗೆ ಗೊತ್ತಿದೆ. ಅನುಭವಗಳು ನನಗೆ ಮುಖ್ಯ..” ಎಂದು ಹೇಳಿದ್ದಾರೆ ಕಿಂಗ್ ಕೋಹ್ಲಿ. ಈ ಮೂಲಕ ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. 28 ಶುರುವಾಗುವ ಪಂದ್ಯದಲ್ಲಿ ಕಿಂಗ್ ಕೋಹ್ಲಿ ಬ್ಯಾಟಿಂಗ್ ಅಬ್ಬರ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.