ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಏಷ್ಯಾ ಕಪ್ ನಲ್ಲಿ ಕೊಹ್ಲಿ, ರೋಹಿತ್, ರಾಹುಲ್ ನಿಂದ ಪಾಕಿಸ್ತಾನಕ್ಕೆ ಏನು ತೊಂದರೆ, ಆದರೆ ಆತನೊಬ್ಬನೇ ಸಾಕು ಪಾಕ್ ಗೆ ಶಾಕ್ ನೀಡಲು. ಯಾರು ಗೊತ್ತೇ??

103

Get real time updates directly on you device, subscribe now.

ಪ್ರಸ್ತುತ ಕ್ರಿಕೆಟ್ ಪ್ರಿಯರಿಗೆ ಏಷ್ಯಾಕಪ್ ಪಂದ್ಯಗಳು ಶುರುವಾಗುವ ಸಂತೋಷ ಇದೆ. ನಮ್ಮ ಭಾರತ ತಂಡ ಈಗಾಗಲೇ 7 ಬಾಯಿ ಏಷ್ಯಾಕಪ್ ಪಂದ್ಯಗಳನ್ನು ಗೆದ್ದು, ಅತ್ಯಂತ ಯಶಸ್ವಿ ತಂಡ ಎನ್ನಿಸಿಕೊಂಡಿದೆ. ಈ ಬಾರಿ ಸಹ ಏಷ್ಯಾಕಪ್ ಪಂದ್ಯಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ಆಗಸ್ಟ್ 27ರಿಂದ ಏಷ್ಯಾಕಪ್ ಪಂದ್ಯಗಳು ಶುರುವಾಗಲಿದ್ದು, 28ರಿಂದ ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯ ಶುರುವಾಗಲಿದೆ. ಈ ಪಂದ್ಯಗಳು ಯುಎಇ ನಲ್ಲಿ ನಡೆಯಲಿದೆ. ಕಳೆದ ವರ್ಷ ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನ್ ತಂಡ ಭಾರತದ ವಿರುದ್ಧ ಜಯ ಗಳಿಸಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ತಂಡ ಸಜ್ಜಾಗಿದೆ.

ರೋಹಿತ್ ಶರ್ಮಾ ನಾಯಕತ್ವದ ತಂಡ ಆಗಸ್ಟ್ 28ರಂದು ಪಾಕಿಸ್ತಾನ್ ತಂಡದ ವಿರುದ್ಧ ಸೆಣೆಸಾಟ ನಡೆಸಲಿದೆ. ಭಾರತ ತಂಡದಲ್ಲಿ ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಎಲ್ಲರೂ ಇದ್ದಾರೆ. ಆದರೆ ಆ ಒಬ್ಬ ಆಟಗಾರ ತಮಗೆ ಬಹಳ ಇಷ್ಟವಾಗಿದ್ದು, ಆತನ ಆಟದ ವೈಖರಿ ಅದ್ಭುತವಾಗಿದೆ, ಆತ ಒಬ್ಬ ಇದ್ದರೆ ಪಾಕಿಸ್ತಾನಕ್ಕೆ ತೊಂದರೆ ಎಂದು ಸ್ವತಃ ಪಾಕಿಸ್ತಾನ್ ತಂಡದ ಆಟಗಾರ ವಾಸಿಂ ಅಕ್ರಂ ತಿಳಿಸಿದ್ದಾರೆ. ಇವರು ಹೇಳಿದ ಆ ಆಟಗಾರ ಯಾರು ಎಂದು ತಿಳಿಸುತ್ತೇವೆ ನೋಡಿ…

ಅಕ್ರಂ ಅವರು ಹೇಳಿದ್ದು, ಸೂರ್ಯಕುಮಾರ್ ಯಾದವ್ ಅವರ ಬಗ್ಗೆ. ನಾವೆಲ್ಲರೂ ನೋಡಿರುವ ಹಾಗೆಯೇ ಸೂರ್ಯಕುಮಾರ್ ಯಾದವ್ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ, ಟಿ20 ಪಂದ್ಯಗಳಲ್ಲಿ ಈಗಾಗಲೇ 5 ಶತಕಗಳನ್ನು ಗಳಿಸಿ, 37.33 ರ ಸರಾಸರಿಯಲ್ಲಿ 672 ರನ್ ಗಳಿಸಿದ್ದಾರೆ. ಈ ಆಟಗಾರನ ಬಗ್ಗೆ ಈಗ ವಾಸಿಂ ಅಕ್ರಂ ಮಾತನಾಡಿದ್ದಾರೆ, “ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಕ್ ಭಾರತ ತಂಡದಲ್ಲಿ ಇದ್ದಾರೆ. ಆದರೆ ಕಡಿಮೆ ಫಾರ್ಮೇಟ್ ಪಂದ್ಯಗಳಲ್ಲಿ ಈಗ ಸೂರ್ಯಕುಮಾರ್ ಯಾದವ್ ನನ್ನ ಮೆಚ್ಚಿನ ಆಟಗಾರ. ಅವರು ಅದ್ಭುತವಾಗಿದ್ದಾರೆ. ಕೆಕೆಆರ್ ತಂಡಕ್ಕೆ ಸೇರಿದ ಮೊದಲ ವರ್ಷ ನಾನು ಅವರನ್ನು ನೋಡಿದ್ದೇ. 7 ಅಥವಾ 8 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಅವರಿಗೆ ಒಂದೆರಡು ಬಾರಿ ಅವಕಾಶ ಸಿಕ್ಕಿತ್ತು. ಅವರ ಒಂದೆರಡು ಶಾಟ್ ಗಳಲ್ಲಿ, ಬ್ಯಾಟ್ ನ ಮಧ್ಯದಿಂದ ಫೈನ್ ಲೆಗ್ ಕಡೆಗೆ ಇಳಿಸುವ ಶಾಟ್ ಅದಾಗಿತ್ತು. ಇದು ಸಾಮಾನ್ಯವಾದದ್ದಲ್ಲ ಬಹಳ ಕಷ್ಟವಾದ ಶಾಟ್..” ಎಂದು ಹೇಳುವ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ಹೊಗಳಿದ್ದಾರೆ ಅಕ್ರಂ

Get real time updates directly on you device, subscribe now.