ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ, ತನ್ನದೇ ರಾಶಿಯನ್ನು ಪ್ರವೇಶ ಮಾಡಿದ್ದಾರೆ. ಇದರಿಂದ ಬೇರೆ ರಾಶಿಗಳ ಅದೃಷ್ಟ ಹೇಗೆ ಖುಲಾಯಿಸಲಿದೆ ಗೊತ್ತೇ??
ಸಿಂಹ ರಾಶಿಯ ಅಧಿಪತಿ ಸೂರ್ಯ ದೇವ, ತನ್ನದೇ ರಾಶಿಯನ್ನು ಪ್ರವೇಶ ಮಾಡಿದ್ದಾರೆ. ಇದರಿಂದ ಬೇರೆ ರಾಶಿಗಳ ಅದೃಷ್ಟ ಹೇಗೆ ಖುಲಾಯಿಸಲಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಕ್ಷತ್ರಗಳ ಅಧಿಪತಿ ಆಗಿರುವ ಸೂರ್ಯದೇವನು ಕರ್ಕ ರಾಶಿಯಿಂದ ತನ್ನ ಮೂಲ ರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ. ವರ್ಷಕ್ಕೆ ಒಂದು ಬಾರಿಯಾದರೂ ಸೂರ್ಯ ತನ್ನ ಸ್ವಂತ ರಾಶಿಗೆ ಕಾಲಿಟ್ಟೆ ಇಡುತ್ತಾನೆ. ಇನ್ನು ಈ ಬಾರಿ ಸೆಪ್ಟೆಂಬರ್ 17ರ ವರೆಗೆ ತನ್ನ ರಾಶಿಯಲ್ಲಿ ಇರುವ ಸೂರ್ಯ ನಂತರ ಕನ್ಯಾ ರಾಶಿಗೆ ಚಲಿಸುತ್ತಾನೆ. ಇದರ ಒಳಗೆ ಸೂರ್ಯ ತನ್ನ ರಾಶಿಯಾಗಿರುವ ಸಿಂಹ ರಾಶಿಯಲ್ಲಿ ಇರುವ ಸಂದರ್ಭದಲ್ಲಿ ಯಾವ್ಯಾವ ರಾಶಿಯವರಿಗೆ ಯಾವ್ಯಾವ ರೀತಿಯ ಪರಿಣಾಮ ಒದಗಿ ಬರಲಿದೆ ಎನ್ನುವುದನ್ನು ಈ ಲೇಖನಿಯಲ್ಲಿ ಇಂದು ನೋಡೋಣ.
ಮೇಷ ರಾಶಿ; ಸ್ಪರ್ಧಾತ್ಮಕ ಪರೀಕ್ಷೆಗಾಗಿ ತಯಾರಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಭಪ್ರದ ಕಂಡು ಬರಲಿದೆ. ಸಂಶೋಧನ ಹಾಗೂ ಕ್ರಿಯೇಟಿವಿಟಿ ಕ್ಷೇತ್ರದಲ್ಲಿ ಇರುವವರೆಗೂ ಕೂಡ ಯಶಸ್ಸು ಬರಲಿದೆ. ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಬಹುದು ಹಾಗೂ ದಂಪತಿಗಳಿಗೆ ಸಂತಾನ ಭಾಗ್ಯ ದೊರಕಲಿದ್ದು ಪ್ರೀತಿಯ ವಿಚಾರದಲ್ಲಿ ದುಃಖವನ್ನು ಅನುಭವಿಸುವ ಸಾಧ್ಯತೆ ಇದೆ.
ವೃಷಭ ರಾಶಿ; ಈ ಸಂದರ್ಭದಲ್ಲಿ ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕು. ವಾಹನ ಚಲಾವಣೆ ಸಂದರ್ಭದಲ್ಲಿ ತೀವ್ರ ನಿಗಾ ಇರಲಿ. ಆಸ್ತಿ ಖರೀದಿ ಹಾಗೂ ವಾಹನ ಖರೀದಿಗೆ ಇದೊಂದು ಪ್ರಶಸ್ತ ಸಮಯ ಎಂದು ಹೇಳಬಹುದು.
ಮಿಥುನ ರಾಶಿ; ಸೂರ್ಯನ ಆಶೀರ್ವಾದದಿಂದ ನೀವು ಅತ್ಯಂತ ಕಷ್ಟ ಹಾಗೂ ಚಾಲೆಂಜಿಂಗ್ ಸಮಯಗಳಲ್ಲಿ ಕೂಡ ಗೆಲ್ಲುತ್ತೀರಿ. ಈ ಸಮಯದಲ್ಲಿ ನಿಮ್ಮ ಕುಟುಂಬದವರೊಂದಿಗೆ ವೈಮನಸ್ಸನ್ನು ಇಟ್ಟುಕೊಳ್ಳಬೇಡಿ. ವಿದೇಶದಲ್ಲಿ ಹೋಗಿ ಕೆಲಸ ಹುಡುಕಿಕೊಂಡು ಸೆಟಲ್ ಆಗುವ ನಿಮ್ಮ ಯೋಚನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಕಟಕ ರಾಶಿ; ಸೂರ್ಯನ ಪ್ರಭಾವ ನಿಮ್ಮ ಜೀವನದಲ್ಲಿ ಸಾಕಷ್ಟು ಏರಳಿತಗಳನ್ನು ತರಲಿದೆ. ಕರೆಯದೆ ಬಂದ ಅತಿಥಿಗಳನ್ನು ಕೂಡ ನೀವು ಇಲ್ಲಿ ಕಾಣಬಹುದು ಅಂದರೆ ಕಷ್ಟ ಸುಖಗಳು ಕೂಡ ಕಂಡುಬರುತ್ತವೆ. ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರದಿಂದಿರಿ. ಕುಟುಂಬದ ಆಸ್ತಿ ವಿವಾದ ಬಗೆಹರಿಯುವ ಕಾರಣದಿಂದಾಗಿ ನೀವು ಆರ್ಥಿಕವಾಗಿ ದೃಢ ಆಗಲಿದ್ದೀರಿ.
ಸಿಂಹ ರಾಶಿ; ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಸ್ಥಾನಮಾನ ಸಿಗಲಿದೆ. ಸರ್ಕಾರಿ ಇಲಾಖೆಗಳ ಯಾವುದೇ ಟೆಂಡರ್ ನಲ್ಲಿ ನೀವು ಭಾಗವಹಿಸಿದ್ದರು ಕೂಡ ಯಶಸ್ಸನ್ನು ಪಡೆಯಲಿದ್ದೀರಿ. ವಿದೇಶದಲ್ಲಿ ಶಿಕ್ಷಣವನ್ನು ಪಡೆಯಲು ಯೋಚಿಸುತ್ತಿರುವವರಿಗೆ ಈ ಸಮಯ ಅತ್ಯಂತ ಅನುಕೂಲಕರವಾಗಿದೆ.
ಕನ್ಯಾ ರಾಶಿ; ಈ ಸಮಯದಲ್ಲಿ ಅತ್ಯಂತ ಓಡಾಟದ ಕಾರಣದಿಂದಾಗಿ ಆರ್ಥಿಕ ಸಮಸ್ಯೆಯನ್ನು ಎದುರಿಸಬಹುದಾಗಿದೆ. ವಿದೇಶಿ ಪ್ರವಾಸದ ಲಾಭ ಹಾಗೂ ವಿದೇಶಿ ಪೌರತ್ವ ಹಾಗೂ ಅಲ್ಲಿ ಹೋಗಿ ನೆಲೆಸುವ ಪ್ರಯತ್ನದಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ಇಷ್ಟೆಲ್ಲ ಶುಭ ಸುದ್ದಿಗಳ ನಡುವೆ ಕೂಡ ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸುವುದು ಉತ್ತಮ.
ತುಲಾ ರಾಶಿ; ಆದಾಯದ ದೃಷ್ಟಿಯಲ್ಲಿ ಸಂಪತ್ತು ಹೆಚ್ಚಲಿದೆ ಹೊಸ ವ್ಯಾಪಾರವನ್ನು ಪ್ರಾರಂಭಿಸಬೇಕು ಎನ್ನುವ ಆಸೆ ಇದ್ದರೂ ಕೂಡ ಈ ಸಂದರ್ಭದಲ್ಲಿ ಅದು ಸೂಕ್ತ ಆಗಿರಲಿದೆ. ಮದುವೆಯಾದ ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯಲಿದೆ ಆದರೆ ಪ್ರೇಮ ವಿವಾಹಕ್ಕೆ ಇದು ಸರಿಯಾದ ಸಮಯ ಅಲ್ಲ.
ವೃಶ್ಚಿಕ ರಾಶಿ; ಅಧಿಕಾರ ಕ್ಷೇತ್ರದಲ್ಲಿ ಪ್ರಯತ್ನ ಪಡುತ್ತಿರುವವರಿಗೆ ಸೂರ್ಯನ ಪ್ರಭಾವದಿಂದ ಯಶಸ್ಸು ದೊರಕಾಲಿದೆ. ಸಂಶೋಧನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಗೆಲುವು ದೊರಕಲಿದೆ. ನ್ಯಾಯಾಲಯದ ವಿಚಾರದಲ್ಲಿ ನಿಮ್ಮ ಪರವಾಗಿ ಫಲಿತಾಂಶ ಬರುವ ಸಾಧ್ಯತೆ ಹೆಚ್ಚಾಗಿದೆ.
ಧನು ರಾಶಿ; ಧಾರ್ಮಿಕ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಜೀವನದಲ್ಲಿ ಮಿಶ್ರ ಫಲಿತಾಂಶಗಳು ಕಂಡು ಬರಲಿವೆ. ಯಾವುದೇ ಕೆಲಸಗಳಲ್ಲಿ ತಡೆ ಉಂಟಾದರೂ ಕೂಡ ಪ್ರಯತ್ನ ಪಡುವುದನ್ನು ಮಾತ್ರ ಬಿಡಬೇಡಿ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡಲು ವಿಸಾಗೆ ಪ್ರಯತ್ನ ಪಡುವವರಿಗೆ ಅತಿಶೀಘ್ರದಲ್ಲೇ ಉತ್ತಮ ಸುದ್ದಿ ಕೇಳಿ ಬರಲಿದೆ.
ಮಕರ ರಾಶಿ; ಅನಿರೀಕ್ಷಿತ ಪರಿಣಾಮಗಳು ಉಂಟಾಗುವ ಕಾರಣದಿಂದಾಗಿ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು. ಕೆಲಸ ಮಾಡುವ ಸ್ಥಳದಲ್ಲಿ ಶತ್ರುಗಳು ಹೆಚ್ಚಾಗಬಹುದು. ಹಿರಿಯರ ಆಸ್ತಿಯಲ್ಲಿ ಕೂಡ ವೈಮನಸ್ಸುಗಳು ಕಾಣಿಸಿಕೊಳ್ಳಬಹುದು. ಇದರ ನಡುವೆ ಕೂಡ ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹಾಗೂ ಘನತೆ ಗೌರವಗಳು ಹೆಚ್ಚಾಗುತ್ತದೆ.
ಕುಂಭ ರಾಶಿ; ಮದುವೆ ಜೀವನದಲ್ಲಿ ವೈಪರಿತ್ಯಗಳು ವೈವಾಹಿಕ ಸಂಬಂಧದಲ್ಲಿ ಬಿರುಕುಗಳು ಹಾಗೂ ವ್ಯಾಪಾರದಲ್ಲಿ ಕೂಡ ನಷ್ಟ ಕಂಡು ಬರಲಿದೆ ಹೀಗಾಗಿ ವ್ಯಾಪಾರ ಈ ಸಂದರ್ಭದಲ್ಲಿ ನಿಲ್ಲಿಸಿ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಕೂಡ ರಾಜ್ಯ ಅಥವಾ ಕೇಂದ್ರ ಸರ್ಕಾರದ ಕೆಲಸವನ್ನು ಪಡೆಯಲು ಬಯಸಿದರೆ ಅಧಿಕಾರದ ಬೆಂಬಲದಿಂದ ನೀವು ಇದರಲ್ಲಿ ಗೆಲುವು ಸಾಧಿಸಬಹುದು.
ಮೀನ ರಾಶಿ; ದೊಡ್ಡ ಕೆಲಸ ಅಥವಾ ವ್ಯಾಪಾರದಲ್ಲಿ ಹೊಸ ಡೀಲ್ ಗೆ ಸಹಿ ಹಾಕಲು ಇದು ಶುಭವಾದ ಸಮಯ. ನ್ಯಾಯಾಲಯದಲ್ಲಿ ಸಿಲುಕಿಕೊಂಡಿರುವ ಪ್ರಕರಣಗಳು ಇತ್ಯರ್ಥ ವಾಗುತ್ತದೆ. ಅತಿಯಾದ ಖರ್ಚಿನಿಂದ ನಿಮ್ಮ ಆರ್ಥಿಕ ಬಿಕ್ಕಟ್ಟು ಉಲ್ಬಣಿಸುತ್ತದೆ ಹೀಗಾಗಿ ಉಳಿತಾಯವನ್ನು ಮಾಡುವುದು ಕಲಿಯಿರಿ. ಇವುಗಳಲ್ಲಿ ನಿಮ್ಮ ರಾಶಿಗೆ ಯಾವ ಪರಿಣಾಮ ಎದುರಾಗುತ್ತಿದೆ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.