ಬಳಸುವ ಹಣವನ್ನೇ ಖರ್ಚು ಮಾಡಿ, ರಿವಾರ್ಡ್, ಕ್ಯಾಶ್ ಬ್ಯಾಕ್ ಮೂಲಕ ಲಾಭಗಳಿಸುವುದು ಹೇಗೆ ಗೊತ್ತೇ?? ಅತ್ಯುತ್ತಮ ರಿವಾರ್ಡ್ ನೀಡುವ 5 ಕ್ರೆಡಿಟ್ ಕಾರ್ಡ್ ಗಳು ಯಾವ್ಯಾವು ಗೊತ್ತೇ??
ಬಳಸುವ ಹಣವನ್ನೇ ಖರ್ಚು ಮಾಡಿ, ರಿವಾರ್ಡ್, ಕ್ಯಾಶ್ ಬ್ಯಾಕ್ ಮೂಲಕ ಲಾಭಗಳಿಸುವುದು ಹೇಗೆ ಗೊತ್ತೇ?? ಅತ್ಯುತ್ತಮ ರಿವಾರ್ಡ್ ನೀಡುವ 5 ಕ್ರೆಡಿಟ್ ಕಾರ್ಡ್ ಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಶಾಪಿಂಗ್ ಎನ್ನುವುದು ಹೆಚ್ಚಾಗಿ ಬಿಡುತ್ತದೆ. ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಗಳು ನಿಮ್ಮ ಉಪಯೋಗಕ್ಕೆ ಬರುತ್ತವೆ ಎಂಬುದು ಸಾಬೀತಾಗಿರುವ ವಿಚಾರ. ಇನ್ನು ದೈನಂದಿನ ವಾಗಿ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ನಮ್ಮ ಕಂಪನಿಯ ಕ್ರೆಡಿಟ್ ಗಾರ್ಡ್ ಗಳನ್ನು ಬಳಸಿ ಎಂಬುದಾಗಿ ಪದೇ ಪದೇ ಫೋನ್ ಮಾಡುತ್ತಲೇ ಇರುತ್ತಾರೆ. ಆದರೆ ಯಾವ ಕಂಪನಿಯ ಕ್ರೆಡಿಟ್ ಕಾರ್ಡ್ ಗಳನ್ನು ನೀವು ಬಳಸಿದರೆ ನಿಮಗೆ ಲಾಭ ಸಿಗುತ್ತದೆ ಎಂಬುದನ್ನು ಇಂದಿನ ಲೇಖನಿಯಲ್ಲಿ ನಾವು ತಿಳಿದುಕೊಳ್ಳೋಣ ಬನ್ನಿ. ಇದು ಖಂಡಿತವಾಗಿ ನಿಮಗೆ ಮುಂದಿನ ದಿನಗಳಲ್ಲಿ ಲಾಭವನ್ನು ತಂದುಕೊಡಬಹುದಾಗಿದೆ ಎಂಬುದಾಗಿ ನಾವು ನಂಬಿದ್ದೇವೆ.
ಎಸ್ ಬಿ ಐ ಸಿಂಪ್ಲಿ ಕ್ಲಿಕ್ ಕ್ರೆಡಿಟ್ ಕಾರ್ಡ್; ಈ ಕಾರ್ಡ್ ಎನ್ನುವುದು ಅಮೆಜಾನ್ ಬುಕ್ ಮೈ ಶೋ ಲೆನ್ಸ್ ಕಾರ್ಟ್ ಹಾಗೂ ಕ್ಲಿಯರ್ ಟ್ರಿಪ್ ನಂತಹ ಸಂಸ್ಥೆಗಳೊಂದಿಗೆ ಪಾರ್ಟ್ನರ್ಶಿಪ್ ಹೊಂದಿದೆ. ಈ ಕಾರ್ಡ್ ಬಳಕೆಯನ್ನು ನೀವು ಶಾಪಿಂಗ್ ಸಂದರ್ಭದಲ್ಲಿ ಮಾಡಿದರೆ ಸಾಕಷ್ಟು ರಿವಾರ್ಡ್ ಗಳನ್ನು ಪಡೆಯಬಹುದಾಗಿದೆ. ಖರ್ಚಿನ ಸಂದರ್ಭದಲ್ಲಿ ರಿವಾರ್ಡ್ ಸಿಕ್ಕರೆ ಖಂಡಿತವಾಗಿ ಎಲ್ಲರೂ ಕೂಡ ಇಷ್ಟಪಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ವರ್ಷದ ಮೈಂಟೇನೆನ್ಸ್ ಚಾರ್ಜ್ ಕೇವಲ 499 ರೂಪಾಯಿ ಮಾತ್ರ.
ಅಮೆಜಾನ್ ಪೆ ಐಸಿಐಸಿಐ ಕ್ರೆಡಿಟ್ ಕಾರ್ಡ್; ಇದು ಲೈಫ್ ಲಾಂಗ್ ಉಚಿತ ಕಾರ್ಡ್ ಆಗಿದೆ. ಈ ಕಾರ್ಡಿನ ಪ್ರೈಮ್ ಸದಸ್ಯತ್ವವನ್ನು ಪಡೆದಿರುವವರಿಗೆ 5% ಕ್ಯಾಶ್ ಬ್ಯಾಕ್ ಹಾಗು ಸದಸ್ಯತ್ವವನ್ನು ಹೊಂದಿಲ್ಲದೆ ಇರುವವರಿಗೆ 3% ಕ್ಯಾಶ್ ಬ್ಯಾಕ್. ಈಗಾಗಲೇ ಅಮೆಜಾನ್ನೊಂದಿಗೆ ನೂರಕ್ಕೂ ಅಧಿಕ ವ್ಯಾಪಾರಿಗಳು ಪಾಲದಾರರಾಗಿರುವ ಹಿನ್ನೆಲೆಯಲ್ಲಿ ಒಂದು ವೇಳೆ ನೀವು ಅಲ್ಲಿ ಶಾಪಿಂಗ್ ಮಾಡಿದರೆ ಖಂಡಿತವಾಗಿ ನಿಮಗೆ 2% ಕ್ಯಾಶ್ ಬ್ಯಾಕ್ ದೊರೆಯುತ್ತದೆ. ಕ್ಯಾಶ್ಬ್ಯಾಕ್ ಮುಕ್ತಾಯ ಆಗುವ ದಿನಾಂಕ ಇಲ್ಲ ಇದು ಅನ್ಲಿಮಿಟೆಡ್ ಆಗಿದೆ.
ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್; ಶಾಪಿಂಗ್ ಅಪ್ಲಿಕೇಶನ್ ಆಗಿರುವ ಫ್ಲಿಪ್ಕಾರ್ಟ್ ಹಾಗೂ ಮಿಂತ್ರಾ ದಲ್ಲಿ ಮಾಡಿರುವ ಎಲ್ಲಾ ಶಾಪಿಂಗ್ ಮೇಲೆ 5% ಕ್ಯಾಶ್ ಬ್ಯಾಕ್ ಆಫರ್ ಇರುತ್ತದೆ. ಕೇವಲ ಇದೇ ಪ್ಲಾಟ್ಫಾರ್ಮ್ ನಲ್ಲಿ ನೀವು ಶಾಪಿಂಗ್ ಮಾಡಬೇಕು ಎಂದೇನಿಲ್ಲ ಎಲ್ಲೆ ಶಾಪಿಂಗ್ ಮಾಡಿದರೂ ಕೂಡ ನಿಮಗೆ ಈ ಕಾರ್ಡ್ ಅನ್ನು ಉಪಯೋಗಿಸುವುದರೊಂದಿಗೆ 4% ಕ್ಯಾಶ್ ಬ್ಯಾಕ್ ಸದಾ ಕಾಲ ಲಭ್ಯವಿರುತ್ತದೆ. ಇನ್ನು ಈ ಕ್ರೆಡಿಟ್ ಕಾರ್ಡಿನ ವಾರ್ಷಿಕ ಟ್ಯಾಕ್ಸ್ 500 ರೂಪಾಯಿ ಆಗಿದೆ.
ಎಚ್ ಡಿ ಎಫ್ ಸಿ ಮಿಲೇನಿಯ ಕ್ರೆಡಿಟ್ ಕಾರ್ಡ್; ಈ ಕಾರ್ಡ್ ಅನ್ನು ಉಪಯೋಗಿಸಿಕೊಂಡು ನೀವು ಅಮೆಜಾನ್ ಫ್ಲಿಪ್ಕಾರ್ಟ್ ಹಾಗೂ ಮಿಂತ್ರ ದಲ್ಲಿ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಇದರ ಬಳಕೆಯಿಂದ 5% ಕ್ಯಾಶ್ ಬ್ಯಾಕ್ ಉಡುಗೊರೆ ನಿಮಗಾಗಿ ಕಾಯುತ್ತಿರುತ್ತದೆ. ಒಂದು ವೇಳೆ ನೀವು ಈ ಕಾರ್ಡನ್ನು ಬಳಸಿಕೊಂಡು ಒಂದು ಲಕ್ಷಕ್ಕೂ ಅಧಿಕ ಶಾಪಿಂಗ್ ಮಾಡಿದರೆ ನೀವು ಸಾವಿರ ರೂಪಾಯಿಗಳ ಶಾಪಿಂಗ್ ವೋಚರ್ ಅನ್ನು ಉಚಿತವಾಗಿ ಪಡೆಯಲಿದ್ದೀರಿ. ಹೀಗಾಗಿ ಕ್ಯಾಶ್ ಬ್ಯಾಕ್ ಜೊತೆಗೆ ಇನ್ನಷ್ಟು ಶಾಪಿಂಗ್ ಮಾಡಲು ಕೂಡ ನಿಮಗೆ ಗಿಫ್ಟ್ ವೋಚರ್ ಸಿಗುತ್ತದೆ ಎನ್ನುವುದು ಕನ್ಫರ್ಮ್ ಆಗಿದೆ. ಇಷ್ಟೊಂದು ಲಾಭವನ್ನು ನೀಡುತ್ತಿದೆ ಎಂದರೆ ಇದರ ವಾರ್ಷಿಕ ಶುಲ್ಕ ಕೂಡ ಅಧಿಕವಾಗಿರುತ್ತದೆ. ಹೌದು ಸ್ನೇಹಿತರೆ ಇದರ ವಾರ್ಷಿಕ ಶುಲ್ಕ ಸಾವಿರ ರೂಪಾಯಿ.
ಹೆಚ್ ಎಸ್ ಬಿ ಸಿ ಕ್ಯಾಶ್ಬ್ಯಾಕ್ ಕ್ರೆಡಿಟ್ ಕಾರ್ಡ್; ಅಮೆಜಾನ್ ನಲ್ಲಿ ನೀವು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಶಾಪಿಂಗ್ ಮಾಡಿದರೆ ಇಲ್ಲಿ ನಿಮಗೆ 5% ಕ್ಕೂ ಅಧಿಕ ಕ್ಯಾಶ್ ಬ್ಯಾಕ್ ದೊರೆಯಲಿದೆ. ಇನ್ನು ನಿಮಗೆ ಇದರಲ್ಲಿ ವೆಲ್ಕಮ್ ಗಿಫ್ಟ್ ಆಗಿ 500 ರೂಪಾಯಿ ಮೌಲ್ಯದ ಅಮೆಜಾನ್ ವೋಚರ್ ಉಚಿತವಾಗಿ ಸಿಗಲಿದೆ. 3000 ಮೌಲ್ಯದ ಅಜೀಯೋ ಹಾಗೂ ಒಂದುವರೆ ಸಾವಿರ ರೂಪಾಯಿ ಮೌಲ್ಯದ ಮಿಂತ್ರ ವೋಚರ್ ಕೂಡ ನಿಮಗೆ ಸಿಗಲಿದ್ದು ಇದೊಂದು ಡಬಲ್ ಧಮಾಕ ಉಡುಗೊರೆ ಆಗಿದೆ ಎಂದೇ ತಪ್ಪಾಗಲಾರದು.
ಕ್ರೆಡಿಟ್ ಕಾರ್ಡ್ಗಳನ್ನು ಬಳಸಿ ಶಾಪಿಂಗ್ ಮಾಡುವುದರಿಂದಾಗಿ ಹಣದ ಉಳಿತಾಯ ಆಗುತ್ತದೆ ಹಾಗೂ ಕ್ಯಾಶ್ಬ್ಯಾಕ್ ಮತ್ತು ರಿಯಾಯಿತಿ ದರಗಳು ಕೂಡ ಇದರಲ್ಲಿ ಕಂಡುಬರುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಖರೀದಿಸುವಾಗ ಅದರ ಖರ್ಚಿನ ಮಿತಿಯನ್ನು ಮೊದಲಿಗೆ ಗಮನಿಸಬೇಕು. ಕ್ರೆಡಿಟ್ ಕಾರ್ಡ್ ಬಳಕೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿ ಕೊಳ್ಳುವುದನ್ನು ಮಾತ್ರ ಮರೆತುಕೊಳ್ಳಬೇಡಿ.