ನೀವು ಒಂದು ವೇಳೆ ಉಚಿತವಾಗಿ ಏಷ್ಯಾಕಪ್ ವೀಕ್ಷಿಸಬೇಕು ಎಂದರೆ ಇರುವ ಸುಲಭ ದಾರಿ ಯಾವುದು ಗೊತ್ತೇ??
ನೀವು ಒಂದು ವೇಳೆ ಉಚಿತವಾಗಿ ಏಷ್ಯಾಕಪ್ ವೀಕ್ಷಿಸಬೇಕು ಎಂದರೆ ಇರುವ ಸುಲಭ ದಾರಿ ಯಾವುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೆ ಆಗಸ್ಟ್ 27ರಿಂದ ಯುಎಇ ನಲ್ಲಿ ಏಷ್ಯಾಕಪ್ ಪ್ರಾರಂಭವಾಗಲಿದೆ. ಇದು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟರೊಳಗಡೆಗಾಗಿ ಶ್ರೀಲಂಕಾದಲ್ಲಿ ನಡೆಯಬೇಕಾಗಿತ್ತು. ಆದರೆ ಅಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟಿನ ಕಾರಣದಿಂದಾಗಿ ಏಷ್ಯಾ ಕಪ್ ಈಗ ಅರಬ್ಬರನಾಡಿಗೆ ಸ್ಥಳಾಂತರ ಗೊಂಡಿದೆ. ಇನ್ನು ಈ ಬಾರಿಯ ಏಷ್ಯಾ ಕಪ್ ಗೆ ಭಾರತೀಯ ಕ್ರಿಕೆಟ್ ತಂಡ ಹಾಲಿ ಚಾಂಪಿಯನ್ ಆಗಿ ಎಂಟ್ರಿ ನೀಡುತ್ತಿದೆ. ಆಗಸ್ಟ್ 27ರಿಂದ ಏಷ್ಯಾ ಕಪ್ ಪ್ರಾರಂಭವಾಗುತ್ತಿದ್ದರು ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಅಧಿಕೃತವಾಗಿ ಏಷ್ಯಾ ಕಪ್ ಆರಂಭವಾಗುತ್ತಿರುವುದು ಅದರ ಮಾರನೇ ದಿನ ಅಂದರೆ ಆಗಸ್ಟ್ 28ರಂದು.
ಹೌದು ಮಿತ್ರರೇ, ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಪಾಕಿಸ್ತಾನ ತಂಡವನ್ನು ಅಂದರೆ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಭಾರತೀಯ ಕ್ರಿಕೆಟ್ ತಂಡ ಆಗಸ್ಟ್ 28ರಂದು ತನ್ನ ಪ್ರಥಮ ಪಂದ್ಯವನ್ನು ಆಡುವ ಮುಖಾಂತರ ಟೂರ್ನಮೆಂಟ್ ಗೆ ನಾಂದಿ ಹಾಡಲಿದೆ. ಈಗಾಗಲೇ ಈ ಪಂದ್ಯಾವಳಿಗೆ ಇರುವಂತಹ ಎಲ್ಲಾ ಟಿಕೆಟ್ಗಳು ಕೂಡ ಸೋಲ್ಡ್ ಔಟ್ ಆಗಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಪಂದ್ಯಾಟದ ಕರಾಮತ್ತೇ ಅದು. ಇದರ ನೇರ ಪ್ರಸಾರವನ್ನು ಭಾರತದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನೇರ ಪ್ರಸಾರ ಮಾಡಲಿದೆ.
ಈ ಪಂದ್ಯಾವಳಿಗಳ ನೇರ ಪ್ರಸಾರವನ್ನು ಡಿಜಿಟಲ್ ಮಾಧ್ಯಮದಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅಪ್ಲಿಕೇಶನ್ ಪ್ರಸಾರ ಮಾಡಲಿದೆ. ಕೇವಲ ಭಾರತ ಮಾತ್ರವಲ್ಲದೆ ಈ ಪಂದ್ಯಾಟದ ಪ್ರಸಾರವು ಶ್ರೀಲಂಕಾ ನೇಪಾಳ ಬಾಂಗ್ಲಾದೇಶಗಳಲ್ಲಿ ಕೂಡ ನೇರ ಪ್ರಸಾರ ಕಂಡು ಬರಲಿದೆ. ಇನ್ನು ಟೆಲಿಕಾಂ ಸಂಸ್ಥೆಗಳಾಗಿರುವ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳು ಕೂಡ ತಮ್ಮ ಗ್ರಾಹಕರಿಗೆ ಈ ಪಂದ್ಯಾಟಗಳನ್ನು ನೇರವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡುವತ್ತ ಸನ್ನದ್ಧವಾಗಿದೆ. ತಮ್ಮ ಗ್ರಾಹಕರಿಗೆ ಡಿಸ್ನಿಪ್ಲಸ್ ಹಾಟ್ ಸ್ಟಾರ್ ಅನ್ನು ಉಚಿತವಾಗಿ ನೀಡುವ ಮೂಲಕ ಏಷ್ಯಾ ಕಪ್ ಪಂದ್ಯಾವಳಿಗಳನ್ನು ಉಚಿತವಾಗಿ ವೀಕ್ಷಿಸುವ ಆಫರ್ ನೀಡಲು ಸಿದ್ಧವಾಗಿವೆ.
ಮೊದಲಿಗೆ ಜಿಯೋ ಬಳಕೆದಾರರಿಗೆ ಹೇಳುವುದಾದರೆ 499 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಹಾಕಿಸಿಕೊಂಡರೆ 28 ದಿನಗಳ ವ್ಯಾಲಿಡಿಟಿ ಅವಧಿಗೆ ದಿನಕ್ಕೆ 2 ಜಿಬಿ ಇಂಟರ್ನೆಟ್ ಡೇಟಾದ ಜೊತೆಗೆ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಗಾರಿಕೆ ಉಚಿತವಾಗಿ ದೊರೆಯಲಿದೆ. ಇದರ ಜೊತೆಗೆ ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದದಾರಿ ಕೂಡ ಸಿಗಲಿದ್ದು ಇವುಗಳ ಜೊತೆಯಲ್ಲಿ ರೋಚಕ ಪಂದ್ಯಗಳನ್ನು ಕೂಡ ನೀವು ವೀಕ್ಷಿಸಬಹುದಾಗಿದೆ. ಕೇವಲ ಏಷ್ಯ ಕಪ್ ಮಾತ್ರವಲ್ಲದೆ ಟಿ ಟ್ವೆಂಟಿ ವಿಶ್ವಕಪ್ ಅನ್ನು ಕೂಡ ಇದರಲ್ಲಿ ನೀವು ವೀಕ್ಷಿಸಬಹುದಾಗಿದೆ.
ಇನ್ನು ಏರ್ಟೆಲ್ ಸಂಸ್ಥೆಯ ಯೋಜನೆ ಕುರಿತಂತೆ ಮಾತನಾಡುವುದಾದರೆ 399 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ದೈನಂದಿನ 2.5ಜಿಬಿ ಇಂಟರ್ನೆಟ್ ಡೇಟಾ ಕೂಡ ಸಿಗುತ್ತದೆ. ಆದರೆ ಇಲ್ಲಿ ಡಿಸ್ನಿ ಪ್ಲಾಸ್ ಹಾಟ್ ಸ್ಟಾರ್ ಮೂರು ತಿಂಗಳ ಉಚಿತ ಚಂದದಾರಿಕೆ ಯೊಂದಿಗೆ ಸಿಗಲಿದೆ. ಈ ಮೂಲಕ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಏರ್ಟೆಲ್ ಚಂದಾದಾರಿಕೆಯನ್ನು ಪಡೆದುಕೊಂಡಿದ್ದರೆ ಏಷ್ಯಾ ಕಪ್ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಒಂದು ವೇಳೆ ನೀವು ವಿ ಐ ಸಂಸ್ಥೆಯ ಚಂದದಾರರಾಗಿದ್ದಾರೆ ನೀವು 499 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಮಾಡಿದರೆ 28 ದಿನಗಳ ಅವಧಿಯ ವ್ಯಾಲಿಡಿಟಿಯ ಹೊಂದಿರುವ ಯೋಜನೆ ನಿಮ್ಮದಾಗಲಿದ್ದು ಪ್ರತಿದಿನ ನಿಮಗೆ ವ್ಯಾಲಿಡಿಟಿ ಮುಗಿಯುವ ತನಕ ಎರಡು ಜಿಬಿ ಇಂಟರ್ನೆಟ್ ಡೇಟಾ ಸಿಗಲಿದೆ. ಈ ರಿಚಾರ್ಜ್ ಪ್ಲಾನ್ ಅನ್ನು ಮಾಡುವ ಮೂಲಕ ನೀವು ಬರೋಬ್ಬರಿ ಒಂದು ವರ್ಷದ ತನಕ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಈ ಮೂಲಕ ಏಷ್ಯಾ ಕಪ್ ಮಾತ್ರವಲ್ಲದೆ ಟಿ20 ವಿಶ್ವಕಪ್ ಸೇರಿದಂತಹ ಹಲವಾರು ಕ್ರಿಕೆಟ್ ಪಂದ್ಯಾವಳಿಗಳನ್ನು ಉಚಿತವಾಗಿ ನೇರ ಪ್ರಸಾರ ವೀಕ್ಷಿಸಬಹುದು. ಹಲವಾರು ಮನರಂಜನಾತ್ಮಕ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ಕೂಡ ವೀಕ್ಷಿಸಬಹುದಾಗಿದೆ.
ಆಯಾಯ ಟೆಲಿಕಾಂ ಸಂಸ್ಥೆಯ ಗ್ರಾಹಕರಾಗಿದ್ದರೆ ಆಯಾಯ ರಿಚಾರ್ಜ್ ಗಳನ್ನು ಮಾಡುವ ಮೂಲಕ ನೀವು ಉಚಿತವಾಗಿ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಇಲ್ಲದಿದ್ದಲ್ಲಿ ನೀವು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಎಕ್ಸ್ಟ್ರಾ ಹಣವನ್ನು ಹಾಕುವ ಮೂಲಕ ಖರೀದಿಸಬೇಕಾಗುತ್ತದೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಬೇಕೆಂದಿದ್ದರೆ ಈ ರಿಚಾರ್ಜ್ ಪ್ಲಾನ್ ಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ಕೂಡ ಈ ಸಂಸ್ಥೆಗಳ ಗ್ರಾಹಕರಾಗಿದ್ದರೆ ತಪ್ಪದೇ ಈ ರಿಚಾರ್ಜ್ ಪ್ಲಾನ್ ಗಳನ್ನು ಇಂದೇ ಮಾಡಿ.