ಏಷ್ಯಾ ಕಪ್ ಗೂ ಮುನ್ನವೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಕೊನೆ ಕ್ಷಣದಲ್ಲಿ ತಂಡದ ಪ್ರಮುಖ ಪಿಲ್ಲರ್ ಹೊರಗೆ?? ಆತಂಕದಲ್ಲಿ ಟೀಮ್ ಇಂಡಿಯಾ.

ಏಷ್ಯಾ ಕಪ್ ಗೂ ಮುನ್ನವೇ ಭಾರತಕ್ಕೆ ಮತ್ತೊಂದು ಬಿಗ್ ಶಾಕ್: ಕೊನೆ ಕ್ಷಣದಲ್ಲಿ ತಂಡದ ಪ್ರಮುಖ ಪಿಲ್ಲರ್ ಹೊರಗೆ?? ಆತಂಕದಲ್ಲಿ ಟೀಮ್ ಇಂಡಿಯಾ.

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಇದೇ ಆಗಸ್ಟ್ ಕೊನೆಯ ವಾರದಲ್ಲಿ ಅಂದರೆ ಆಗಸ್ಟ್ 27ರಿಂದ ಪ್ರಾರಂಭವಾಗಲಿರುವ ಭಾಗವಹಿಸಬೇಕಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಇದೊಂದು ಅತ್ಯುತ್ತಮ ಅಭ್ಯಾಸವಾಗಿದೆ ಎಂದರು ಕೂಡ ತಪ್ಪಾಗಲಾರದು. ಆದರೆ ಈಗಾಗಲೇ ಹಲವಾರು ಶಾ’ಕಿಂಗ್ ಅಪ್ಡೇಟ್ಗಳನ್ನು ಇತ್ತೀಚಿಗೆ ಭಾರತೀಯ ಕ್ರಿಕೆಟ್ ತಂಡ ಅನುಭವಿಸುತ್ತಿದೆ. ಏಷ್ಯಾ ಕಪ್ ಹಾಗೂ t20 ಟೂರ್ನಮೆಂಟ್ ಮುನ್ನವೇ ಇಂತಹ ವಿಚಾರಗಳು ಭಾರತೀಯ ಕ್ರಿಕೆಟ್ ತಂಡವನ್ನು ಕಾಡುತ್ತಿರುವುದು ನಿಜಕ್ಕೂ ಕೂಡ ಚಿಂತಾದಾಯಕವಾಗಿದೆ.

ಈಗಾಗಲೇ ಏಷ್ಯಾ ಕಪ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ರವರು ಆಯ್ಕೆ ಆಗಿರಲಿಲ್ಲ ಅದಕ್ಕೆ ಅವರ ಇಂಜುರಿಯ ಕಾರಣವಿತ್ತು. ಇನ್ನು ಕೆ ಎಲ್ ರಾಹುಲ್ ರವರು ಕೂಡ ಈಗಾಗಲೇ ತಂಡಕ್ಕೆ ಮರಳಿ ಬಂದಿದ್ದರು ಕೂಡ ತಮ್ಮ ಹಳೆಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿಲ್ಲ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡ ಒಂದು ದೊಡ್ಡ ಆ’ಘಾತವನ್ನು ಎದುರಿಸಬೇಕಾದ ಪರಿಸ್ಥಿತಿ ಸಿಲುಕಿದೆ. ಹೌದು ಈ ಬಾರಿ ಏಷ್ಯಾ ಕಪ್ ಮುನ್ನವೇ ತಂಡದಿಂದ ಹೊರಗುಳಿವ ಭೀ’ತಿಯನ್ನು ಎದುರಿಸುತ್ತಿರುವವರು ಮತ್ತಿನ್ಯಾರು ಅಲ್ಲ ತಂಡದ ಪ್ರಮುಖ ಕೋಚ್ ಆಗಿರುವ ರಾಹುಲ್ ದ್ರಾವಿಡ್ ರವರು. ನಿಮಗೆ ಗೊತ್ತೋ ಗೊತ್ತಿಲ್ಲವೋ ರಾಹುಲ್ ದ್ರಾವಿಡ್ ರವರು ಇತ್ತೀಚಿಗಷ್ಟೇ ಮಹಾಮಾರಿಗೆ ಪಾಸಿಟಿವ್ ಆಗಿದ್ದರು. ಹೀಗಾಗಿ ಅವರು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ತಂಡದೊಂದಿಗೆ ಪ್ರವಾಸ ಮಾಡಿರಲಿಲ್ಲ.

ಈಗ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ರವರು ಏಷ್ಯಾಕಪ್ ತಂಡದಲ್ಲಿ ಕೋಚ್ ಆಗಿ ಉಳಿದುಕೊಳ್ಳುವುದು ಅನುಮಾನ ಎಂಬುದಾಗಿ ಹೇಳಲಾಗುತ್ತಿದ್ದು ಏಷ್ಯಾ ಕಪ್ ತಂಡಕ್ಕೆ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ಕೇಳಿ ಬರುತ್ತಿದೆ. ಈಗಾಗಲೇ ಹಲವಾರು ಬಾರಿ ನಾಯಕರ ಹಾಗು ಆಟಗಾರರ ಬದಲಾವಣೆ ಕಾಣುತ್ತಿದ್ದ ಭಾರತೀಯ ಕ್ರಿಕೆಟ್ ತಂಡ ಈಗ ಸಾಕಷ್ಟು ಬಾರಿ ಕೋಚ್ ಬದಲಾವಣೆಗಳನ್ನು ಕೂಡ ಕಾಣುವ ಪರಿಸ್ಥಿತಿಗೆ ಬಂದಿದೆ ಇದು ನಿಜಕ್ಕೂ ಕೂಡ ಏಷ್ಯಾ ಕಪ್ ಹಾಗೂ ಟಿ 20 ವಿಶ್ವಕಪ್ ಹಿನ್ನೆಲೆಯಲ್ಲಿ ಸಾಕಷ್ಟು ಹಿನ್ನಡೆ ಆಗುವಂತಹ ವಿಚಾರ ಎಂಬುದಾಗಿ ಹೇಳಬಹುದಾಗಿದೆ.