ಹಲವಾರು ಆಸ್ಪತ್ರೆಗಳು ಕ್ಯಾನ್ಸರ್ ಹೆಸರಿನಲ್ಲಿ ಹಣ ದೋಚುತ್ತಿರುವಾಗ ಕ್ಯಾನ್ಸರ್ ಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಯಾವುವು ಗೊತ್ತಾ??

ಹಲವಾರು ಆಸ್ಪತ್ರೆಗಳು ಕ್ಯಾನ್ಸರ್ ಹೆಸರಿನಲ್ಲಿ ಹಣ ದೋಚುತ್ತಿರುವಾಗ ಕ್ಯಾನ್ಸರ್ ಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಡವ ಆಗಲಿ ಶ್ರೀಮಂತ ಆಗಲಿ ಆರೋಗ್ಯವೇ ಮಹಾಭಾಗ್ಯ ಎಂಬುದಾಗಿ ಎಲ್ಲರೂ ಕೂಡ ಭಾವಿಸುತ್ತಾರೆ. ಅದರಲ್ಲೂ ಕೆಲವೊಂದು ಮಾರಕ ಕಾಯಿಲೆಗಳಿಂದ ಬದುಕುಳಿಯುವುದು ಯಾರಿಂದಲೂ ಕೂಡ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅವುಗಳಲ್ಲಿ ಒಂದಾಗಿರುವ ಕ್ಯಾನ್ಸರ್ ವಿಚಾರದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿದ್ದೇವೆ. ಅದರಲ್ಲೂ ವಿಶೇಷವಾಗಿ ಬಡವರಿಗೆ ಕ್ಯಾನ್ಸರ್ ನಂತಹ ಕಾಯಿಲೆ ಬಂದರೆ ಅದಕ್ಕೆ ಬೇಕಾಗುವಷ್ಟು ಹಣ ಖರ್ಚು ಮಾಡಲು ಸಾಧ್ಯವೇ ಇಲ್ಲ ಅದಕ್ಕಾಗಿ ಅವರು ಮರಣವೇ ಕೊನೆಯ ದಾರಿ ಎಂಬುದಾಗಿ ಹತಾಶರಾಗಿಬಿಡುತ್ತಾರೆ. ಆದರೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಒಂದು ಕಹಿಯಲ್ಲಿ ಕೂಡ ಸಿಹಿಸುದ್ದಿಯೊಂದನ್ನು ಹೇಳಲು ಹೊರಟಿದ್ದೇವೆ.

ನಮ್ಮ ಭಾರತ ದೇಶದಲ್ಲಿ ಸರ್ಕಾರ ಹಾಗೂ ದೇಣಿಗೆಯಿಂದಾಗಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಬಲ್ಲಂತಹ ಹಲವಾರು ಆಸ್ಪತ್ರೆಗಳಿವೆ. ಈ ಕಾಯಿಲೆಗೆ ಎಷ್ಟು ಖರ್ಚು ಮಾಡಬೇಕಾಗುತ್ತದೆ ಎಂಬ ಅಂದಾಜು ನಿಮಗೆ ಇರಬಹುದು. ಹೀಗಾಗಿ ಇಂತಹ ಉಚಿತ ಆಸ್ಪತ್ರೆಗಳು ಈ ಕಾಯಿಲೆಯ ಪೀಡಿತರಿಗೆ ನಿಜಕ್ಕೂ ಕೂಡ ದೇವರ ರೀತಿ ಪರಿಣಮಿಸುತ್ತದೆ ಎಂದರು ಕೂಡ ತಪ್ಪಾಗಲಾರದು. ಹಾಗಿದ್ದರೆ ಅಂತಹ ಆಸ್ಪತ್ರೆಗಳು ಯಾವುವು ಹಾಗೂ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಮುಂಬೈ; 70% ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಿರುವ ಹೆಗ್ಗಳಿಕೆ ಈ ಸಂಸ್ಥೆಗೆ ಇದೆ. ಇಲ್ಲಿ ಕಿಮಿಯೋ ಥೆರಫಿ ಹಾಗೂ ರೇಡಿಯೋಲಜಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಕೂಡ ಅಳವಡಿಸಿಕೊಳ್ಳಲಾಗಿದೆ. ಅಲ್ಟ್ರಾ ಸೌಂಡ್ ಸಿಟಿ ಸ್ಕ್ಯಾನ್ ಎಂ ಆರ್ ಐ ಸ್ಕ್ಯಾನ್ ರಿಯಲ್ ಟೈಮ್ ನ್ಯೂಕ್ಲಿಯರ್ ಮೆಡಿಸಿನ್ ಸೇರಿದಂತೆ ಹಲವಾರು ಮುಂದುವರಿದ ಚಿಕಿತ್ಸಾಕ್ರಮಗಳನ್ನು ಕೂಡ ಇಲ್ಲಿ ರೋಗಿಗಳಿಗೆ ನೀಡಲಾಗುತ್ತದೆ.

ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಬೆಂಗಳೂರು; ಈ ರೋಗಕ್ಕೆ ಪ್ರತ್ಯುತ್ತರವಾಗಿ ಆಧುನಿಕ ಯಂತ್ರಗಳು ಹಾಗೂ ಸೌಕರ್ಯಗಳು ಈ ಆಸ್ಪತ್ರೆಯಲ್ಲಿ ಕಾಣಸಿಗುತ್ತವೆ. ಕ್ಯಾನ್ಸರ್ ಚಿಕಿತ್ಸೆಗೆ ಇಡೀ ಭಾರತದಲ್ಲೇ ಅತ್ಯಂತ ಹೆಸರುವಾಸಿಯಾಗಿರುವ ಹಾಸ್ಪಿಟಲ್ ಆಗಿದೆ. ಕ್ಯಾನ್ಸರ್ ಗೆ ಉಚಿತದರದ ಚಿಕಿತ್ಸೆಯನ್ನು ನೀಡುತ್ತದೆ ಹಾಗೂ ಮಾರುಕಟ್ಟೆಗೆ ಹೋಲಿಸಿದರೆ 40 ರಿಂದ 60 ಪ್ರತಿಶತ ಕಡಿಮೆ ಬೆಲೆಯಲ್ಲಿ ಔಷಧಿ ದೊರಕುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಹಿಂದುಳಿದವರಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಜಂಟಿಯಾಗಿ ಈ ಸಂಸ್ಥೆಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಕೊಲ್ಕತ್ತಾ; ಕ್ಯಾನ್ಸರ್ ಗಾಗಿ ಚಿಕಿತ್ಸೆ ಹಾಗೂ ಔಷಧಿಯನ್ನು ಕಡಿಮೆ ಮಟ್ಟದಲ್ಲಿ ನೀಡಲು ತನ್ನನ್ನು ತಾನು ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಕೋಲ್ಕತ್ತಾ ಸಮರ್ಪಿಸಿಕೊಂಡಿದೆ. ಇಂತಹ ಮಾರಣಾಂತಿಕ ಕಾಯಿಲೆಗೆ ಹಿಂದುಳಿದವರಿಗೆ ಹಾಗೂ ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಲು ಹಾಗೂ ಅತ್ಯಂತ ಕಡಿಮೆ ದರದಲ್ಲಿ ಔಷಧಿಯನ್ನು ಒದಗಿಸಲು ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಕೋಲ್ಕತ್ತಾ ಹೆಸರುವಾಸಿಯಾಗಿದೆ.

ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ತಿರುವನಂತಪುರ; ಈ ಸಂಸ್ಥೆ ಮಕ್ಕಳಿಗೆ ಹಾಗೂ ಬಡವರಿಗೆ ಯಾವುದೇ ವೆಚ್ಚವಿಲ್ಲದೆ ಉಚಿತ ಚಿಕಿತ್ಸೆಯನ್ನು ನೀಡುತ್ತದೆ‌. ಐಸೋಟೋಪ್ ಸಿಟಿ ಸ್ಕ್ಯಾನ್ ಕೀಮೋ ಥೆರಫಿಯಂತಹ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಕೂಡ ಇಲ್ಲಿವೆ. ಶೇಕಡ 60ರಷ್ಟು ಜನಕ್ಕೆ ಉಚಿತ ಚಿಕಿತ್ಸೆ ಹಾಗೂ ಶೇಕಡಾ 29ರಷ್ಟು ಮಧ್ಯಮ ಗಳಿಕೆ ಜನರಿಗೆ ಸಹಾಯಧನವನ್ನು ನೀಡಲಾಗುತ್ತದೆ. ಗುಣಪಡಿಸಬಹುದಾದ ರೀತಿಯಲ್ಲಿ ಯಾರೇ ಇದ್ದರೂ ಕೂಡ ಎಲ್ಲಾ ರೀತಿಯ ಉಚಿತ ಚಿಕಿತ್ಸೆಗಳನ್ನು ಪಡೆಯಬಹುದಾಗಿದೆ. ಕ್ಯಾನ್ಸರ್ ಪೀಡಿತರಿಗೆ ನಿಧಿ ಸಂಗ್ರಹವನ್ನು ಕೂಡ ಈ ಸಂಸ್ಥೆ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಹಿಂದುಳಿದ ಜನರಿಗೆ 80 ಲಕ್ಷ ರೂಪಾಯಿಗಳ ಮೌಲ್ಯದಷ್ಟು ಔಷಧಿಯನ್ನು ವಿತರಿಸಲಾಗಿದೆ.

ಕ್ಯಾನ್ಸರ್ ಕೇರ್ ಫೌಂಡೇಶನ್ ಆಫ್ ಇಂಡಿಯಾ ಮುಂಬೈ; ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಸಂಬಂಧಿತ ಇತರ ಅನಾರೋಗ್ಯಗಳನ್ನು ಎದುರಿಸಲು ಚಿಕಿತ್ಸೆ ಪಡೆಯ ಬಯಸುವ ಜನರಿಗೆ ಈ ಸಂಸ್ಥೆ ಹಲವಾರು ವರ್ಷಗಳಿಂದ ಚಿಕಿತ್ಸೆಯನ್ನು ನೀಡಿಕೊಂಡು ಬರುತ್ತಿದೆ. ಈ ಮಹಾಮಾರಿಗೆ ತುತ್ತಾದವರಿಗೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎನ್ನುವ ಕ್ರಮಗಳನ್ನು ಕೂಡ ಹೇಳಿಕೊಡಲಾಗುತ್ತದೆ. ಈ ಸಂಸ್ಥೆ ಆಲೋಪತಿ ಚಿಕಿತ್ಸಾ ಕ್ರಮವನ್ನು ಅನುಸರಿಸಲು ಕೂಡ ಸಹಾಯಕಾರಿ ಆಗಿದೆ. ಇದು ಮುಂಬೈ ಹಾಗೂ ಬೆಂಗಳೂರಿನಲ್ಲಿ ಕೂಡ ಇದೆ.

ಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆ; ಇದು ಗುಜರಾತಿನ ಅಹಮದಾಬಾದ್ ನಲ್ಲಿರುವ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸ ಕೇಂದ್ರವಾಗಿದೆ. ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ದೇಶದ ಅತ್ಯಂತ ದೊಡ್ಡ ಚಿಕಿತ್ಸಾ ಕೇಂದ್ರವಾಗಿದೆ. ಇಲ್ಲಿರುವ ಆರು ಸುಸಜ್ಜಿತ ಸಂಶೋಧನಾಲಯದಿಂದಾಗಿ ಇದನ್ನು ತಡೆಗಟ್ಟುವ ಅಂಶಗಳು ಆರಂಭಿಕ ರೋಗ ನಿರ್ಣಯ ಮೇಲ್ವಿಚಾರಣೆ ಮುನ್ಸೂಚನೆ ಹಾಗೂ ಕ್ಯಾನ್ಸರ್ ಬಂದ ಮೇಲೆ ಹೇಗೆ ನಿರ್ವಹಣೆ ಮಾಡುವುದು ಎನ್ನುವುದರ ಕುರಿತಂತೆ ಸಂಶೋಧನೆ ಮಾಡುವ ಮೂಲಭೂತ ಸಂಶೋಧನ ಕ್ರಿಯೆ ಕೂಡ ಇಲ್ಲಿ ನಡೆಯು.

ಹೆಚ್‌ಸಿಜಿ ಕ್ಯಾನ್ಸರ್ ಕೇಂದ್ರ ಬೆಂಗಳೂರು; ಇದು ರೋಗದ ಹಾರೈಕೆಯನ್ನು ನಿಭಾಯಿಸಲು ಒಂದು ಅತ್ಯುತ್ತಮ ಕೇಂದ್ರ ಎಂದು ಹೇಳಬಹುದಾಗಿದೆ. ಈ ಕಾಯಿಲೆಯ ಚಿಕಿತ್ಸೆಗೆ ಇಲ್ಲಿನ ಕ್ಲಿನಿಕ್ ಸ್ಥಾನಗಳು ಅತ್ಯುತ್ತಮವಾಗಿದೆ. ಇಲ್ಲಿ ಸಂಪೂರ್ಣ ಮಾರಣಾಂತಿಕ ಆರೈಕೆ ಹಾಗೂ ಚಿಕಿತ್ಸೆ ಪ್ರಮುಖ ಮಾನದಂಡವಾಗಿ ಕಾಣಿಸಿಕೊಳ್ಳುತ್ತದೆ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆ ಚಂಡಿಗಡ್; ವೈದ್ಯಕೀಯ ಶಿಕ್ಷಣ ಹಾಗೂ ರಿಸರ್ಚ್ ಸೆಂಟರ್ ಆಗಿರುವ ಈ ಸಂಸ್ಥೆಯಲ್ಲಿ ಕ್ಯಾನ್ಸರ್ ಗಾಗಿ ಚಿಕಿತ್ಸೆಯನ್ನು ಅತ್ಯುತ್ತಮ ಹಾಗೂ ಉತ್ಕೃಷ್ಟ ಗುಣಮಟ್ಟದಲ್ಲಿ ನೀಡಲಾಗುತ್ತದೆ. ಅಪ್ಲಾಸ್ಟಿಕ್ ಕಬ್ಬಿಣದ ಕೊರತೆ ಲಿಂಪೋಮಾ ಥಲಸ್ಸೇಮಿಯ ಮಾತ್ರವಲ್ಲದೆ ರಕ್ತಕ್ಕೆ ಸೇರಿದಂತಹ ಹಲವಾರು ಮಾರಕ ಚಿಕಿತ್ಸೆಗೆ ಅತ್ಯುತ್ತಮ ಆರೈಕೆ ಹಾಗೂ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ.