ಇಡೀ ದೇಶದ ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ಕಾರ್ತಿಕೇಯ -2 ಸಿನಿಮಾ OTT ಯಲ್ಲಿ ಬಿಡುಗಡೆಯಾಗುವುದು ಯಾವಾಗ ಗೊತ್ತೇ??
ಇಡೀ ದೇಶದ ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ಕಾರ್ತಿಕೇಯ -2 ಸಿನಿಮಾ OTT ಯಲ್ಲಿ ಬಿಡುಗಡೆಯಾಗುವುದು ಯಾವಾಗ ಗೊತ್ತೇ??
ತೆಲುಗಿನ ಕಾರ್ತಿಕೇಯ2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾ ತೆಲುಗು ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ನಿಖಿಲ್ ಸಿದ್ಧಾರ್ಥ್ ಮತ್ತು ಅನುಪಮಾ ಪರಮೇಶ್ವರನ್ ನಾಯಕ ನಾಯಕಿಯಾಗಿ ನಟಿಸಿದ್ದು, ಅನುಪಮ್ ಖೇರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕೇಯ2 ಸಿನಿಮಾ ತೆಲುಗಿನಲ್ಲಿ ಮಾತ್ರವಲ್ಲದೆ, ಹಿಂದಿಯಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಕಥೆ ಶ್ರೀಕೃಷ್ಣ ಹುಟ್ಟಿದ ಸ್ಥಳ ದ್ವಾರಕ ಮತ್ತು ಮಥುರಾನಲ್ಲಿ ನಡೆಯುವ ಕಾರಣ, ಹಿಂದಿಗೆ ಡಬ್ ಮಾಡಲಾಗಿದೆ.
ಹಿಂದಿ ಸಿನಿಪ್ರಿಯರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಯುವನಾಯಕನ ಸಿನಿಮಾ ಇಷ್ಟರ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು ಎಂದರೆ ತಪ್ಪಾಗುವುದಿಲ್ಲ. ಮಿಸ್ಟರಿ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಿನಿಪ್ರಿಯರಿಗೆ ಬಹಳ ಇಷ್ಟವಾಗಿದೆ. ಕಾರ್ತಿಕೇಯ2 ಸಿನಿಮಾ ಮೊದಲಿಗೆ ಬಹಳ ಕಡಿಮೆ ಸ್ಕ್ರೀನ್ಸ್, ಹಿಂದಿಯಲ್ಲಿ ಕೇವಲ 50 ಸ್ಕ್ರೀನ್ ಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಕಥೆ ಇಷ್ಟಪಟ್ಟು, ಜನರು ಥಿಯೇಟರ್ ಗೆ ಬರುತ್ತಿರುವ ಕಾರಣ, ಮುಂದಿನ ದಿನಗಳಲ್ಲಿ ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನ ಶುರುವಾಯಿತು. ಪ್ರಸ್ತುತ ಕಾರ್ತಿಕೇಯ2 ಸಿನಿಮಾ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದು ನಿಜಕ್ಕೂ ಬಹಳ ಆಶ್ಚರ್ಯ ಎಂದೇ ಹೇಳಲಾಗುತ್ತಿದೆ. ಸಿನಿಮಾದ 100 ಕೋಟಿ ಕಲೆಕ್ಷನ್ ಸಂಭ್ರಮ ಕರ್ನೂಲ್ ನಲ್ಲಿ ನಡೆಯಲಿದೆ. ಇನ್ನು ಈ ಸಿನಿಮಾ ಓಟಿಟಿಗೆ ಯಾವಾಗ ಬರುತ್ತದೆ ಎಂದು ಕೆಲವು ಸಿನಿಪ್ರಿಯರು ಕಾಯುತ್ತಿದ್ದಾರೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಕಾರ್ತಿಕೇಯ2 ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಿಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ಖರೀದಿ ಮಾಡಿದೆ, ಈಗ ಚಿತ್ರರಂಗದ ನಿಯಮದ ಪ್ರಕಾರ, ಯಾವುದೇ ಸಿನಿಮಾ ತೆರೆಕಂಡು 6 ವಾರಗಳ ಬಳಿಕ ಓಟಿಟಿಯಲ್ಲಿ ಬಿಡುಗಡೆ ಮಾಡಬಹುದು, ಕಾರ್ತಿಕೇಯ2 ಸಿನಿಮಾ ಆಗಸ್ಟ್ 13ರಂದು ಬಿಡುಗಡೆ ಆಗಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಓಟಿಟಿಯಲ್ಲಿ ಸ್ಟೀಮ್ ಆಗುವ ಸಾಧ್ಯತೆ ಇದೆ.