ವಿರಾಟ್ ಕೊಹ್ಲಿ ರವರು ಪಾಕಿಸ್ತಾನದ ವಿರುದ್ಧ ವಿಶೇಷ ಬ್ಯಾಟ್ ನಲ್ಲಿ ಆಡಲಿದ್ದಾರೆ, ಯಾವ ಬ್ಯಾಟ್ ಗೊತ್ತೇ?? ವಿಶೇಷತೆ ಏನು ಗೊತ್ತೇ??
ವಿರಾಟ್ ಕೊಹ್ಲಿ ರವರು ಪಾಕಿಸ್ತಾನದ ವಿರುದ್ಧ ವಿಶೇಷ ಬ್ಯಾಟ್ ನಲ್ಲಿ ಆಡಲಿದ್ದಾರೆ, ಯಾವ ಬ್ಯಾಟ್ ಗೊತ್ತೇ?? ವಿಶೇಷತೆ ಏನು ಗೊತ್ತೇ??
ಏಷ್ಯಾಕಪ್ ಪಂದ್ಯಗಳು ನಾಳೆಯಿಂದ ಶುರುವಾಗಲಿದೆ. ಭಾರತ ತಂಡ, ಅಫ್ಗಾನಿಸ್ತಾನ್ ಹಾಗು ಪಾಕಿಸ್ತಾನ್ ತಂಡಗಳು ಈಗಾಗಲೇ ಯುಎಇ ಗೆ ತೆರಳಿ ಅಭ್ಯಾಸ ಶುರು ಮಾಡಿದೆ. ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಪತ್ನಿ ಅನುಷ್ಕಾ ಮತ್ತು ಮಗಳ ಜೊತೆಗೆ ಯುಎಇ ತಲುಪಿದ್ದಾರೆ. ವಿರಾಟ್ ಅವರು ಅಭ್ಯಾಸವನ್ನು ಮಾಡುತ್ತಲಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿರಾಟ್ ಕೋಹ್ಲಿ ಅವರು ಕಳಪೆ ಫ್ಯಾರ್ಮ್ ಅನುಭವಿಸುತ್ತಿದ್ದಾರೆ. ಈಗ ವಿರಾಟ್ ಕೋಹ್ಲಿ ಅವರಿಗೆ ಕಂಬ್ಯಾಕ್ ಮಾಡುವ ಸಮಯ. ವಿರಾಟ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಿಂದ ವಿಶ್ರಾಂತಿ ಪಡೆದು ಇದೀಗ ಏಷ್ಯಾಕಪ್ ಪಂದ್ಯಗಳಿಗೆ ಮರಳಿ ಭಾರತ ತಂಡಕ್ಕೆ ಬಂದಿದ್ದಾರೆ.
ವಿರಾಟ್ ಅವರು ಈ ಬಾರಿ ಕಂಬ್ಯಾಕ್ ಮಾಡುವ ಸಲುವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆಗಸ್ಟ್ 28ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಾಂಡ್ಯ ವಿರಾಟ್ ಕೋಹ್ಲಿ ಅವರಿಗೆ ಬಹಳ ಮುಖ್ಯವಾದ ಪಂದ್ಯ ಆಗಿದೆ, ಏಕೆಂದರೆ ಇದು ವಿರಾಟ್ ಅವರು ಆಡಲಿರುವ 100ನೇ ಟಿ20 ಪಂದ್ಯ ಆಗಿದ್ದು, ಬಹಳ ವಿಶೇಷವಾದ ಪಂದ್ಯ ಆಗಿರಲಿದೆ. ಈ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಶತಕ ಸಿಡಿಸಿ ಕಂಬ್ಯಾಕ್ ಮಾಡುತ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಈವರೆಗೂ ಟಿ20 ಪಂದ್ಯಗಳಲ್ಲಿ ಕೋಹ್ಲಿ ಅವರು 50.12ರ ಸರಾಸರಿಯಲ್ಲೂ, 137.66 ಸ್ಟ್ರೈಕ್ ರೇಟ್ ನಲ್ಲಿ, 3308 ರನ್ ಗಳನ್ನು ಸಿಡಿಸಿದ್ದಾರೆ. ಟಿ20 ಪಂದ್ಯಗಳಲ್ಲಿ 30 ಅರ್ಧಶತಕಗಳನ್ನು ಗಳಿಸಿದ್ದಾರೆ. ಟಿ20 ಯಲ್ಲಿ ಇವರು ಒಂದು ಇನ್ನಿಂಗ್ಸ್ ನಲ್ಲಿ ಗರಿಷ್ಠ 94 ರನ್ ಗಳನ್ನು ಗಳಿಸಿದ್ದಾರೆ.
ವಿರಾಟ್ ಕೋಹ್ಲಿ ಅವರ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಅವರ ಬ್ಯಾಟ್ ಎಂದು ಹೇಳಲಾಗುತ್ತಿದೆ. ಡ್ರೈವ್ ಶಾಟ್ ಹೊಡೆಯುವಾಗ, ಬ್ಯಾಟ್ ನ ಸ್ವಭಾವ ಅರ್ಥವಾಗದ ಕಾರಣ ವಿರಾಟ್ ಔಟ್ ಆಗುತ್ತಾರೆ ಎನ್ನಲಾಗಿದೆ. ಹಾಗಾಗಿ ವಿರಾಟ್ ಕೋಹ್ಲಿ ಅವರು ಮುಂದಿನ ಪಂದ್ಯದಲ್ಲಿ ವಿಶೇಷವಾದ ಬ್ಯಾಟ್ ಬಳಸಿದ್ದಾರೆ. ಎಂ.ಆರ್.ಎಫ್ ಸಂಸ್ಥೆ ತಯಾರಿಸಿರುವ ವಿಶೇಷವಾದ, ಸ್ಪೆಷಲ್ ಗೋಲ್ಡ್ ವಿಝಾರ್ಡ್ ಕ್ವಾಲಿಟಿ ಬ್ಯಾಟ್ ಬಳಸಿ ಬ್ಯಾಟಿಂಗ್ ಮಾಡಲಿದ್ದಾರೆ ಕಿಂಗ್ ಕೋಹ್ಲಿ. ಈ ಬ್ಯಾಟ್ ನ ವಿಲೋ ಮರದಿಂದ ತಯಾರಿಸಲಾಗಿದೆ. ಈ ಹ್ಯಾಟ್ ನ ಬೆಲೆ ₹27,399 ರೂಪಾಯಿಗಳು ಎಂದು ಮಾಹಿತಿ ಸಿಕ್ಕಿದೆ. ಪ್ರಸಿದ್ಧ ಟೈರ್ ಕಂಪನಿ ಎಂ.ಆರ್.ಎಫ್ ಈ ಬ್ಯಾಟ್ ಅನ್ನು ತಯಾರಿಸಿದೆ. ವಿರಾಟ್ ಕೋಹ್ಲಿ ಅವರು ಈ ಬ್ಯಾಟ್ ಇಂದ ಸುಲಭವಾಗಿ ಡ್ರೈವ್ ಶಾಟ್ ಗಳನ್ನು ಭಾರಿಸಬಹುದು ಎನ್ನಲಾಗುತ್ತಿದೆ. ಈ ಬ್ಯಾಟ್ ನ ಪ್ರಭಾವ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.