ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮನೆಯಲ್ಲಿಯೇ ಕುಳಿತು, ಜಿಯೋ ರಿಚಾರ್ಜ್ ಮಾಡುವೆ ಮೂಲಕ ಹಣಗಳಿಸುವುದು ಹೇಗೆ ಗೊತ್ತೇ?? ಶಾಪ್ ಕೂಡ ತೆರೆಯಬಹುದು.

23

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಹಲವಾರು ಮೂಲೆಗಳಿಂದ ಹಣವನ್ನು ಸಂಪಾದಿಸುವ ವಿದ್ಯೆ ಕಲಿಯಬೇಕು ಎನ್ನುವ ಆಸೆ ಇರುತ್ತದೆ. ಯಾಕೆಂದರೆ ತಿಂಗಳ ಅಂತ್ಯಕ್ಕೆ ಬರುವಾಗ ಯಾರ ಕಿಸೆಯಲ್ಲಿ ಕೂಡ ಹಣ ಇರುವುದಿಲ್ಲ. ಜಿಯೋ ಸಂಸ್ಥೆಯ ಹೊಸ ಯೋಜನೆಯಿಂದ ನೀವು ಮನೆಯಲ್ಲಿ ಕೂತು ಅದರಲ್ಲೂ ಮನೆಯಲ್ಲೇ ಇರುವಂತಹ ಗ್ರಹಿಣಿಯರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಹೌದು ಗೆಳೆಯರೇ ಜಿಯೋ ಪೋಸ್ ಲೈಟ್ ಎನ್ನುವ ಅಪ್ಲಿಕೇಶನ್ ಮೂಲಕ ನೀವು ಮನೆಯಲ್ಲಿ ಕೂತು ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ಹಣವನ್ನು ಗಳಿಸಬಹುದಾಗಿದೆ ಎಂಬುದಾಗಿ ತಿಳಿದುಬಂದಿದೆ.

ಇದರಲ್ಲಿ ನೀವು ಹೆಚ್ಚು ರಿಚಾರ್ಜ್ ಮಾಡಿದಷ್ಟು ಇನ್ನಷ್ಟು ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. JioPOS Lite ಮೂಲಕ ರಿಚಾರ್ಜ್ ಮಾಡಿ ನೀವು ಅದರಿಂದ ಕಮಿಷನ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ರಿಚಾರ್ಜ್ ಮಾಡುವ ಮೂಲಕ ನೀವು 4.16% ಕಮಿಷನ್ ಹಣ ದೊರೆಯುತ್ತದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಅದರಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಜಿಯೋ ಚಂದಾದಾರರಿಗೆ ನೀವು ರಿಚಾರ್ಜ್ ಮಾಡಿ ಅದರಿಂದ ಕಮಿಷನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಮೊದಲಿಗೆ ನಿಮ್ಮ ಬಳಿ ಜಿಯೋ ಸಿಮ್ ಹಾಗೂ ನಂಬರ್ ಇರಲೇಬೇಕು. ನೋಂದಣಿ ಪ್ರಕ್ರಿಯೆ ಮುಕ್ತಾಯದ ನಂತರ ನಿಮ್ಮ ವ್ಯಾಲೆಟ್ ಗೆ ಹಣ ಹಾಕಲು ಹೇಳುತ್ತದೆ. ಆಗ ನೀವು ಯಾರಿಗೆ ಇದನ್ನು ರಿಚಾರ್ಜ್ ಮಾಡಿದರೆ ನಿಮಗೆ ಕಮಿಷನ್ ರೂಪದಲ್ಲಿ ಹಣ ಸಿಗುತ್ತದೆ.

ಇನ್ನೂ ನೋಂದಣಿ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ಹೇಳುತ್ತೇವೆ ಬನ್ನಿ. ಮೊದಲಿಗೆ JioPOS Lite ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ನಿಮ್ಮ ಹೆಸರು ಹಾಗೂ ಸ್ಥಳವನ್ನು ನಮೂದಿಸಿ ನಂತರ ಮುಂದಿನ ಹಂತಕ್ಕೆ ಕ್ಲಿಕ್ ಮಾಡಿ. ಇದಾದ ನಂತರ ನಿಮ್ಮ ಜಿಮೇಲ್ ಹಾಗೂ ಜಿಯೋ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಬೇಕಾಗುತ್ತದೆ. ನಂತರ ಒಟಿಪಿಯನ್ನು ಜನರೇಟ್ ಮಾಡಿ ನಿಮ್ಮ ನಂಬರಿಗೆ ಓಟಿಪಿ ಬಂದಿರುತ್ತದೆ. ಒಟಿಪಿಯನ್ನು ನಮೂದಿಸಿ ಕ್ಲಿಕ್ ಮಾಡಿ. ನಂತರ ನಿಮ್ಮ ಬ್ಯಾಂಕ್ ವರ್ಗಾವಣೆಯ ಎಲ್ಲ ದಾಖಲೆಗಳನ್ನು ಕೂಡ ನಮೂದಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಲೋಡ್ ಮನಿ ಗೆ ಒಪ್ಪಿಗೆ ನೀಡಿದ ನಂತರವೇ ನಿಮ್ಮ ಖಾತೆಯಿಂದ ಹಣ ಕಟ್ ಆಗುತ್ತದೆ ಹಾಗೂ ಕಮಿಷನ್ ಇಂದ ಬರುವಂತಹ ಲಾಭವೂ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.

Get real time updates directly on you device, subscribe now.