ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭುವನೇಶ್ವರ್ ವಿಶ್ವಕಪ್ ಭವಿಷ್ಯದ ಕುರಿತು ಶಾಕಿಂಗ್ ಭವಿಷ್ಯ ನುಡಿದ ಮಾಜಿ ಕ್ರಿಕೆಟಿಗ ನೆಹ್ರಾ, ಹೇಳಿದ್ದೇನು ಗೊತ್ತೇ??

57

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕಳೆದ ಬಾರಿ ದುಬೈನಲ್ಲಿ ನಡೆದಂತಹ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಇತಿಹಾಸದಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುವ ಮೂಲಕ ನಾಕ್ಔಟ್ ಹಂತಕ್ಕೂ ಮೊದಲೇ ಭಾರತೀಯ ಕ್ರಿಕೆಟ್ ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಹೀಗಾಗಿ ಈ ಬಾರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಂದ ಹಿಡಿದು ಕೋಚ್ ರಾಹುಲ್ ದ್ರಾವಿಡ್ ರವರ ತನಕ ಪ್ರತಿಯೊಬ್ಬರು ಕೂಡ ಅತ್ಯುತ್ತಮ ತಂಡವನ್ನು ಈ ಬಾರಿಯ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಗೆ ಕಳುಹಿಸಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಐಪಿಎಲ್ ನಲ್ಲಿ ಯುವ ಆಟಗಾರರು ಅತ್ಯಂತ ಅದ್ಭುತವಾಗಿ ಪ್ರದರ್ಶನವನ್ನು ನೀಡುವ ಹಂತದಿಂದ ಪ್ರಾರಂಭವಾಗಿ ಈಗಾಗಲೆ ತಂಡದಲ್ಲಿ ಅತ್ಯಂತ ಪ್ರಬುದ್ಧತೆಯಿಂದ ತಂಡದ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿರುವ ಆಟಗಾರರ ವರೆಗೂ ವಿಶ್ವಕಪ್ ತಂಡಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುರಿತಂತೆ ಸಾಕಷ್ಟು ಗೊಂದಲ ನಿರ್ಮಾಣವಾಗಿದ್ದು ಆಟಗಾರರ ನಡುವೆ ಸ್ಥಾನಗಳಿಗಾಗಿ ಪೈಪೋಟಿ ಕೂಡ ಎದುರಾಗಿದೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಕೆಲವೊಂದು ಅನುಭವಿ ಆಟಗಾರರನ್ನು ಮೀರಿರುವ ಕೆಲವು ಯುವ ಆಟಗಾರರು ಅವರನ್ನು ಮೀರಿಸಿ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ವಿಶ್ವಕಪ್ ತಂಡದಲ್ಲಿ ಭುವನೇಶ್ವರ್ ಕುಮಾರ್ ಸ್ಥಾನ ಪಡೆಯುವುದರ ಕುರಿತಂತೆ ಮಾಜಿ ವೇಗಿ ನೆಹ್ರಾ ಕೆಲವೊಂದು ಮಾತುಗಳನ್ನಾಡಿದ್ದಾರೆ. ಕಳೆದ ಎರಡು ಐಪಿಎಲ್ ಗಳಿಗಿಂತ ಈ ಬಾರಿ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಅವರಲ್ಲಿ ಬೌಲಿಂಗ್ ಅಲ್ಲಿ ಸಾಕಷ್ಟು ವೇರಿಯೇಶನ್ ಗಳಿದ್ದು ನಕಲ್ ಬಾಲ್ ಸ್ಲೋ ಬಾಲ್ ಹಾಗೂ 130 ಕಿಲೋಮೀಟರ್ ಸ್ಪೀಡ್ ಅಲ್ಲಿ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯವಿದೆ ಎಂಬುದಾಗಿ ಹೇಳಿದ್ದಾರೆ.

ಆದರೂ ಕೂಡ ಸದ್ಯಕ್ಕೆ ವೇಗಿಗಳ ವಿಚಾರದಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗುವ ಸಾಕಷ್ಟು ಸ್ಪರ್ಧೆ ಗಳಿದ್ದು ಭುವನೇಶ್ವರ್ ಕುಮಾರ್ ರವರು ಈ ಸಂದರ್ಭದಲ್ಲಿ ಫಿಟ್ನೆಸ್ ಹಾಗೂ ಕನ್ಸಿಸ್ಟೆಂಟ್ ಆದಿ ಬೌಲಿಂಗ್ ಮಾಡುವುದು ಪ್ರಮುಖವಾಗಿದೆ ಎಂಬುದಾಗಿ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಹಲವಾರು ಬಾರಿ ಭುವನೇಶ್ವರ್ ಕುಮಾರ್ ಅವರು ಇಂಜುರಿ ಗಳಿಂದ ತಂಡದಿಂದ ಹೊರ ಹೋಗಿದ್ದಾರೆ ಹೀಗಾಗಿ ಈ ಕುರಿತಂತೆ ಕೂಡ ಸ್ವಲ್ಪ ಮಟ್ಟಿಗೆ ನಿಗಾ ವಹಿಸುವುದು ಉತ್ತಮ.

Get real time updates directly on you device, subscribe now.