ದಿನೇಶ್ ಆಯ್ಕೆಯನ್ನು ಎಲ್ಲರೂ ಪ್ರಶ್ನೆ ಮಾಡುತ್ತಿರುವಾಗ ವಿಶ್ವಕಪ್ ತಂಡದಲ್ಲಿ ದಿನೇಶ್ ಆಯ್ಕೆ ಕುರಿತು ಕೈಫ್ ಹೇಳಿದ್ದೇನು ಗೊತ್ತೇ??

ದಿನೇಶ್ ಆಯ್ಕೆಯನ್ನು ಎಲ್ಲರೂ ಪ್ರಶ್ನೆ ಮಾಡುತ್ತಿರುವಾಗ ವಿಶ್ವಕಪ್ ತಂಡದಲ್ಲಿ ದಿನೇಶ್ ಆಯ್ಕೆ ಕುರಿತು ಕೈಫ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡದಿಂದ ಹೊರಹೋಗಿದ್ದ ದಿನೇಶ್ ಕಾರ್ತಿಕ್ ರವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಅತ್ಯದ್ಭುತ ಫಿನಿಶಿಂಗ್ ಬ್ಯಾಟ್ಸ್ಮನ್ ಜವಾಬ್ದಾರಿಯನ್ನು ನಿರ್ವಹಿಸಿ ಮೂರು ವರ್ಷಗಳ ನಂತರ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಅತ್ಯುತ್ತಮ ಪ್ರದರ್ಶನವನ್ನು ನೀಡುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಐಪಿಎಲ್ ನಡೆಯುತ್ತಿದ್ದ ಸಂದರ್ಭದಲ್ಲಿಯೇ ದಿನೇಶ್ ಕಾರ್ತಿಕ್ ರವರು ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರವಾಗಿ ಮಾತ್ರವಲ್ಲ ದೇಶಕ್ಕಾಗಿ ಆಡಿ ಕಪ್ ಗೆಲ್ಲುವ ಉದ್ದೇಶವನ್ನು ನಾನು ಹೊಂದಿದ್ದೇನೆ ಎಂಬುದಾಗಿ ಕೂಡಾ ಹೇಳಿಕೊಂಡಿದ್ದರು.

ಹೀಗಾಗಿ ಈಗ ಅವರು ತೋರುತ್ತಿರುವ ಪ್ರದರ್ಶನ ಖಂಡಿತವಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತೀಯ ತಂಡದಲ್ಲಿ ಆಯ್ಕೆಯಾಗಲು ನಡೆಸುತ್ತಿರುವ ಕಸರತ್ತು ಎಂಬುದಾಗಿ ತಿಳಿದುಬರುತ್ತದೆ. ಕೆಲವು ಆಟಗಾರರು ದಿನೇಶ್ ಕಾರ್ತಿಕ್ ರವರು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗುವುದನ್ನು ಬೆಂಬಲಿಸಿದರೆ ಇನ್ನು ಕೆಲವು ಆಟಗಾರರು ಅವರ ಪರ್ಫಾರ್ಮೆನ್ಸ್ ಕುರಿತಂತೆ ಇನ್ನೂ ಕೂಡ ಕೆಲವರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಈ ಕುರಿತಂತೆ ಹಲವಾರು ಚರ್ಚೆಗಳು ನಡೆಯುತ್ತಿವೆ. ಆದರೆ ದಿನೇಶ್ ಕಾರ್ತಿಕ್ ರವರನ್ನು ತಂಡಗಳು ಆಯ್ಕೆಮಾಡುವ ಮಹತ್ವ ತೆಯ ಕುರಿತಂತೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೆ ತಂಡದಲ್ಲಿ ಆರಂಭಿಕ ಕ್ರಮಾಂಕ ಗಳಲ್ಲಿ ಆಡಲು ರೋಹಿತ್ ಶರ್ಮಾ ಕೆಎಲ್ ರಾಹುಲ್ ವಿರಾಟ್ ಕೊಹ್ಲಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಅವರಂತಹ ಹಲವಾರು ಆಟಗಾರರಿದ್ದಾರೆ ಆದರೆ ತಂಡದಲ್ಲಿ ಫಿನಿಶಿಂಗ್ ಜವಾಬ್ದಾರಿ ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇತ್ತೀಚಿನ ದಿನಗಳಲ್ಲಿ ದಿನೇಶ್ ಕಾರ್ತಿಕ್ ರವರಿಂದ ಈ ಜವಾಬ್ದಾರಿಯನ್ನು ಅದ್ಭುತವಾಗಿವೆ ನಿರ್ವಹಿಸುವಂತಹ ಬೇರೆ ಆಟಗಾರ ಇಲ್ಲ ಹೀಗಾಗಿ ವಿಶ್ವಕಪ್ ತಂಡದಲ್ಲಿ ಅವರನ್ನು ಆಯ್ಕೆ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದಾಗಿ ದಿನೇಶ್ ಕಾರ್ತಿಕ್ ರವರ ಪರವಾಗಿ ನಿಜವಾದ ಕಾರಣಗಳೊಂದಿಗೆ ಬ್ಯಾಟ್ ಬೀಸಿದ್ದಾರೆ.