ಬಿಗ್ ನ್ಯೂಸ್: ಭಾರತದ ತಂಡದ ಮಹತ್ವದ ಬದಲಾವಣೆಗೆ ಮುಂದಾದ ರಾಹುಲ್, ರೋಹಿತ್ ಗೆ ಕಾದಿದೆಯೇ ಶಾಕ್?? ತೆಗೆದುಕೊಂಡಿರುವ ನಿರ್ಧಾರವೇನು ಗೊತ್ತೇ?

ಬಿಗ್ ನ್ಯೂಸ್: ಭಾರತದ ತಂಡದ ಮಹತ್ವದ ಬದಲಾವಣೆಗೆ ಮುಂದಾದ ರಾಹುಲ್, ರೋಹಿತ್ ಗೆ ಕಾದಿದೆಯೇ ಶಾಕ್?? ತೆಗೆದುಕೊಂಡಿರುವ ನಿರ್ಧಾರವೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೋಹಿತ್ ಶರ್ಮ ಹಾಗೂ ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದ ಸ್ಥಾನವನ್ನು ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಸಂದರ್ಭದಲ್ಲಿ ರಿಷಬ್ ಪಂತ್ ಅವರಿಗೆ ನೀಡಲಾಗಿತ್ತು. ಅವರ ನಂತರ ಈಗ ಐರ್ಲೆಂಡ್ ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗಿದೆ. ಹೌದು ಗೆಳೆಯರೇ ಐರ್ಲೆಂಡ್ ವಿರುದ್ಧದ ಎರಡು ಟಿ-ಟ್ವೆಂಟಿ ಪಂದ್ಯಗಳು ಜೂನ್ 26 ಹಾಗೂ 28 ನೇ ತಾರೀಖಿನಂದು ನಡೆಯಲಿದೆ.

ಇದಾದನಂತರ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಾಗಿದ್ದ ಒಂದು ಟೆಸ್ಟ್ ಪಂದ್ಯವನ್ನು ಇಂಗ್ಲೆಂಡಿನ ಎಡ್ಜ್ ಬಾಸ್ಟನ್ ನಲ್ಲಿ ಆಡಲಿದೆ. ಆದರೆ ಈಗ ಕೇಳಿಬರುತ್ತಿರುವ ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ ಇಂಗ್ಲೆಂಡ್ ವಿರುದ್ಧ ಜುಲೈ 7ರಿಂದ ಆರಂಭವಾಗುವ ಟಿ-ಟ್ವೆಂಟಿ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ರವರೇ ಆಯ್ಕೆ ಆಗಲಿದ್ದು ಈ ತಂಡವು ಕೂಡ ಐರ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಆಡಿರುವ ತಂಡವೇ ಆಗಿರಲಿದೆ ಎಂಬುದಾಗಿ ತಿಳಿದುಬಂದಿದೆ. ಟೆಸ್ಟ್ ಪಂದ್ಯವನ್ನು ಆಡಿದ ನಂತರ ಟಿ-ಟ್ವೆಂಟಿ ಆಡುವಂತಹ ಮನೋಭಾವದಲ್ಲಿ ಕ್ರಿಕೆಟಿಗರು ಇರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಈ ರೀತಿ ಮಾಡಲಾಗಿದೆ ಎಂಬುದಾಗಿ ಕೇಳಿಬರುತ್ತಿದೆ.

ಆದರೂ ಕೂಡ ಮೂರು ಫಾರ್ಮೆಟ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ಹೊಂದಿರುವ ರೋಹಿತ್ ಶರ್ಮಾ ರವರ ಉಪಸ್ಥಿತಿಯಲ್ಲಿ ಕೂಡ ಹಾರ್ದಿಕ್ ಪಾಂಡ್ಯ ರವರಿಗೆ ನಾಯಕತ್ವವನ್ನು ನೀಡುತ್ತಿರುವುದು ರೋಹಿತ್ ಶರ್ಮ ರವರ ನಾಯಕತ್ವದ ಎಚ್ಚರಿಕೆಯ ಗಂಟೆ ಆಗಿದೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಬಿಸಿಸಿಐನ ಈ ನಿರ್ಧಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.