ಸ್ಪೈಡರ್ ಮ್ಯಾನ್ ಕಲೆಕ್ಷನ್ ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತೆ?? ಯಪ್ಪಾ ಇಷ್ಟೊಂದಾ ?? ಭಾರತದಲ್ಲಿ ಎಷ್ಟು ಗೊತ್ತೇ ??

ಸ್ಪೈಡರ್ ಮ್ಯಾನ್ ಕಲೆಕ್ಷನ್ ಮಾಡಿದ್ದು ಎಷ್ಟು ಸಾವಿರ ಕೋಟಿ ಗೊತ್ತೆ?? ಯಪ್ಪಾ ಇಷ್ಟೊಂದಾ ?? ಭಾರತದಲ್ಲಿ ಎಷ್ಟು ಗೊತ್ತೇ ??

ನಮಸ್ಕಾರ ಸ್ನೇಹಿತರೇ ಕ್ರಿಸ್ಮಸ್ ವಿಶೇಷವಾಗಿ ಕ್ರಿಸ್ಮಸ್ ಒಂದು ವಾರ ಮುಂಚೆಯೇ ಬಿಡುಗಡೆ ಆದಂತಹ ಮಾರ್ವೆಲ್ ಸಂಸ್ಥೆಯ ಸ್ಪೈಡರ್ ಮ್ಯಾನ್ ನೋ ವೇ ಹೋಂ ಚಿತ್ರ ಈಗಾಗಲೇ ಜಾಗತಿಕವಾಗಿ ಬಾಕ್ಸಾಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಮಾರ್ವೆಲ್ ಸಂಸ್ಥೆಯ ಚಿತ್ರಗಳು ಬಿಡುಗಡೆ ಆಗುತ್ತವೆ ಎಂದರೆ ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುವುದು ಮಾಮೂಲಿ. ಆದರೆ ಸ್ಪೈಡರ್ ಮ್ಯಾನ್ ನೋ ವೇ ಹೋಂ ಚಿತ್ರ ನಿರೀಕ್ಷೆಗೂ ಮೀರಿ ಕೇವಲ ಜಾಗತಿಕವಾಗಿ ಮಾತ್ರವಲ್ಲದೆ ಭಾರತೀಯ ಚಿತ್ರಮಂದಿರಗಳಲ್ಲೂ ಕೂಡ ಬರೋಬರಿ ಕಲೆಕ್ಷನ್ ಮಾಡುತ್ತಿದೆ.

ಭಾರತದಲ್ಲಿ ಮಹಾಮಾರಿಯ ಕಾರಣದಿಂದಾಗಿ ನೈಟ್ ಸಮಯದಲ್ಲಿ ಹಾಗೂ ಇತರೆ ತಡೆಗಳನ್ನು ಹಾಕಿದರೂ ಕೂಡ ಪ್ರೇಕ್ಷಕರು ಸಿನಿಮಾ ಮಂದಿರಗಳಿಗೆ ಹೋಗಿ ಸ್ಪೈಡರ್ ಮ್ಯಾನ್ ಚಿತ್ರವನ್ನು ನೋಡುತ್ತಿದ್ದಾರೆ ಎಂದರೆ ಚಿತ್ರದ ನಿಜವಾದ ಗೆಲುವು ಎಂದು ನಾವು ಅರ್ಥೈಸಿಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಅದೆಷ್ಟು ಭಾರತೀಯ ಚಿತ್ರಗಳು ಕೂಡ ಈ ಸಂದರ್ಭದಲ್ಲಿ ಬಿಡುಗಡೆಯಾದರೂ ಪ್ರೇಕ್ಷಕರ ಮೊದಲ ಆದ್ಯತೆ ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಸಿಗುತ್ತಿದೆ. 2ಡಿ ಹಾಗೂ 3ಡಿ ವಿಧಾನದಲ್ಲಿ ಕೂಡ ಚಿತ್ರವನ್ನು ನೋಡುವ ಅವಕಾಶ ಪ್ರೇಕ್ಷಕರೆ ಸಿಕ್ಕಿರುವುದು ಮತ್ತೊಂದು ವಿಶೇಷವಾಗಿದೆ.

ಹಾಗಿದ್ದರೆ ಸ್ಪೈಡರ್ ಮ್ಯಾನ್ ನೋ ವೇ ಹೋಂ ಚಿತ್ರ ಜಾಗತಿಕವಾಗಿ ಹಾಗೂ ಭಾರತ ದೇಶದಲ್ಲಿ ಎಷ್ಟು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂಬುದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲಿದ್ದೇವೆ ಕೊನೆಯವರೆಗೂ ಲೇಖನಿಯನ್ನು ಓದಿ‌. ಹೌದು ಗೆಳೆಯರೇ ಈಗಾಗಲೇ ಈ ಚಿತ್ರ ಕೇವಲ ಹನ್ನೆರಡು ದಿನಗಳಲ್ಲಿ 7501 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂದರೆ ಈಗಾಗಲೇ 1 ಬಿಲಿಯನ್ ಡಾಲರ್ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಸ್ಪೈಡರ್ ಮ್ಯಾನ್ ನೋ ವೇ ಹೋಂ ಚಿತ್ರ ಜಾಗತಿಕವಾಗಿ ಮಾಡಿದೆ. ಇದಕ್ಕೂ ಮುನ್ನ ಮಾರ್ವೆಲ್ ಸಂಸ್ಥೆಯ ಚಿತ್ರಗಳಾಗಿರುವ ಅವೆಂಜರ್ಸ್ ಇನ್ಫಿನಿಟಿ ವಾರ್ ಹಾಗೂ ಎಂಡ್ ಗೇಮ್ ಚಿತ್ರಗಳು ಕೇವಲ ಹನ್ನೊಂದು ದಿನಗಳಲ್ಲಿ ಒಂದು ಬಿಲಿಯನ್ ಡಾಲರ್ ಗಳಿಸಿರುವ ಸಾಧನೆಯನ್ನು ಮಾಡಿದ್ದವು. ಇನ್ನು ಭಾರತದಲ್ಲಿ ಸ್ಪೈಡರ್ ಮ್ಯಾನ್ ನೋ ವೇ ಹೋಂ ಚಿತ್ರ ಬರೋಬ್ಬರಿ 155 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಬಾಕ್ಸ್ ಆಫೀಸ್ ಕಲೆಕ್ಷನ್ ಚಿತ್ರವನ್ನು ಭಾರತೀಯರು ಎಷ್ಟರಮಟ್ಟಿಗೆ ಮೆಚ್ಚಿಕೊಂಡಿದ್ದಾರೆ ಎಂಬುದಾಗಿ ಸಾಬೀತುಪಡಿಸುತ್ತದೆ.