ಪೌರಾಣಿಕಗಳಲ್ಲಿ ಬರುವ ಶಿವನ ಪಿನಾಕ ಮತ್ತು ವಿಷ್ಣುವಿನ ಸಾರಂಗ ಇವೆರಡು ಅಸ್ತ್ರಗಳಲ್ಲಿ ಯಾವುದು ಶ್ರೇಷ್ಠ ಗೊತ್ತಾ??

ಪೌರಾಣಿಕಗಳಲ್ಲಿ ಬರುವ ಶಿವನ ಪಿನಾಕ ಮತ್ತು ವಿಷ್ಣುವಿನ ಸಾರಂಗ ಇವೆರಡು ಅಸ್ತ್ರಗಳಲ್ಲಿ ಯಾವುದು ಶ್ರೇಷ್ಠ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಪೌರಾಣಿಕ ಕಥೆಗಳನ್ನು ಸಾಕಷ್ಟು ದೇವತೆಗಳು ಅನೇಕ ಅವತಾರಗಳನ್ನು ಧರಿಸಿ ನಮ್ಮ ಧರೆಗೆ ಅಧರ್ಮವನ್ನು ಹೊಡೆದೋಡಿಸಲು ಜನ್ಮ ತಾಳಿದರು. ಅದೇ ರೀತಿ ಶ್ರೀರಾಮ ಕೂಡ ರಾವಣನನ್ನು ಸಂ-ಹಾರ ಮಾಡಲು ಧರೆಗಿಳಿದಿದ್ದರು. ಒಂದು ಬಾರಿ ವಿಶ್ವಮಿತ್ರರ ಯಜ್ಞವನ್ನು ಭಂಗಗೊಳಿಸುತ್ತಿದ್ದ ರಾಕ್ಷಸರನ್ನು ಸಂ-ಹಾರ ಮಾಡಲು ರಾಮ ಮತ್ತು ಲಕ್ಷ್ಮಣರು ಹೊರಟರು. ಈ ಸಮಯದಲ್ಲಿ ರಾಮ ಮತ್ತು ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಜನಕ ಮಹಾರಾಜನ ರಾಜ್ಯದಲ್ಲಿ ಬರುತ್ತಾರೆ. ಆ ಸಂದರ್ಭದಲ್ಲಿ ಜನಕ ಮಹಾರಾಜನ ಮಗಳಾದ ಸೀತೆಗೆ ಸ್ವಯಂವರ ಏರ್ಪಡಿಸಲಾಗಿರುತ್ತದೆ.

ಇನ್ನೂ ಅಲ್ಲಿ ಶಿವಧನಸ್ಸನ್ನು ಎದೆಗೇರಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವಿಜೇತರಿಗೆ ಸೀತೆಯನ್ನು ಕೊಟ್ಟು ಮದುವೆ ಮಾಡುತ್ತೇನೆಂದು ಜನಕಮಹಾರಾಜ ಹೇಳಿದರು. ಆಗ ಈ ಭೂಮಿ ಮೇಲೆ ಇದ್ದ ಎಲ್ಲ ರಾಜರೂ ಜನಕ ಮಹಾರಾಜನ ಆಸ್ಥಾನದಲ್ಲಿ ಶಿವಧನಸ್ಸನ್ನು ಎದೆಗೇರಿಸಲು ಬಂದಿದ್ದರು. ಆದರೆ ಅಲ್ಲಿ ರಾಜರಲ್ಲಿ ಆ ರೀತಿ ಮಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಶ್ರೀರಾಮ ಮುಂದೆ ಬಂದು ಶಿವಧನಸ್ಸನ್ನು ಎದೆಗೇರಿಸಿದಾಗ ಆ ಶಿವಧನಸ್ಸು ಮುರಿದು ಹೋಯಿತು. ಇನ್ನು ಅಲ್ಲಿ ನೆರೆದಿದ್ದ ಎಲ್ಲ ರಾಜರು ಕೂಡ ಇದನ್ನು ಕಂಡು ಅಚ್ಚರಿಯಾದರು. ಇನ್ನು ಇದನ್ನು ತಿಳಿದ ಪರಶುರಾಮರು ಅಲ್ಲಿಗೆ ಬಂದು ಶ್ರೀರಾಮ ಶಿವಧನಸ್ಸನ್ನು ಮುರಿದು ನೋಡಿ ನಾನು ನಿನಗೆ ಶಾಪ ನೀಡುತ್ತೇನೆ ಎಂದು ಹೇಳುತ್ತಾರೆ.

ಆದರೆ ಪರಶುರಾಮರು ಆ ಸಂದರ್ಭದಲ್ಲಿ ವಿಚಾರ ಮಾಡಿ ತಮ್ಮ ಬಳಿಇದ್ದ ಸಾರ್ ಅಂಗವನ್ನು ಶ್ರೀರಾಮನಿಗೆ ನೀಡಿ ಇದನ್ನು ಎದೆಗೇರಿಸಲು ಹೇಳುತ್ತಾರೆ. ಅದರಂತೆ ಶ್ರೀರಾಮ ಸಾರಂಗ ವನ್ನು ಎದೆಗೇರಿಸಿ ಗುರಿ ಸಾಧಿಸುತ್ತಾರೆ. ಆಗ ಚಕಿತಗೊಂಡ ಪರಶುರಾಮರು ಶ್ರೀರಾಮನು ವಿಷ್ಣುವಿನ ಅವತಾರ ಎಂದು ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಅವರ ಬಳಿಯಿದ್ದ ಸಾರಂಗ್ ಅದನ್ನು ಕೂಡ ಶ್ರೀರಾಮನಿಗೆ ಕೊಟ್ಟು ಅಲ್ಲಿಂದ ಹೊರಟು ಹೋಗುತ್ತಾರೆ. ಇನ್ನು ಈ ಸಮಯದಲ್ಲಿ ಕ್ಷತ್ರಿಯರ ವಿರುದ್ಧ ಕುದಿಯುತ್ತಿದ್ದ ಪರಶುರಾಮನನ್ನು ಶ್ರೀರಾಮ ಶಾಂತಗೊಳಿಸುತ್ತಾರೆ. ಇನ್ನು ಈ ಶಿವಧನಸ್ಸು ಹಾಗೂ ಸರಂಗದ ಮಧ್ಯೆ ಒಂದು ದೊಡ್ಡ ಕಥೆ ಇದೆ. ಅದು ಏನು ಎಂಬುದು ಈ ಮುಂದೆ ತಿಳಿಯಿರಿ.

ಹೌದು ಶಿವಧನಸ್ಸು ಹಾಗೂ ಸಾರಂಗ ವನ್ನು ನಿರ್ಮಿಸಿದವರು ದೇವಶಿಲ್ಪಿ ವಿಶ್ವಕರ್ಮ. ಇನ್ನು ಶಿವ ಧನಸ್ಸಿಗೇ ಪಿನಾಕ ಎಂದು ಕರೆಯಲಾಗುತ್ತದೆ. ವಿಶ್ವಕರ್ಮರು ದದೀಚಿ ಮಹರ್ಷಿಯ ಮೂಳೆ ಎಂದ ಇಂದ್ರನ ವಜ್ರಸ್ತ್ರವನ್ನು ರಚಿಸಿದಂತೆ ಕನಸುಗಳನ್ನು ರಚಿಸಿದರು. ನಂತರದಲ್ಲಿ ಇದೆ ದದೀಚಿ ಮಹರ್ಷಿಯ ಮೂಳೆಯಿಂದ ಅರ್ಜುನನ ಗಾಂಡೀವ ಧನಸ್ಸನ್ನು ಕೂಡ ನಿರ್ಮಿಸಿದರು. ಧನಸ್ಸುಗಳಲ್ಲಿ ಪಿನಾಕ ಧನಸ್ಸನ್ನು ಶಿವನಿಗೆ, ಸಾರಂಗ ಧನಸ್ಸನ್ನು ವಿಷ್ಣುವಿಗೆ ನೀಡಿದ್ದರು. ಕೆಲವು ಸಮಯದ ನಂತರ ದೇವತೆಗಳಲ್ಲಿ ಶಿವನ ಧನಸ್ಸು ಹಾಗೂ ವಿಷ್ಣುವಿನ ಸಾರಂಗ ಧನಸುವಿನಲ್ಲಿ ಯಾವುದು ಶ್ರೇಷ್ಠ ಎಂಬ ಗೊಂದಲ ಪ್ರಾರಂಭವಾಗುತ್ತದೆ. ಹೀಗಾಗಿ ಅವರೆಲ್ಲರೂ ಬ್ರಹ್ಮನ ಬಳಿ ಹೋಗಿ ಹೇಳುತ್ತಾರೆ.

ಈ ಗೊಂದಲ ಬ್ರಹ್ಮ, ಶಿವ, ವಿಷ್ಣುವಿನ ಮಧ್ಯೆ ದ್ವೇಷವನ್ನು ಹುಟ್ಟಿಸುತ್ತದೆ. ಆಗ ಇದರಲ್ಲಿ ಯಾವುದು ಎಂಬುದನ್ನು ತಿಳಿಯಲು ಶಿವ ಮತ್ತು ವಿಷ್ಣು ಯುದ್ಧಕ್ಕೆ ನಿಲ್ಲುತ್ತಾರೆ. ಇದರಿಂದಾಗಿ ಮೂರು ಲೋಕದಲ್ಲಿ ಪ್ರಳಯ ಶುರುವಾಗುತ್ತದೆ. ಆಗ ದೇವತೆಗಳು ಹರಿಹರನ ಬಳಿ ಹೋಗಿ ಯುದ್ಧವನ್ನು ನಿಲ್ಲಿಸುವಂತೆ ಕೋರುತ್ತಾರೆ. ಆದರೆ ವಿಷ್ಣು ಬಾನವನ್ನು ಬಿಟ್ಟು ಶಿವಧನಸ್ಸನ್ನು ಹಾಳು ಮಾಡಿ ಬಿಡುತ್ತಾರೆ. ಆಗ ಎಲ್ಲ ದೇವತೆಗಳು ಸಾರಂಗ ಧನಸ್ಸು ಎಲ್ಲರಿಗಿಂತ ಶ್ರೇಷ್ಠ ಎಂದು ಹೇಳುತ್ತಾರೆ. ನಂತರ ಇದರಿಂದ ಕೋಪಗೊಂಡ ಶಿವ ತನ್ನ ಧನಸ್ಸನ್ನು ಶ್ರೀ ಜನಕ ಮಹಾರಾಜನ ಪೂರ್ವಜರಿಗೆ ನೀಡುತ್ತಾರೆ. ಇತ್ತ ವಿಷ್ಣು ಕೂಡ ತನ್ನ ಸಾರಂಗ ಧನಸ್ಸನ್ನು ಪರಶುರಾಮರ ಅಜ್ಜ ಕುಶಾಭನಿಗೆ ನೀಡುತ್ತಾರೆ. ಹೀಗೆ ಶಿವ ಧನಸ್ಸು ತಮ್ಮ ಪೂರ್ವಜರಿಂದ ಜನಕ ಮಹಾರಾಜನಿಗೆ ದೊರೆಯುತ್ತದೆ. ಇತ್ತ ಸಾರಂಗ ಧನಸ್ಸು ತಮ್ಮ ಪೂರ್ವಜರಿಂದ ಪರಶುರಾಮರಿಗೆ ದೊರೆಯುತ್ತದೆ. ನಂತರ ಶ್ರೀರಾಮ ಶಿವಧನಸ್ಸನ್ನು ಮುರಿದು ಸಾರಂಗ ಧನಸ್ಸನ್ನು ಪಡೆದುಕೊಳ್ಳುತ್ತಾರೆ.