ಪ್ರತಿ ಚಿತ್ರಕ್ಕೂ ಮುನ್ನ ರಾಜಮೌಳಿ ನಟಿಸುವ ನಾಯಕನಿಗೆ ಹಾಕುವ ಕಂಡಿಶನ್ ಏನು ಗೊತ್ತೆ?? ಪ್ರತಿಯೊಬ್ಬ ನಟ ಇದನ್ನು ಒಪ್ಪಿಕೊಳ್ಳಲೇಬೇಕು.

ಪ್ರತಿ ಚಿತ್ರಕ್ಕೂ ಮುನ್ನ ರಾಜಮೌಳಿ ನಟಿಸುವ ನಾಯಕನಿಗೆ ಹಾಕುವ ಕಂಡಿಶನ್ ಏನು ಗೊತ್ತೆ?? ಪ್ರತಿಯೊಬ್ಬ ನಟ ಇದನ್ನು ಒಪ್ಪಿಕೊಳ್ಳಲೇಬೇಕು.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದ ಎಲ್ಲಾ ನಿರ್ದೇಶಕರ ಮೂಲ ಸ್ಫೂರ್ತಿ ರಾಜಮೌಳಿ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ಅವರ ಚಿತ್ರಗಳ ಕತೆ ಹಾಗೂ ನಿರ್ಮಾಣದ ರೀತಿಯನ್ನುವುದು ನಿಜಕ್ಕೂ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರ ಆರ್ ಆರ್ ಆರ್ ಇದೇ ಜನವರಿ 7ರಂದು ಅದ್ದೂರಿಯಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ನಿಮ್ಮ ಚಿತ್ರಕ್ಕಾಗಿ ನಟರು ಹಾಗೂ ರಾಜಮೌಳಿಯವರು ಪಡೆಯಲಿರುವ ಸಂಭಾವನೆ ಕುರಿತಂತೆ ಕೂಡ ತಿಳಿದುಬಂದಿದೆ.

ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ತಲಾ 45 ಕೋಟಿ ರೂಪಾಯಿ, ಅಜಯ್ ದೇವಗನ್ 25 ಕೋಟಿ ರೂಪಾಯಿ, ಆಲಿಯಾ ಭಟ್ ರವರ ಎಂಟು ನಿಮಿಷದ ಪಾತ್ರಕ್ಕಾಗಿ 8 ಕೋಟಿ ರೂಪಾಯಿ ನೀಡಲಾಗಿದೆ. ನಿರ್ದೇಶಕ ರಾಜಮೌಳಿ ಅವರು ಬಂದಿರುವ ಲಾಭದಲ್ಲಿ 30% ವನ್ನು ಪಡೆದುಕೊಳ್ಳಲಿದ್ದಾರೆ. ಈಗ ನಾವು ಮಾತನಾಡಲು ಹೊರಟಿರುವುದು ಘಟಾನುಘಟಿ ಪಾತ್ರದಾರಿಗಳನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡುವಾಗ ರಾಜಮೌಳಿಯವರು ವಿಧಿಸುವ ಕಂಡೀಶನ್ ಗಳು ಏನು ಎಂಬುದನ್ನು ನಿಮಗೆ ಹೇಳಲು ಹೊರಟಿದ್ದೇವೆ.

ಚಿತ್ರ ಪ್ರಾರಂಭವಾಗುವ ಎರಡು ವರ್ಷ ಮುನ್ನವೇ ರಾಜಮೌಳಿ ಅವರು ಕಥೆಯನ್ನು ಬರೆದುಕೊಂಡು ಯಾವ ಲೊಕೇಶನ್ ನಲ್ಲಿ ಚಿತ್ರೀಕರಣ ಆಗಬೇಕು ಎಂಬುದರ ಸಂಪೂರ್ಣ ಪ್ಲಾನಿಂಗ್ ಮಾಡಿ ಚಿತ್ರೀಕರಣಕ್ಕೆ ಇಳಿಯುತ್ತಾರೆ. ತನ್ನ ಸಿನಿಮಾದಲ್ಲಿ ನಟಿಸುವ ಪ್ರಮುಖ ಪಾತ್ರಧಾರಿಗಳು ಅಂದರೆ ಹೀರೋಗಳು ಚಿತ್ರದ ಚಿತ್ರೀಕರಣ ಮುಗಿಯುವರೆಗೂ ಬೇರೆ ಯಾವ ಸಿನಿಮಾದಲ್ಲೂ ಕೂಡ ನಟಿಸಬಾರದು ಎಂಬ ತಾಕಿತು ಕೂಡ ಮಾಡಿರುತ್ತಾರೆ. ಯಾಕೆಂದರೆ ಕನಿಷ್ಠ ರಾಜಮೌಳಿ ಅವರ ಚಿತ್ರಗಳು ಚಿತ್ರೀಕರಣಕ್ಕಾಗಿ ಎರಡು ವರ್ಷಗಳನ್ನಂತೂ ತೆಗೆದುಕೊಳ್ಳುತ್ತದೆ. ಚಿತ್ರದ ನಿರ್ದೇಶಕ ಎನ್ನುವುದಕ್ಕಿಂತ ಹೆಚ್ಚಾಗಿ ರಾಜಮೌಳಿ ಅವರನ್ನು ಚಿತ್ರದ ತಪಸ್ವಿಯಂದು ಹೇಳಬಹುದು. ಆರ್ ಆರ್ ಆರ್ ಚಿತ್ರವನ್ನು ನೋಡಲು ನಿಮ್ಮಂತೆ ನಾವು ಕೂಡ ನೋಡಲು ಕಾತುರರಾಗಿದ್ದಾರೆ.