ನಿಮ್ಮ ಮುಂದಿನ ಸಿನಿಮಾ ಯಾವ್ದು ಸರ್ ಎಂದಿದ್ದಕ್ಕೆ ಯಶ್ ನೀಡಿದ ಉತ್ತರವೇನು ಗೊತ್ತೇ?? ಯಾವುದು ಇರಬಹುದು??

ನಿಮ್ಮ ಮುಂದಿನ ಸಿನಿಮಾ ಯಾವ್ದು ಸರ್ ಎಂದಿದ್ದಕ್ಕೆ ಯಶ್ ನೀಡಿದ ಉತ್ತರವೇನು ಗೊತ್ತೇ?? ಯಾವುದು ಇರಬಹುದು??

ನಮಸ್ಕಾರ ಸ್ನೇಹಿತರೇ ಈಗಾಗಲೇ ವಿಶ್ವಾದ್ಯಂತ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರವಾಗಿರುವ ಕೆಜಿಎಫ್ ಚಾಪ್ಟರ್ 2 ಕುರಿತಂತೆ ಸಾಕಷ್ಟು ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಕುರಿತಂತೆ ಕೂಡ ಸಾಕಷ್ಟು ದೊಡ್ಡಮಟ್ಟದ ಕುತೂಹಲ ಎನ್ನುವುದು ಚಿತ್ರರಂಗದಲ್ಲಿ ಬೆಳೆದು ನಿಂತಿದೆ. ಯಾಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಭಾಗವಹಿಸಿದಂತಹ ಎಲ್ಲ ನಟರು ನಿರ್ದೇಶಕ ಮತ್ತು ನಿರ್ಮಾಪಕರು ಕೂಡ ಇದಾದ ನಂತರ ಹಲವಾರು ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ರಾಕಿಂಗ್ ಸ್ಟಾರ್ ಯಶ್ ರವರು ಮಾತ್ರ ಬೇರೆ ಯಾವ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಂಡಿಲ್ಲ. ಮತ್ತು ಅವರ ಮುಂದಿನ ಚಿತ್ರ ಯಾವುದು ಹಾಗೂ ಅದು ಹೇಗೆ ಮೂಡಿ ಬರುತ್ತದೆ ಎಂಬುದರ ಕುರಿತಂತೆ ಕೇವಲ ಅವರ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಮಾ ರಸಿಕರನ್ನು ಕೂಡ ಸಾಕಷ್ಟು ಕುತೂಹಲ ಏರ್ಪಟ್ಟಿದೆ. ಅದಕ್ಕೆಲ್ಲ ಈಗ ಇತ್ತೀಚಿಗಷ್ಟೆ ನಡೆದಿರುವ ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ರವರ ಸ್ವತಹ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹೌದು ರಾಕಿಂಗ್ ಸ್ಟಾರ್ ಯಶ್ ರವರು ಈ ಕುರಿತಂತೆ ಮಾತನಾಡುತ್ತಾ ಕೆಜಿಎಫ್ ಚಾಪ್ಟರ್ 1 ಯಾವ ಮಟ್ಟದಲ್ಲಿ ಯಶಸ್ಸನ್ನು ಸಾಧಿಸಿದೆ ಎನ್ನುವುದು ನಿಮಗೆಲ್ಲಾ ಗೊತ್ತಿದೆ ಇನ್ನು ಕೆಜಿಎಫ್ ಚಾಪ್ಟರ್ 2 ಕೂಡ ಇದಕ್ಕಿಂತ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಿದೆ ಎಂಬುದು ಕೂಡ ನಮಗೆ ನಿಮಗೆ ತಿಳಿದಿದೆ. ಇನ್ನು ನನ್ನ ಮುಂದಿನ ಚಿತ್ರದ ಕುರಿತಂತೆ ಕೂಡ ಇವೆಲ್ಲದಕ್ಕಿಂತ ಹೆಚ್ಚಾಗಿ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾರೆ. ಹೀಗಾಗಿ ಪ್ರೇಕ್ಷಕರಿಗೆ ನಿರಾಸೆ ಆಗದಂತೆ ಎಲ್ಲವನ್ನೂ ಯೋಜಿಸಿ ಯೋಚಿಸಿ ಕಾರ್ಯರೂಪಕ್ಕೆ ತರಲು ಕೊಂಚ ಸಮಯ ಬೇಕಾಗುತ್ತದೆ. ಹೀಗಾಗಿ ಇದರ ಕುರಿತಂತೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಸದ್ಯಕ್ಕೆ ಕೇವಲ ಕೆಜಿಎಫ್ ಚಾಪ್ಟರ್ 2ರ ಕುರಿತಂತೆ ರಾಕಿಂಗ್ ಸ್ಟಾರ್ ಯಶ್ ರವರು ಕೇಂದ್ರೀಕೃತ ರಾಗಿದ್ದಾರೆ.