ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಗರುಡ ಪುರಾಣದಲ್ಲಿದೆ ಆರೋಗ್ಯದ ಬಗ್ಗೆ ಮಹತ್ವದ ವಿಚಾರಗಳು; ಇದನ್ನು ಜೀವನದಲ್ಲಿ ಅಳವಡಿಸಿಕೊಂಡ್ರೆ ದೀರ್ಘಾಯುಷ್ಯ ಶತಃಸಿದ್ಧ.

20

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಗರುಡ ಪುರಾಣ ಸಾರ್ವಕಾಲಿಕ ಸತ್ಯವನ್ನು ಹೇಳುವಂತ, ಯಾವ ಕಾಲಕ್ಕೂ ಅನ್ವಯವಾಗುವಂಥ ಸಾವಿರಾರು ವಿಷಯಗಳನ್ನು ಬೋಧಿಸುತ್ತದೆ. ಇದರ ಪ್ರಕಾರ ಕೆಲವು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಇದು ನಮ್ಮನ್ನು ಕಾಡುತ್ತಿರುವ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಂಥ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಹೇಳ್ತಿವಿ ನೋಡಿ.

ಸ್ವಚ್ಛತೆ ಎನ್ನುವುದು ಮನುಷ್ಯನ ಜೀವನದ ಒಂದು ಭಾಗ. ನಾವು ಸ್ವಚ್ಛವಾಗಿಲ್ಲದಿದ್ದರೆ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ ಇದರ ಜೊತೆಗೆ ಸ್ವಚ್ಛತೆ ಎನ್ನುವುದು ನಮ್ಮ ಅದೃಷ್ಟಕ್ಕೂ ಕೂಡ ಕಾರಣವಾಗುತ್ತದೆ. ಶುಭ್ರವಾದ ಬಟ್ಟೆಯನ್ನು ತೊಟ್ಟು, ಮನೆಯನ್ನೂ ಕೂಡ ಸ್ವಚ್ಛವಾಗಿಟ್ಟುಕೊಂಡರೆ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ. ಭಾಗ್ಯ ಕರುಣಿಸುತ್ತಾಳೆ. ಯಾರು ಸ್ವಚ್ಛತೆಯಲ್ಲಿ ಹಿಂದೇಟು ಹಾಕುತ್ತಾರೋ ಅವರ ಜೀವನವೂ ಕೂಡ ಹಾಗೆಯೇ ಅದೃಷ್ಟರಹಿತವಾಗಿರುತ್ತದೆ.

ಇನ್ನು ಜ್ಞಾನವರ್ಧನೆ. ಜ್ಞಾನ ಅಥವಾ ತಿಳುವಳಿಕೆ ಎನ್ನುವುದು ಓದಿದ್ದನ್ನು ಮನನ ಮಾಡಿದಾಗ ಮಾತ್ರ ಬರುತ್ತದೆ. ಒಮ್ಮೆ ಓದಿ ಆ ವಿಷಯವನ್ನು ಮೆಲುಕು ಹಾಕದಿದ್ದರೆ ಅದು ನಮ್ಮ ಸ್ಮೃತಿ ಪಟಲದಿಂದ ಆಚೆಯೇ ಉಳಿಯುತ್ತದೆ. ಹಾಗಾಗಿ ಸರಿಯಾಗಿ ವಿಷಯವನ್ನು ಅಭ್ಯಾಸ ಮಾಡಿ ಅರಿತುಕೊಂಡರೆ ಅದು ಜೀವನದುದ್ದಕ್ಕೂ ನಮ್ಮ ಜೊತೆಗಿರುತ್ತದೆ. ಉತ್ತಮವಾದ ಆಹಾರ ಸೇವಿಸುವುದರ ಬಗ್ಗೆಯೂ ಗರುಡ ಪುರಾಣದಲ್ಲಿದೆ. ಆಹಾರದಿಂದ ಆರೋಗ್ಯವೂ ಸಾಧ್ಯ, ಅನಾರೋಗ್ಯವೂ ಕೂಡ. ಹಾಗಾಗಿ ನಾವು ಯಾವ ರೀತಿ ಸಮತೋಲಿತ ಆಹಾರ ಸೇವಿಸುತ್ತೇವೆಯೋ ಹಾಗೆ ನಮ್ಮ ಆರೋಗ್ಯವೂ ಕೂಡ ಸರಿಯಾಗಿಯೇ ಇರುತ್ತದೆ.

ಏಕಾದಶಿ ಉಪವಾಸ ಮಾಡುವುದು ಉತ್ತಮ. ಇದು ಚಂದ್ರನ ದೋಷ ನಮ್ಮನ್ನು ಕಾಡುತ್ತಿದ್ದರೆ ಪರಿಹಾರ ಮಾಡುತ್ತದೆ. ವರ್ಷದಲ್ಲಿ ಒಂದೆರಡು ಬಾರಿಯಾದರೂ ಉಪವಾಸ ಮಾಡುವುದು ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಈ ದಿನ ಬರಿಯ ಫಲಾಹಾರಗಳನ್ನು ಮಾತ್ರ ಸೇವಿಸಬೇಕು. ದೇವರನ್ನು ನಿಂದಿಸಿದರೆ, ದೇವರನ್ನು ಅಪಮಾನ ಮಾಡಿದರೆ ದೇವತೆಗಳಿಗೇ ಸಂಕಷ್ಟ ತಪ್ಪಿದ್ದಲ್ಲ ಎಂದು ಸಾಕಷ್ಟು ಪುರಾಣ ಗ್ರಂಥಗಳು ಹೇಳುತ್ತವೆ. ಹಾಗೆಯೇ ಹುಲುಮಾನವರಾದ ನಾವು ಕೂಡ ದೇವರ ಅಸ್ತಿತ್ವವನ್ನು, ವೇದ ಪುರಾಣಗಳ ಮೂಲವನ್ನು ಪ್ರಶ್ನಿಸುವುದನ್ನೋ, ಅಥವಾ ಪುಣ್ಯ ಕ್ಷೇತ್ರಗಳಲಿ ತಪ್ಪು ಕೆಲಸಗಳನ್ನು ಮಾಡುವುದನ್ನೋ ಮಾಡಿದರೆ ಹಾನಿಯಾಗುವುದು ಖಂಡಿತ.

ಇವುಗಳ ಜೊತೆಗೆ ತುಳಸಿಯನ್ನು ಮನೆಯಲ್ಲಿ ಇಟುಕೊಳ್ಳುವುದರಿಂದ ಎಲ್ಲಾ ರೋಗಗಳಿಂದ ಮುಕ್ತಿಕೊಡಬಹುದು. ಹಾಗಾಗಿಯೇ ಹಿಂದಿನಿಂದಲೂ ಮನೆಯ ಮುಂದೆ ತುಳಸಿ ಕಟ್ಟೆಯನ್ನು ಮಾಡಿ ತುಳಸಿಗೆ ಪೂಜೆ ಸಲ್ಲಿಸುತ್ತಿದ್ದುದು. ಈಗಲೂ ಹಾಗೆಯೇ ನಡೆದುಕೊಂಡು ಬರಲಾಗಿದೆ. ಇದರಿಂದ ರೋಗಗಳು ಹತ್ತಿರವೂ ಸುಳಿಯುವುದಿಲ್ಲ. ಈ ಎಲ್ಲಾ ವಿಷಯಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುತ್ತಾ ಬಂದರೆ ಮನೆಯಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ.

Get real time updates directly on you device, subscribe now.