ಪಕ್ಕ ಹಳ್ಳಿಯ ಶೈಲಿಯಲ್ಲಿ ಥಟ್ ಅಂತ ತಯಾರಿಸಿ ಈ ಖಾರವಾದ ಬದನೆಕಾಯಿ ಗೊಜ್ಜು ಹೇಗೆ ಗೊತ್ತೇ?? ಎಲ್ಲರೂ ಬಾಯಿ ಚಪ್ಪರಿಸಿ ತಿಂತಾರೆ.

ಪಕ್ಕ ಹಳ್ಳಿಯ ಶೈಲಿಯಲ್ಲಿ ಥಟ್ ಅಂತ ತಯಾರಿಸಿ ಈ ಖಾರವಾದ ಬದನೆಕಾಯಿ ಗೊಜ್ಜು ಹೇಗೆ ಗೊತ್ತೇ?? ಎಲ್ಲರೂ ಬಾಯಿ ಚಪ್ಪರಿಸಿ ತಿಂತಾರೆ.

ನಮಸ್ಕಾರ ಸ್ನೇಹಿತರೇ ಬದನೆಕಾಯಿಯನ್ನು ಇಷ್ಟಪಡದವರೂ ಕೂಡ ಈ ಒಂದು ಗೊಜ್ಜನ್ನು ತಿಂದರೆ ಬದನೆಕಾಯಿ ಪ್ರಿಯರಾಗೋದು ಪಕ್ಕಾ. ಅದರಲ್ಲೂ ಅನ್ನದ ಜೊತೆ ಇದೊಂದು ಗೊಜ್ಜನ್ನು ಸೇರಿಸಿ ತಿಂದಾ ಇದ್ರೆ ಆಹಾ.. ಬಾಯಲ್ಲಿ ನೀರೂರುತ್ತೆ. ಹಾಗಾದ್ರೆ ಬನ್ನಿ ರೆಸಿಪಿ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ.

ಬದನೆ ಕಾಯಿ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು ಹೀಗಿವೆ: ಎರಡು ಮಧ್ಯಮ ಗಾತ್ರದ ಬದನೆಕಾಯಿ, ತಲಾ ಒಂದು ಟಮೋಟೊ ಮತ್ತು ಈರುಳ್ಳಿ ಹೆಚ್ಚಿಕೊಂಡದ್ದು, ಹಸಿ ಮೆಣಸಿನಕಾಯಿ ೪-೫, (ನಿಮಗೆ ಖಾರ ಜಾಸ್ತಿ ಬೇಕಿದ್ದರೆ ಜಾಸ್ತಿ ಹಾಕಿಕೊಳ್ಳಬಹುದು, ಹಸಿಮೆಣಸಿನ ಬದಲು ಹಳ್ಳಿಗಳಲ್ಲಿ ಬಳಸುವಂಥ ಸಣ್ಣ ಮೆಣಸನ್ನು ಕೂಡ ಬಳಸಬಹುದು) ಹುಣಸೆಹಣ್ಣು ಸಣ್ಣ ನಿಂಬೆ ಗಾತ್ರದ್ದು, ಜೀರಿಗೆ ಕಾಲು ಚಮಚ, ಕೊತ್ತಂಬರಿ ಬೀಜ ಅರ್ಧ ಚಮಚ, ಉಪ್ಪು ರುಚಿಗೆ ಬೇಕಾದಷ್ಟು.

ಮಾಡುವ ವಿಧಾನ ಹೀಗಿದೆ: ಮೊದಲಿಗೆ ಹುಣಸೆಹಣ್ಣನ್ನು ಕಿವುಚಿ ನೀರಿನಲ್ಲಿ ನೆನಸಿಟ್ಟುಕೊಳ್ಳಬೇಕು. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಕಾಲು ಚಮಚ ಜೀರಿಗೆ, ಅರ್ಧ ಚಮಚ ಕೊತ್ತಂಬರಿ ಬೀಜ ಹಾಕಿ ಹುರಿಯಿರಿ. ಈಗ ಹೆಚ್ಚಿಟ್ಟುಕೊಂಡ ಈರುಳ್ಳಿ, ಟಮೋಟೊ, ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ. ನಂತರ ಇದಕ್ಕೆ ಬದನೆಕಾಯಿ ಹೆಚ್ಚಿಕೊಂಡು ಹಾಕಿ. ಬದನೆಕಾಯಿ ಸಂಪೂರ್ಣ ಮೆತ್ತಗೆ ಆಗುವವರೆಗೂ ಎಣ್ಣೆಯಲ್ಲಿಯೇ ಹುರಿಯಿರಿ. ಈಗ ಹುರಿದ ಮಿಶ್ರಣಕ್ಕೆ ಹುಣಸೆಹಣ್ಣಿನ ರಸ ಹಾಗೂ ಉಪ್ಪು ಹಾಕಿ ಗ್ಯಾಸ್ ಆಫ್ ಮಾಡಿ. ನಂತರ ಕಲ್ಲಿನಲ್ಲಿ ಅರೆಯಿರಿ ಅಥವಾ ಮ್ಯಾಶ್ ಮಾಡಿದರೆ ರುಚಿಯಾದ ಬದನೆಕಾಯಿ ಗೊಜ್ಜು ಸಿದ್ದ. ಮಿಕ್ಸರ್ ನಲ್ಲಿಯೂ ಅರೆಯಬಹುದು ಆದರೆ ಮಿಕ್ಸರ್ ನಲ್ಲಿ ಅರೆದರೆ ಬದನೆಕಾಯಿ ಗೊಜ್ಜು ಹೆಚ್ಚು ರುಚಿಯನ್ನು ಕೊಡುವುದಿಲ್ಲ.