ಹಂಸಲೇಖ ರವರ ಹೇಳಿಕೆಗೆ ಖಡಕ್ ಆಗಿ ಪ್ರತಿಕ್ರಯಿಸಿದ ವೀರೇಂದ್ರ ಹೆಗ್ಗಡೆ ರವರು ಹೇಳಿದ್ದೇನು ಗೊತ್ತೇ?? ಇನ್ನು ಎಲ್ಲಿಗೆ ಮುಟ್ಟಲಿದೆ ಇದು??

ಹಂಸಲೇಖ ರವರ ಹೇಳಿಕೆಗೆ ಖಡಕ್ ಆಗಿ ಪ್ರತಿಕ್ರಯಿಸಿದ ವೀರೇಂದ್ರ ಹೆಗ್ಗಡೆ ರವರು ಹೇಳಿದ್ದೇನು ಗೊತ್ತೇ?? ಇನ್ನು ಎಲ್ಲಿಗೆ ಮುಟ್ಟಲಿದೆ ಇದು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವಂತಹ ಹಂಸಲೇಖರವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಹೌದು ಅಂದಿನ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಗಳ ಮೂಲಕ ಕನ್ನಡ ಸಿನಿರಸಿಕರಿಗೆ ಸೂಪರ್ ಹಿಟ್ ಸಾಂಗ್ ಗಳನ್ನು ನೀಡುತ್ತಿದ್ದ ಸಂಗೀತ ನಿರ್ದೇಶಕ ಈಗ ಸುದ್ದಿ ಆಗುತ್ತಿರುವುದೇ ಬೇರೆ ಕಾರಣಕ್ಕಾಗಿ.

ಹೌದು ಸರಿಗಮಪ ಕಾರ್ಯಕ್ರಮದಲ್ಲಿ ಮಹಾ ಗುರುಗಳಾಗಿ ನೇಮಕವಾಗಿದ್ದ ಹಂಸಲೇಖರವರು ಈಗ ಪೇಜಾವರಶ್ರೀಗಳ ಕುರಿತಂತೆ ಲೇವಡಿಯಾಗಿ ಮಾತನಾಡಿರುವ ವಿಷಯ ಸಾಕಷ್ಟು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹೌದು ಇತ್ತೀಚೆಗಷ್ಟೆ ಹಂಸಲೇಖರವರು ಪೇಜಾವರ ಶ್ರೀಗಳು ಕುರಿತಂತೆ ಅವರು ದಲಿತರ ಮನೆಗೆ ಹೋದರೆ ಮಾಂಸ ತಿನ್ನಕ್ ಆಗುತ್ತಾ ಹೋಗಿ ಬರಬೇಕಷ್ಟೇ ಅದು ಯಾರು ಕೂಡ ಮಾಡಬಹುದು ಎನ್ನುವ ರೀತಿಯಲ್ಲಿ ಮಾತನಾಡಿದರು. ಹಿಂದೂ ಸಂಸ್ಕೃತಿಯ ಮಹಾನ್ ಸಾಧಕ ರಾಗಿರುವ ದಿವಂಗತ ಪೇಜಾವರ ಶ್ರೀಗಳ ಕುರಿತಂತೆ ಈ ರೀತಿ ಮಾತನಾಡಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು ಈಗ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಕೂಡ ಮಾತನಾಡಿದ್ದಾರೆ. ಆ ವಿಡಿಯೋ ಕೆಳಗಡೆ ಇದ್ದು ನೀವೇ ನೋಡಿ.

ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಕೆಲವರು ಶ್ರೀಗಳ ಕುರಿತಂತೆ ಕೆಲವರು ಮಾತನಾಡುವುದರಿಂದ ಆಗಿ ಈಗ ಮತ್ತೊಮ್ಮೆ ಶ್ರೀಗಳ ಕುರಿತಂತೆ ಇಡಿ ಜಗತ್ತೆ ಸ್ಮರಿಸುತ್ತಿದೆ ಎಂಬುದಾಗಿ ಹೇಳಿದ್ದಾರೆ. ಪೇಜಾವರಶ್ರೀಗಳು ತಾವು ಇದ್ದಷ್ಟು ಕಾಲ ಧರ್ಮ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಧರ್ಮವನ್ನು ಸಾರಿದ್ದಾರೆ. ಇನ್ನು ನಮ್ಮ ದೇಶದಲ್ಲಿ ಸಾತ್ವಿಕ ಶಕ್ತಿಯನ್ನು ಹುಟ್ಟು ಹಾಕಿದವರು ಇದ್ದರೆ ಅದು ಕೇವಲ ಪೇಜಾವರಶ್ರೀಗಳು ಮಾತ್ರ ಎಂಬುದಾಗಿ ಕೂಡ ಈ ಸಮಯದಲ್ಲಿ ಹೇಳಿ ಕೊಂಡಿದ್ದಾರೆ. ಹಂಸಲೇಖ ಹಾಗೂ ಪೇಜಾವರಶ್ರೀಗಳ ವಿಷಯ ಮುಂದೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ನಾವು ಕಾದುನೋಡಬೇಕಾಗಿದೆ.