ಸಿನೆಮಾ ಜಗತ್ತಿದೆ ಬಂದ ಮೇಲೆ ತಮ್ಮ ಮೂಲ ಹೆಸರನ್ನು ಬದಲಾಯಿಸಿಕೊಂಡಿರುವ ಖ್ಯಾತ ನಟ ನಟಿಯರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಕುರಿತು ನಿಮಗೆ ಸಾಕಷ್ಟು ತಿಳಿದಿದೆ ಎಂಬುದು ನಮಗೆ ಗೊತ್ತಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಸ್ಟಾರ್ ನಟರ ನಿಜವಾದ ಹೆಸರನ್ನು. ಹೌದು ಸ್ನೇಹಿತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೇಲೆ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಅಂತಹ ನಟರ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇನೆ. ಹೀಗಾಗಿ ಈ ಲೇಖನಿಯನ್ನು ತಪ್ಪದೆ ಕೊನೆಯವರೆಗೂ ಓದಿ.

ಡಾ ರಾಜಕುಮಾರ್ ಕನ್ನಡ ಚಿತ್ರರಂಗದ ದೇವರು ಎಂದೇ ಖ್ಯಾತರಾಗಿರುವ ನಟಸಾರ್ವಭೌಮ ಡಾ ರಾಜಕುಮಾರ್ ರವರ ನಿಜವಾದ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಇಂದಿಗೂ ಕೂಡ ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ರಾಜನಂತೆ ಆಸೀನರಾಗಿದ್ದಾರೆ. ಡಾ ವಿಷ್ಣುವರ್ಧನ್ ನಾಗರಹಾವು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಂಗ್ರಿ ಯಂಗ್ ಮ್ಯಾನ್ ಆಗಿ ಎಂಟ್ರಿ ಕೊಟ್ಟ ವಿಷ್ಣುವರ್ಧನ್ ರವರ ನಿಜವಾದ ಹೆಸರು ಸಂಪತ್ ಕುಮಾರ್. ಅಂಬರೀಶ್ ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಮಂಡ್ಯದ ಗಂಡು ಹಾಗು ಕಲಿಯುಗದ ಕಾರಣ ಎಂಬ ಬಿರುದಾಂಕಿತ ಅಂಬರೀಶ್ ಅವರ ನಿಜವಾದ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್.

ಜಗ್ಗೇಶ್ ಕನ್ನಡ ಚಿತ್ರರಂಗದ ನವರಸನಾಯಕ ಜಗ್ಗೇಶ್ ಅವರ ನಿಜವಾದ ಹೆಸರು ಈಶ್ವರ್ ಗೌಡ. ಇನ್ನು ಇಂದಿಗೂ ಕೂಡ ಕನ್ನಡಚಿತ್ರರಂಗದಲ್ಲಿ ಹಾಗೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ದರ್ಶನ್ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಹಾಗೂ ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಬಿರುದಾಂಕಿತ ಮಾಸ್ ಅಭಿಮಾನಿಗಳ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಿಜವಾದ ಹೆಸರು ಹೇಮಂತ್ ಕುಮಾರ್ ಎಂಬುದಾಗಿ.

ಪುನೀತ್ ರಾಜಕುಮಾರ್ ನಟಸಾರ್ವಭೌಮ ಅಣ್ಣಾವ್ರ ಕಿರಿಯ ಪುತ್ರನಾಗಿರುವ ಪುನೀತ್ ರಾಜಕುಮಾರ್ ಅವರ ನಿಜವಾದ ಹೆಸರು ಲೋಹಿತ್ ಎಂಬುದಾಗಿ. ಇನ್ನು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತ ದೇಶದಾದ್ಯಂತ ತಮ್ಮ ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳ ಮೂಲಕ ಜನಪ್ರಿಯರಾಗಿದ್ದಾರೆ. ಯಶ್ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಕೆಜಿಎಫ್ ಚಿತ್ರಗಳ ಮೂಲಕ ಈಗಾಗಲೇ ವಿಶ್ವಾದ್ಯಂತ ಜನಪ್ರಿಯರಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರ ನಿಜವಾದ ಹೆಸರು ನವೀನ್ ಗೌಡ ಎಂಬುದಾಗಿ.

ರಮ್ಯಾ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ರಮ್ಯಾರವರ ನಿಜವಾದ ಹೆಸರು ದಿವ್ಯಸ್ಪಂದನ ಎಂಬುದಾಗಿ. ಇನ್ನು ಕನ್ನಡ ಚಿತ್ರರಂಗದಲ್ಲಿ ಈಗ ನಟಿಸದಿದ್ದರು ಕೂಡ ಅವರ ಅಭಿಮಾನಿಗಳ ಸಂಖ್ಯೆಗೆ ಕಡಿಮೆ ಇಲ್ಲ. ರಕ್ಷಿತಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ರಕ್ಷಿತಾ ಅವರ ನಿಜವಾದ ಹೆಸರು ಶ್ವೇತ ಎಂಬುದಾಗಿ. ಇನ್ನು ಈಗ ಚಿತ್ರದ ನಿರ್ಮಾಣ ಹಾಗೂ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೃತಿ ಕನ್ನಡ ಚಿತ್ರರಂಗದ ಸಾಂಸಾರಿಕ ಚಿತ್ರಗಳ ಸೂಪರ್ಸ್ಟಾರ್ ನಟಿಯಾಗಿ ಇದ್ದಂತಹ ಶೃತಿಯವರ ನಿಜವಾದ ಹೆಸರು ಗಿರಿಜ ಎಂಬುದಾಗಿ.

ಮಾಲಾಶ್ರೀ ಕನ್ನಡ ಚಿತ್ರರಂಗದಲ್ಲಿ ಲೇಡಿ ಸೂಪರ್ಸ್ಟಾರ್ ಎಂದು ಖ್ಯಾತರಾಗಿದ್ದ ಮಾಲಾಶ್ರೀ ಅವರ ನಿಜವಾದ ಹೆಸರು ಶ್ರೀದುರ್ಗಾ. ಸತೀಶ್ ನೀನಾಸಂ ಕನ್ನಡ ಚಿತ್ರರಂಗದ ಅಜೀವ ನಾಯಕ ನಟನಾಗಿರುವ ಸತೀಶ್ ನೀನಾಸಂ ರವರ ನಿಜವಾದ ಹೆಸರು ಶಿವಕುಮಾರ್ ಎಂಬುದಾಗಿ. ಪೂಜಾಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಮಳೆಹುಡುಗಿಯಾಗಿ ಕಾಣಿಸಿಕೊಂಡ ಪೂಜಾಗಾಂಧಿ ಅವರ ನಿಜವಾದ ಹೆಸರು ಸಂಜನಾ ಗಾಂಧಿ. ವಿಕ್ಕಿ ಸುಕ್ಕ ಸುರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುವ ವಿಕ್ಕಿ ರವರ ನಿಜವಾದ ಹೆಸರು ಸಂತೋಷ್ ರೇವಾ. ಮಾನ್ವಿತ ಹರೀಶ್ ಕನ್ನಡ ಚಿತ್ರರಂಗದ ಟಗರು ಪುಟ್ಟಿ ಎಂಬ ಖ್ಯಾತಿಯನ್ನು ಪಡೆದಿರುವ ಯುವ ಉದಯೋನ್ಮುಖ ನಟಿ ಮಾನ್ವಿತಾ ಹರೀಶ್ ರವರ ನಿಜವಾದ ಹೆಸರು ಶ್ವೇತ ಕಾಮತ್ ಎಂಬುದಾಗಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Post Author: Ravi Yadav