ಜೊತೆ ಜೊತೆಯಲಿ ಧಾರವಾಹಿ ಕುರಿತು ಮಹತ್ವದ ಮಾಹಿತಿ ನೀಡಿದ ಧಾರವಾಹಿ ತಂಡ, ಇದೀಗ ಅಸಲಿ ಕಥೆ ಆರಂಭ ಎಂದು ಹೇಳಿದ್ದೇನು ಗೊತ್ತೇ??

ಜೊತೆ ಜೊತೆಯಲಿ ಧಾರವಾಹಿ ಕುರಿತು ಮಹತ್ವದ ಮಾಹಿತಿ ನೀಡಿದ ಧಾರವಾಹಿ ತಂಡ, ಇದೀಗ ಅಸಲಿ ಕಥೆ ಆರಂಭ ಎಂದು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೊತೆಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲೊಂದು ಭರ್ಜರಿ ಹವಾ ಸೃಷ್ಟಿಸಿದ ಧಾರವಾಹಿ ಎಂದು ಹೇಳಬಹುದು. ಧಾರಾವಾಹಿ ಶುರುವಾದಾಗಿನಿಂದ ಇಲ್ಲಿಯವರೆಗೂ ನೋಡುಗರಲ್ಲಿ ಕುತೂಹಲವನ್ನ ಉಳಿಸಿಕೊಂಡು ಬಂದಿದೆ. ಮೊದಲು ಹಿಟ್ ಆಗಿದ್ದು ಈ ಧಾರವಾಹಿಯ ಟೈಟಲ್ ಟ್ರಾಕ್. ಮದುವೆ ಆಲ್ಬಂಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಹಾಡಿನದ್ದೇ ದೊಡ್ಡ ಟ್ರೆಂಡ್ ಸೃಷ್ಠಿಯಾಗಿತ್ತು.

ಆರ್ಯವರ್ಧನ್ ಆಗಿ ಅಭಿನಯಿಸಿದ್ದ ಅನಿರುದ್ಧ್ ಹಾಗೂ ಅನು ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದ್ದಲ್ಲದೇ, ನಿಜ ಜೀವನದಲ್ಲಿಯೂ ಸಹ ಹಲವಾರು ವಯಸ್ಸಿನ ಅಂತರವಿರುವ ಜೋಡಿಗಳು ಮದುವೆಯಾಗಿದ್ದರು. 45 ವರ್ಷದ ಆರ್ಯವರ್ಧನ್ ಹಾಗೂ 20 ವರ್ಷದ ಅನು ಸಿರಿಮನೆ ನಡುವಿನ ಪ್ರೆಮಾಂಕುರವೇ ಈ ಧಾರಾವಾಹಿಯ ಕಥಾವಸ್ತು. ಮೊದಲು ಸ್ನೇಹ, ನಂತರ ಪ್ರೀತಿ, ಆನಂತರ ಕುಟುಂಬದ ವೈಮನಸ್ಸು, ದೈನಂದಿನ ಜೀವನ ಹೀಗೆ ಎಲ್ಲವೂ ಹದವಾಗಿ ಮಿಶ್ರಣ ಮಾಡುವ ಮೂಲಕ ಈ ಧಾರಾವಾಹಿ ನೋಡುಗರ ಮನ ಸೆಳೆದಿತ್ತು.

100,200 ಹೀಗೆ ಮುಂದುವರಿಯುತ್ತಾ ಸದ್ಯ 500 ಏಪಿಸೋಡ್ ಮುಗಿಸಿ ಈಗ 550 ನೇ ಏಪಿಸೋಡ್ ಗೆ ಕಾಲಿಟ್ಟಿದೆ. ಈ ಮಧ್ಯೆ ಆರ್ಯವರ್ಧನ್ ಹಾಗೂ ಅನು ಸಿರಿಮನೆ ವಿವಾಹವಾಗಿದ್ದು, ಈಗ ಅನುಗೆ ಆರ್ಯವರ್ಧನ್ ರವರ ಒಂದೊಂದೆ ರಹಸ್ಯಗಳು ತಿಳಿಯುತ್ತಿವೆ. ಆರ್ಯವರ್ಧನ್ ರವರ ಮೊದಲ ಪತ್ನಿ ರಾಜನಂದಿನಿ ಬಗ್ಗೆ ಸಹ ತಿಳಿದಿದೆ. ಶೀಘ್ರದಲ್ಲಿ ಈ ಧಾರಾವಾಹಿಯ 550 ನೇ ಏಪಿಸೋಡ್ ಪ್ರಸಾರವಾಗಲಿದ್ದು, ಆ ಸಂಚಿಕೆಯಲ್ಲಿ ಕತೆಗೆ ಮತ್ತೊಂದು ಬಿಗ್ ಟ್ವಿಸ್ಟ್ ದೊರೆಯಲಿದೆ ಎಂದು ಧಾರಾವಾಹಿ ತಂಡ ಹೇಳಿಕೊಂಡಿದೆ. ಒಟ್ಟಿನಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಈ ಪ್ರೇಮಕತೆ ಸಾವಿರ ಏಪಿಸೋಡ್ ಮುಟ್ಟಿದರೂ ಆಶ್ಚರ್ಯವಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.