ಹೊಸ ರೀತಿಯ ರಸಂ ಬಿಟ್ಟಾಕಿ, ಮನೆಯಲ್ಲಿಯೇ ನಾಟಿ ಶೈಲಿಯ ರಸಂ ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ ಕುಡಿತಾರೆ.

ಹೊಸ ರೀತಿಯ ರಸಂ ಬಿಟ್ಟಾಕಿ, ಮನೆಯಲ್ಲಿಯೇ ನಾಟಿ ಶೈಲಿಯ ರಸಂ ಮಾಡಿ ನೋಡಿ, ಎಲ್ಲರೂ ಇಷ್ಟಪಟ್ಟು ತಿಂತಾರೆ ಕುಡಿತಾರೆ.

ನಮಸ್ಕಾರ ಸ್ನೇಹಿತರೇ ಕಸದಿಂದ ರಸ ಅಂತಾರಲ್ಲ, ಅಂಥ ಒಂದು ರೆಸಿಪಿ ನಾವಿಂದು ಹೇಳುತ್ತಿದ್ದೇವೆ. ಕೊತ್ತಂಬರಿ ಸೊಪ್ಪನ್ನು ತಂದು ಸೊಪ್ಪನ್ನು ಮಾತ್ರ ಬಳಸಿ ದಂಟನ್ನು ಬಿಸಾಕಿಬಿಡ್ತೇವೆ ಅಲ್ವಾ? ಇನ್ನು ಮೇಲೆ ಹಾಗೆ ಮಾಡಲೇಬೇಡಿ. ಕೊತ್ತಂಬರಿ ಸೊಪ್ಪಿನ ದಂಟಿನಿಂದಲೂ ಕೂಡ ಒಂದು ರುಚಿಕರವಾದ ರಸಂ ತಯಾರಿಸಬಹುದು.

ರಸಂ ಮಾಡಲು ಬೇಕಾಗುವ ಸಾಮಗ್ರಿಗಳು: ಕೊತ್ತಂಬರಿ ಸೊಪ್ಪಿನ ದಂಟು, ಹುಣಸೆಹಣ್ಣು ಸ್ವಲ್ಪ, ಬೆಳ್ಳುಳ್ಳಿ ೮-೧೦, ಹಸಿಮೆಣಸು ೩-೪, ಕಾಳುಮೆಣಸು ೨ ಚಾಚ, ಒಂದು ಚಮಚ ಜೀರಿಗೆ, ಅರಿಶಿನ ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಸ್ವಲ್ಪ, ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಒಣಮೆಣಸು ಒಂದು, ನೀರು.

ಮಾಡುವ ವಿಧಾನ: ಮೊದಲಿಗೆ ಕೊತ್ತಂಬರಿ ಸೊಪ್ಪಿನ ದಂಟನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಕುಟ್ಟಾಣಿಯಲ್ಲಿ ಇದನ್ನು ಹಾಕಿ ಚೆನ್ನಾಗಿ ಕುಟ್ಟಿ. ನಂತರ ಒಂದು ಪಾತ್ರೆಗೆ ಕುಟ್ಟಿದ ದಂಟು ಹಾಗೂ ಸ್ವಲ್ಪ ಹುಣಸೆಹಣ್ಣನ್ನು ಹಾಕಿ. ಅದಕ್ಕೆ ನೀರನ್ನು ಸೇರಿಸಿ. ಕೈಯಿಂದ ಚೆನ್ನಾಗಿ ದಂಡು ಹಾಗೂ ಹುಣಸೆಹಣ್ಣನ್ನು ಹಿಚುಕಿಕೊಳ್ಳಿ. ಇದು ಉತ್ತಮ ಸುವಾಸನೆಯನ್ನು ಕೊಡುತ್ತದೆ. ನಂತರ ನೀರನ್ನು ಸೋಸಿ ತೆಗೆದಿಟ್ಟುಕೊಳ್ಳಿ.

ಇದೀಗ ಒಂದು ಕುಟ್ಟಾಣಿಗೆ, ೪-೫ ಮೆಣಸು, ೧ ಚಮಚ ಜೀರಿಗೆ, ೨ ಚಮಚ ಕರಿಮೆಣಸು, ೮-೧೦ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಿ. ನಂತರ ತೆಗೆದಿಟ್ಟ ನೀರಿಗೆ ಕುಟ್ಟಿದ ಮಿಶ್ರಣವನ್ನು ಸೇರಿಸಿ. ಇದಕ್ಕೆ ಚಿಟಿಗೆ ಇಂಗನ್ನು ಸೇರಿಸಿ. ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ನಂತರ ಎಲ್ಲಾ ಮಿಶ್ರಣ ಹಾಕಿದ ನೀರನ್ನು ಒಂದು ಕುದಿ ಬರುವವರೆಗೂ ಕುದಿಸಿ. ಕುದಿಯುವಾಗ ಚಿಟಿಕೆ ಅರಿಶಿನ ಪುಡಿಯನ್ನು ಹಾಕಿ. ನಂತರ ಗ್ಯಾಸ್ ಆಫ್ ಮಾಡಿ. ಈ ಸರಂಗೆ ಕೊನೆಯಲ್ಲಿ ಒಂದು ಒಗ್ಗರಣೆ ಮಾಡಬೇಕು. ಒಂದು ಸೌಟ್ ಗೆ ತೆಂಗಿನ ಎಣ್ಣೆ, ಸಾಸಿವೆ, ಒಣಮೆಣಸು ಹಾಗೂ ಒಂದು ಹಸಿಮೆಣಸನ್ನು ಹಾಕಿ ಒಗ್ಗರಣೆ ಮಾಡಿ ರಸಂ ಗೆ ಸೇರಿಸಿದರೆ ರುಚಿಕರ ರಸಂ ಸವಿಯಲು ಸಿದ್ದ. ಇದನ್ನು ಕುಡಿಯಲೂ ಬಹುದು. ಅನ್ನಕ್ಕೂ ಹಾಕಿಕೊಂಡು ತಿನ್ನಬಹುದು. ಈ ರಸಂ ಮಾಡುವ ವಿಧಾನವನ್ನು ಕೆಳಗಿನ ವಿಡಿಯೋದಲ್ಲಿ ಕೊಡಲಾಗಿದೆ.