ನಡೆಯಿತು ಕೊನೆ ಕ್ಷಣದ ಬದಲಾವಣೆ, ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರು ಯಾರ್ಯಾರು ಗೊತ್ತೇ?? ಆರ್ಸಿಬಿ ಯಾರಿಗೆ ಮಣೆ ಹಾಕಿದೆ ಗೊತ್ತೇ??

ನಡೆಯಿತು ಕೊನೆ ಕ್ಷಣದ ಬದಲಾವಣೆ, ಎಲ್ಲಾ ತಂಡಗಳು ಉಳಿಸಿಕೊಂಡಿರುವ ಆಟಗಾರರು ಯಾರ್ಯಾರು ಗೊತ್ತೇ?? ಆರ್ಸಿಬಿ ಯಾರಿಗೆ ಮಣೆ ಹಾಕಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದು ಬಂದಿದೆ.ಮೆಗಾ ಹರಾಜಿಗೂ ಮುನ್ನ ಗರಿಷ್ಠ ನಾಲ್ವರು ಆಟಗಾರರನ್ನ ರಿಟೈನ್ ಮಾಡಿಕೊಳ್ಳುವ ಆಯ್ಕೆ ತಂಡಗಳಿಗಿತ್ತು. ಇಷ್ಟು ದಿನ ಸಂಭವನೀಯ ಪಟ್ಟಿಯಲ್ಲಿದ್ದ ಆಟಗಾರರನ್ನು ಬಿಟ್ಟು ಹೊಸ ಆಟಗಾರರನ್ನ ರಿಟೈನ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದೆ. ಬನ್ನಿ ಯಾವ ತಂಡಗಳು ಯಾವ ಯಾವ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ ಎಂಬುದನ್ನ ತಿಳಿಯೋಣ.

ಮೊದಲನೆಯದಾಗಿ ಚೆನ್ನೈ ಸೂಪರ್ ಕಿಂಗ್ಸ್ – ಸಿಎಸ್ಕೆ ತಂಡ ನೀರಿಕ್ಷೆಯಂತೆ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಎಂ.ಎಸ್.ಧೋನಿ, ಗಾಯಕ್ವಾಡ್,ರವೀಂದ್ರ ಜಡೇಜಾ ಹಾಗೂ ಮೋಯಿನ್ ಅಲಿಯನ್ನ ಸಿ.ಎಸ್.ಕೆ ತಂಡ ರಿಟೈನ್ ಮಾಡಿಕೊಂಡಿದೆ. ಇನ್ನು ಮುಂಬೈ ಇಂಡಿಯನ್ಸ್ – ಮುಂಬೈ ತಂಡ ಸಹ ನೀರಿಕ್ಷೆಯಂತೆ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಆದರೇ ಇಶಾನ್ ಕಿಶನ್ ರನ್ನ ಮಾಡಿಕೊಂಡಿಲ್ಲ. ರೋಹಿತ್ ಶರ್ಮಾ, ಜಸ್ಪ್ರಿತ್ ಬುಮ್ರಾ, ಸೂರ್ಯ ಕುಮಾರ್ ಯಾದವ್ ಹಾಗೂ ಕೀರನ್ ಪೋಲಾರ್ಡ್ ಈ ತಂಡದಲ್ಲಿ ಉಳಿದ ಆಟಗಾರರು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು – ಎಲ್ಲರ ಲೆಕ್ಕಾಚಾರಗಳು ತಲೆಕೆಳಗು ಮಾಡುವಂತೆ ಆರ್ಸಿಬಿ ಮೂವರು ಆಟಗಾರರನ್ನ ಉಳಿಸಿಕೊಂಡಿದೆ. ವಿರಾಟ್, ಮ್ಯಾಕ್ಸವೆಲ್ ಹಾಗೂ ಮಹಮದ್ ಸಿರಾಜ್ ಆರ್ಸಿಬಿಯಲ್ಲಿ ಉಳಿದ ಆಟಗಾರರು. ಆದರೇ ಪ್ರಮುಖ ಬೌಲರ್ ಯುಜವೇಂದ್ರ ಚಾಹಲ್, ಬ್ಯಾಟ್ಸಮನ್ ದೇವದತ್ ಪಡಿಕ್ಕಲ್ ರನ್ನು ಉಳಿಸಿಕೊಂಡಿಲ್ಲ‌. ಕೋಲ್ಕತ್ತಾ ನೈಟ್ ರೈಡರ್ಸ್ – ನೀರಿಕ್ಷೆಯಂತೆ ಕೆಕೆಆರ್ ತಂಡ ಸಹ ನಾಲ್ವರನ್ನ ಉಳಿಸಿಕೊಂಡಿದೆ. ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ಉಳಿದ ಆಟಗಾರರಾಗಿದ್ದಾರೆ.

ರಾಜಸ್ತಾನ ರಾಯಲ್ಸ್ – ಆರ್.ಆರ್ ತಂಡ ಸಹ ನೀರಿಕ್ಷೆಯಂತೆ ಮೂವರು ಆಟಗಾರರನ್ನ ಉಳಿಸಿಕೊಂಡಿದೆ. ಸಂಜು ಸ್ಯಾಮ್ಸನ್, ಜಾಸ್ ಬಟ್ಲರ್ ಹಾಗೂ ಅಚ್ಚರಿಯೆಂಬಂತೆ ಯಶಸ್ವಿ ಜೈಸ್ವಾಲ್ ರನ್ನ ಉಳಿಸಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ – ಬಹಳಷ್ಟು ಚಾಣಾಕ್ಷತನದಿಂದ ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ತಂಡ ಯುವ ಆಟಗಾರರನ್ನ ಉಳಿಸಿಕೊಂಡಿದೆ. ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್ ಹಾಗೂ ಆನ್ರಿಕ್ ನೋರ್ಟಿಜೆಯವರನ್ನ ಉಳಿಸಿಕೊಂಡಿದೆ. ಪಂಜಾಬ್ ಕಿಂಗ್ಸ್ – ಎಲ್ಲರ ಲೆಕ್ಕಾಚಾರವನ್ನ ಪಂಜಾಬ್ ತಂಡ ತಲೆಕೆಳಗು ಮಾಡಿದೆ. ಕೆ.ಎಲ್ ರಾಹುಲ್ ರನ್ನ ಉಳಿಸಿಕೊಳ್ಳದೇ, ಮಯಾಂಕ್ ಅಗರ್ವಾಲ್ ಹಾಗೂ ಅರ್ಶದೀಪ್ ಸಿಂಗ್ ರನ್ನ ಮಾತ್ರ ಉಳಿಸಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ – ಇನ್ ಫಾರ್ಮ್ ಆಟಗಾರರನ್ನ ಉಳಿಸಿಕೊಳ್ಳದೇ ಹೊಸ ಮುಖಗಳಿಗೆ ಎಸ್.ಆರ್.ಹೆಚ್ ಮಣೆ ಹಾಕಿದೆ. ಡೇವಿಡ್ ವಾರ್ನರ್ ಹಾಗೂ ರಶೀದ್ ಖಾನ್ ರನ್ನ ಕೈ ಬಿಟ್ಟು, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಹಾಗೂ ವೇಗಿ ಉಮ್ರಾನ್ ಮಲೀಕ್ ರನ್ನ ಉಳಿಸಿಕೊಂಡಿದೆ.