ಇದಪ್ಪ ಅದೃಷ್ಟ ಅಂದ್ರೆ, ಟಾಪ್ ನಟಿಯರನ್ನು ಮೀರಿಸಿದ ಸಮಂತಾ, ವಿಚ್ಚೇದನ ಬೆನ್ನಲ್ಲೇ ಹುಡುಕಿ ಬಂತು ಅದೃಷ್ಟ. ಏನು ಗೊತ್ತೇ??

ಇದಪ್ಪ ಅದೃಷ್ಟ ಅಂದ್ರೆ, ಟಾಪ್ ನಟಿಯರನ್ನು ಮೀರಿಸಿದ ಸಮಂತಾ, ವಿಚ್ಚೇದನ ಬೆನ್ನಲ್ಲೇ ಹುಡುಕಿ ಬಂತು ಅದೃಷ್ಟ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ಟಾಲಿವುಡ್ ಜೋಡಿಗಳಾಗಿರುವ ಸಮಂತ ಹಾಗೂ ನಾಗಚೈತನ್ಯ ರವರು ವಿವಾಹ ವಿಚ್ಛೇದನವನ್ನು ಪಡೆದಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ವಿವಾಹ ವಿಚ್ಛೇದನವನ್ನು ಪಡೆದ ನಂತರ ತೆಲುಗಿನ ಯಾವ ಚಿತ್ರಕ್ಕೂ ಕೂಡ ಹಲವಾರು ದಿನಗಳ ಕಾಲ ನಟಿಸಲು ಸಹಿ ಹಾಕಿರಲಿಲ್ಲ. ಇನ್ನು ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಐಟಂ ಡ್ಯಾನ್ಸ್ ಒಂದಕ್ಕೆ ಸ್ಟೆಪ್ ಹಾಕಲು ಒಪ್ಪಿಕೊಂಡಿರುವುದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಸುದ್ದಿಯನ್ನು ಮಾಡಿತ್ತು.

ಇನ್ನು ಈ ಚಿತ್ರಕ್ಕಾಗಿ ಸಮಂತಾ ರವರು 1.50 ಕೋಟಿಯನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ ಎಂಬ ಸುದ್ದಿ ಕೂಡ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ಇದಾದ ನಂತರ ಸಮಂತಾ ರವರು ಶಾಕುಂತಲಂ ಎಂಬ ಏಕೈಕ ತೆಲುಗು ಚಿತ್ರದಲ್ಲಿ ನಟಿಸುವ ಕುರಿತಂತೆ ಕೂಡ ಘೋಷಣೆಯನ್ನು ಹೊರಟಿದ್ದರು. ಈಗ ಸಮಂತ ರವರು ನೇರವಾಗಿ ಹಾಲಿವುಡ್ ಗೆ ಹಾರಿದ್ದಾರೆ. ಹಾಲಿವುಡ್ ಸಿನಿಮಾ ನಿರ್ದೇಶಕನಾಗಿ ರುವ ಜಾನ್ ಫಿಲಿಪ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದಿ ಅರೇಂಜ್ಮೆಂಟ್ಸ್ ಆಫ್ ಲವ್ ಎಂಬ ಚಿತ್ರದಲ್ಲಿ ಸಮಂತಾ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಸಮಂತಾ ರವರು ಸಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆಯಷ್ಟೇ ಸಮಂತಾ ರವರು ಫ್ಯಾಮಿಲಿ ಮ್ಯಾನ್ ವೆಬ್ ಸೇರೀಸ್ ಚಿತ್ರದಲ್ಲಿ ತಮಿಳು ರೆಬೆಲ್ ಆಗಿ ನಟಿಸಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದರು. ಇನ್ನು ಈ ಹಾಲಿವುಡ್ ಚಿತ್ರದ ಮೂಲಕ ಕೂಡ ಅದೇ ರೀತಿಯ ಪಾತ್ರವನ್ನು ಮಾಡುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ. ಇನ್ನು ಸಮಂತ ನಟಿಸಲಿರುವ ದಿ ಅರೇಂಜ್ಮೆಂಟ್ಸ್ ಆಫ್ ಲವ್ ಚಿತ್ರ ಎಂ ಮುರಾರಿ ಎಂಬ ಭಾರತೀಯ ಲೇಖಕರ ಪುಸ್ತಕದ ಸಿನಿಮಾ ಅನುವಾದವಾಗಿದೆ. ಈ ಚಿತ್ರ ತಮಿಳು ಹಿಂದಿ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಮೂಡಿಬರಲಿದೆ. ಈ ಚಿತ್ರದ ಕುರಿತಂತೆ ಹಾಗೂ ಸಮಂತಾ ರವರ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.