ಜೀವನದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತಾನು ಗಂಡು ಹಾಗಿದ್ದರೆ ಚೆನ್ನಾಗಿರುತಿತ್ತು ಎಂದು ಆಲೋಚನೆ ಮಾಡುತ್ತಾರೆ, ಕಾರಣವೇನು ಗೊತ್ತೇ??

ಜೀವನದಲ್ಲಿ ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ತಾನು ಗಂಡು ಹಾಗಿದ್ದರೆ ಚೆನ್ನಾಗಿರುತಿತ್ತು ಎಂದು ಆಲೋಚನೆ ಮಾಡುತ್ತಾರೆ, ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ಯುಗದಲ್ಲಿ ಮಹಿಳೆಯರಿಗೆ ನೀಡುವ ಪ್ರಾಮುಖ್ಯತೆ ಹಾಗೂ ಸ್ಥಾನಮಾನಗಳನ್ನು ಹಿಂದಿನ ಕಾಲದಲ್ಲಿ ಅಷ್ಟೊಂದು ನೀಡಲಾಗುತ್ತಿರಲಿಲ್ಲ. ಹಿಂದಿನ ಕಾಲದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನವನ್ನು ಮಾತ್ರವಲ್ಲದೆ ಪುರುಷರ ಸಮಾನವಾಗಿ ಸಾಧನೆಗಳನ್ನು ಕೂಡ ಮಾಡುತ್ತಿದ್ದಾರೆ. ಆದರೂ ಕೂಡ ಮಹಿಳೆಯರಲ್ಲಿ ಒಂದು ವಿಚಾರ ಇಂದಿಗೂ ಕೂಡ ಕಾಡುತ್ತಿದೆ. ಅದೇನೆಂದರೆ ಮಹಿಳೆಯರಿಗೆ ಒಂದು ವಿಚಿತ್ರವಾದ ಆಸೆ ಇದೆ ಸ್ನೇಹಿತರೇ. ಹೌದು ಗೆಳೆಯರೇ ಮಹಿಳೆಯರಿಗೆ ಯಾಕೆ ನಾವು ಪುರುಷರಾಗಿ ಜನಿಸಲಿಲ್ಲ ಎಂಬ ಬೇಸರವಿದೆ ಅದಕ್ಕೆ ಕಾರಣಗಳು ಕೂಡ ಹಲವಾರು ಇವೆ. ಮಹಿಳೆಯರಲ್ಲಿ ಈ ವಿಚಿತ್ರವಾದ ಆಸೆ ಮೂಡಲು ಕಾರಣ ಏನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ.

ಮೊದಲಿಗೆ ಒಂದು ವೇಳೆ ಹೆಣ್ಣುಮಗಳು ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುತ್ತಾಳೆ ಎಂದರೆ ಮನೆಯವರು ಹೊತ್ತಿಗಿಂತ ಮುಂಚೆ ಮನೆಗೆ ಬಂದುಬಿಡು ಎಂಬುದಾಗಿ ಹೇಳುತ್ತಾರೆ. ಆದರೆ ಅದೇ ವಿಚಾರವನ್ನು ಗಂಡಿಗೆ ಯಾವತ್ತೂ ಕೂಡ ಹೇಳುವುದಿಲ್ಲ ಎಷ್ಟೊತ್ತಿಗೆ ಬೇಕಾದರೂ ಬರಬಹುದು ಎಷ್ಟೊತ್ತಿಗೆ ಬೇಕಾದರೂ ಹೋಗಬಹುದು. ಈ ವಿಚಾರವೂ ಕೂಡ ಹೆಣ್ಣು ಮಕ್ಕಳಿಗೆ ತಾವು ಗಂಡಾಗಿ ಹುಟ್ಟಿದರೆ ಎಷ್ಟು ಚೆನ್ನಾಗಿರುತಿತ್ತು ಎಂಬ ಭಾವನೆಯನ್ನು ಮೂಡಿಸುವಂತೆ ಮಾಡುತ್ತದೆ. ಅದರಲ್ಲೂ ಕೂಡ ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ಸಾಗಿಸಬೇಕೆಂಬ ದೃಷ್ಟಿಯಿಂದ ಕೆಲಸಕ್ಕೆ ಹೋಗುವ ಹುಡುಗಿಯರಿಗಂತೂ ಇಂತಹ ಕಟ್ಟುಪಾಡುಗಳನ್ನು ಆಚರಿಸಲು ತುಂಬಾನೇ ಕಷ್ಟವಾಗಿರುತ್ತದೆ.

ಎರಡನೇದಾಗಿ ಮನೆಯಿಂದ ಹೊರಗಡೆ ಎಲ್ಲಾದರೂ ಹೆಣ್ಣುಮಕ್ಕಳು ತಿರುಗಾಡಲು ಹೋಗಬೇಕೆಂದರೆ ಪೋಷಕರ ಬಳಿ ನೂರಾರು ಬಾರಿ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಮಗಳ ಕುರಿತಂತೆ ಪೋಷಕರು ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ ಗಂಡುಮಕ್ಕಳು ಮಾತ್ರ ಯಾವುದೇ ಅನುಮತಿ ಇಲ್ಲದೆ ಹೊರಗಡೆ ತಿರುಗಾಡಲು ಹೋಗಬಹುದಾಗಿದೆ. ಇದು ಕೂಡ ಹೆಣ್ಣುಮಕ್ಕಳಲ್ಲಿ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.

ಮೂರನೇದಾಗಿ ಹೆಣ್ಣುಮಕ್ಕಳು ಚಿಕ್ಕ ತಪ್ಪು ಮಾಡಿದರೂ ಕೂಡ ಮನೆಯ ಮರ್ಯಾದೆ ಹಾಳಾಯಿತು ಎಂಬ ಮಾತನ್ನು ಮನೆಯಲ್ಲಿ ಆಡುತ್ತಾರೆ ಹಾಗೂ ಸಮಾಜ ಕೂಡ ಇದಕ್ಕೆ ತಲೆ ಅಲ್ಲಾಡಿಸುತ್ತದೆ. ಆದರೆ ಗಂಡುಮಕ್ಕಳು ಏನೇ ತಪ್ಪು ಮಾಡಿದರೂ ಕೂಡ ಅದನ್ನು ಎಲ್ಲರೂ ಮರೆತುಬಿಡುತ್ತಾರೆ ಯಾಕೆಂದರೆ ಆತ ಗಂಡು ಅಲ್ಲವೆ ಎಂಬ ಭಾವನೆ. ಇದು ಕೂಡ ತಾವು ಗಂಡಾಗಿ ಹುಟ್ಟಿದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆಯನ್ನು ಮೂಡಿಸಲು ಆರಂಭಿಸುತ್ತದೆ.

ನಾಲ್ಕನೇದಾಗಿ ಮನೆಯಲ್ಲಿ ತೆಗೆದುಕೊಳ್ಳುವ ಹಲವಾರು ನಿರ್ಣಯಗಳಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಹೆಣ್ಣುಮಕ್ಕಳಿಗೆ ನೀಡುವುದು ತುಂಬಾನೇ ಕಡಿಮೆಯಾಗಿಬಿಟ್ಟಿದೆ. ಹೀಗಾಗಿ ತಮ್ಮ ಇಷ್ಟ-ಕಷ್ಟಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಕೂಡ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ವಿರುವುದಿಲ್ಲ. ಇದು ಕೂಡ ಒಂದು ಮುಖ್ಯ ಸಮಸ್ಯೆಯಾಗಿದೆ ಆದರೆ, ಗಂಡು ಮಕ್ಕಳ ವಿಚಾರದಲ್ಲಿ ಹೀಗಿರುವುದಿಲ್ಲ ಅವರ ಅಭಿಪ್ರಾಯ ಹಾಗೂ ನಿರ್ಣಯಗಳಿಗೆ ಮನ್ನಣೆ ನೀಡುತ್ತಾರೆ.

ಕೊನೆಯದಾಗಿ ಪ್ರತಿ ತಿಂಗಳು ಕೂಡ ಹೆಣ್ಣುಮಕ್ಕಳಿಗೆ ಋತುಚಕ್ರ ಬರುವ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದರಲ್ಲಿ ಹಲವಾರು ನೋ’ವುಗಳನ್ನು ಕೂಡ ಅನುಭವಿಸುತ್ತಾರೆ. ಆದರೆ ಗಂಡು ಮಕ್ಕಳಿಗೆ ಇಂತಹ ಯಾವುದೇ ಸಮಸ್ಯೆಗಳ ಸುಳಿವು ಕೂಡ ಇರುವುದಿಲ್ಲ. ಇವೆಲ್ಲ ಕಾರಣಗಳಿಂದಾಗಿ ಹೆಣ್ಣುಮಕ್ಕಳು ನಾವು ಗಂಡು ಮಕ್ಕಳಾಗಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಭಾವನೆ ಮೂಡಲು ಪ್ರಮುಖ ಕಾರಣಗಳಾಗಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ಹಂಚಿಕೊಳ್ಳಿ.