ನಿಮ್ಮ ಉಗುರಿನ ಮೇಲೆ ಅರ್ಧಚಂದ್ರಾಕೃತಿ ಇದೆಯೇ?? ಹಾಗಿದ್ದರೆ ಈ ಕುರಿತು ಸಾಮುದ್ರಿಕ ಶಾಸ್ತ್ರ ಏನು ಹೇಳುತ್ತದೆ ಗೊತ್ತೇ?? ಶೇಕಡಾ 99 ಜನರಿಗೆ ಈ ಕುರಿತು ತಿಳಿದಿಲ್ಲ.

ನಮಸ್ಕಾರ ಸ್ನೇಹಿತರೇ ಹಿಂದೂಧರ್ಮದಲ್ಲಿ ಶಾಸ್ತ್ರ ಪುರಾಣಗಳಿಗೆ ಸಾಕಷ್ಟು ಮಹತ್ವದ ಸ್ಥಾನವನ್ನು ನೀಡಲಾಗಿದೆ. ಈ ಮೊದಲ ಶಾಸ್ತ್ರದಲ್ಲಿ ಹೇಳಿರುವಂತೆ ಮನುಷ್ಯ ಸ್ವಭಾವ ಹಾಗೂ ವ್ಯಕ್ತಿತ್ವದಲ್ಲಿ ಸಂಪೂರ್ಣವಾಗಿ ತದ್ವಿರುದ್ಧವಾಗಿರುತ್ತಾನೆ ಎಂಬುದಾಗಿ. ಅದರಲ್ಲೂ ಕೂಡ ಈ ಕಲಿಯುಗದಲ್ಲಿ ಮನುಷ್ಯ ನೋಡಲು ಹೇಗಿರುತ್ತಾರೋ ಮನಸ್ಸಿನ ಒಳಗಡೆ ಹಾಗೆ ಇರುವುದಿಲ್ಲ ಎಂಬುದು ಕೂಡ 100% ನಿಜವಾದ ಮಾತು ಎಂಬುದು ಹಲವಾರು ಬಾರಿ ಸಾಬೀತಾಗಿದೆ.

ಇನ್ನು ಸಾಮುದ್ರಿಕ ಶಾಸ್ತ್ರದಲ್ಲಿ ಮನುಷ್ಯನ ಅಂಗಾಂಗಗಳನ್ನು ನೋಡಿ ಆತನ ಸ್ವಭಾವವನ್ನು ಹೇಳಬಹುದಾಗಿದೆ ಎಂಬುದು ಕೂಡ ಉಲ್ಲೇಖವಾಗಿದೆ. ಇನ್ನು ನೀವು ಹಲವಾರು ಜನರ ಕೈಯನ್ನು ಗಮನಿಸಿದರೆ ಕೈಯಿನ ಉಗುರಿನಲ್ಲಿ ಅರ್ಧಚಂದ್ರಾಕೃತಿಯ ಬಿಳಿ ಕಲೆ ಇರುತ್ತದೆ. ವೈಜ್ಞಾನಿಕವಾಗಿ ಇದನ್ನು ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದಾಗ ಹೀಗೆ ಆಗುತ್ತದೆ ಎಲ್ಲಿ ಹೇಳುತ್ತಾರೆ ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಇದು ಬೇರೆಯದೇ ವಿಷಯವನ್ನು ಹೇಳುತ್ತದೆ.

ಮನುಷ್ಯನ ಸ್ವಭಾವ ಹೇಗೆ ಹಾಗೂ ಆತನ ಜೀವನದ ಕುರಿತಂತೆ ಹಲವಾರು ವಿಚಾರಗಳನ್ನು ಇದು ಬಿಚ್ಚಿಡುತ್ತದೆ. ಹಾಗಿದ್ದರೆ ಅದೇನು ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ. ಮೊದಲನೇದಾಗಿ ಎಲ್ಲರಿಗಿಂತ ಹೆಚ್ಚಾಗಿ ಪರಿಶ್ರಮ ಜೀವಿ ಆಗಿರುತ್ತಾರೆ. ಉಗುರಿನಲ್ಲಿ ಅರ್ಧಚಂದ್ರಾಕೃತಿ ಹೊಂದಿರುವ ವ್ಯಕ್ತಿಗಳು ಚಿಕ್ಕವಯಸ್ಸಿನಿಂದಲೂ ಕೂಡ ಸಾಕಷ್ಟು ಪರಿಶ್ರಮ ಜೀವಿಗಳ ಆಗಿರುತ್ತಾರೆ. ಅವರು ಯಶಸ್ಸಿಗಾಗಿ ಯಾವುದೇ ಕಾರಣಕ್ಕೂ ಕೂಡ ಅಡ್ಡದಾರಿಯನ್ನು ಹಿಡಿಯುವುದಿಲ್ಲ.

ಎಲ್ಲದಕ್ಕಿಂತ ಹೆಚ್ಚಾಗಿ ಇವರು ಮಾಡಿದ ಕೆಲಸವನ್ನು ಸದಾಕಾಲ ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡುತ್ತಾರೆ. ಹಿಡಿದ ಕೆಲಸವನ್ನು ಅದು ಪೂರ್ಣವಾಗುವವರೆಗೆ ಕೂಡ ಬಿಡುವ ಮಾತೇ ಇಲ್ಲ. ಒಂದು ವೇಳೆ ಇವರು ಶಿಕ್ಷಣ ಕ್ಷೇತ್ರದಲ್ಲಿ ಇದ್ದರೆ ಖಂಡಿತವಾಗಿಯೂ ಎಲ್ಲರೂ ಮೆಚ್ಚುವಂತಹ ಸಾಧನೆಯನ್ನು ಮಾಡುತ್ತಾರೆ ಎಂಬುದು ಇಲ್ಲಿ ಉಲ್ಲೇಖವಾಗಿದೆ. ಇವರ ದೃಢವಿಶ್ವಾಸ ಹಾಗೂ ಪರಿಶ್ರಮವೇ ಇವರಿಗೆ ಜೀವನದಲ್ಲಿ ಅತ್ಯಂತ ಒಳ್ಳೆಯ ಕೆಲಸವನ್ನು ಮಾಡಿ ಆರ್ಥಿಕವಾಗಿ ಯಶಸ್ವಿಯಾಗಲು ಸಹಕಾರಿಯಾಗಿರುತ್ತದೆ.

ಸ್ವಚ್ಛ ಮನಸ್ಸಿನವರು ಇಂತಹ ವ್ಯಕ್ತಿಗಳು ಕೇವಲ ಪರಿಶ್ರಮಿಗಳು ಮಾತ್ರವಲ್ಲದೆ ಮನಸ್ಸಿನಿಂದಲೂ ಕೂಡ ಯಾರ ಕುರಿತಂತೆ ಕ್ಲೇಶವನ್ನು ಹೊಂದಿರದ ಸ್ವಚ್ಛ ಮನಸ್ಸಿನವರು. ಇನ್ನು ಇವರು ಯಾವುದೇ ಕೆಲಸಕ್ಕೂ ಕೂಡ ಹಿಮ್ಮೆಟ್ಟು ದಿಲ್ಲ. ಇನ್ನು ಇವರು ಯಾವುದೇ ಕಾರಣಕ್ಕೂ ಕೂಡ ಕೋಪ ಮಾಡಿಕೊಳ್ಳದೆ ಸದಾಕಾಲ ಶಾಂತ ಸ್ವಭಾವದಲ್ಲಿ ಇರುತ್ತಾರೆ. ಇನ್ನು ಇವರು ಎಲ್ಲರ ಮನಸ್ಸನ್ನು ಗೆದ್ದು ಪ್ರೀತಿಯನ್ನು ಮೂಡಿಸುವಲ್ಲಿ ಅತಿವೇಗವಾಗಿ ಯಶಸ್ವಿಯಾಗುತ್ತಾರೆ. ಇನ್ನು ಇವರು ಯಾರ ಮನಸ್ಸನ್ನು ಕೂಡ ದುಃಖಿಸಲು ಇಷ್ಟಪಡುವುದಿಲ್ಲ.

ಶಾರೀರಿಕವಾಗಿ ಕೊರತೆ ಇರುತ್ತದೆ ಕೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಜೀವನದಲ್ಲಿ ಎಷ್ಟೊಂದು ಸಂತೋಷ ನೆಮ್ಮದಿ ಇದ್ದರೂ ಕೂಡ ಇವರು ಆರೋಗ್ಯ ವಿಚಾರದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇವರು ಹೊರಗಡೆ ಎಷ್ಟೇ ಕಡಿಮೆ ತಿಂದರೂ ಕೂಡ ಆರೋಗ್ಯದ ವಿಚಾರದಲ್ಲಿ ಸದಾ ಒಂದಿಲ್ಲೊಂದು ಸಮಸ್ಯೆಯನ್ನು ಕಾಣುತ್ತಲೇ ಇರುತ್ತಾರೆ. ಹೀಗಾಗಿ ಉಗುರಿನಲ್ಲಿ ಅರ್ಧಚಂದ್ರಾಕೃತಿ ಉಳ್ಳವರು ತಮ್ಮ ಆರೋಗ್ಯದ ವಿಚಾರವಾಗಿ ವೈದ್ಯರ ಬಳಿ ಆಗಾಗ ಹೋಗುತ್ತಿರುವುದು ಒಳ್ಳೆಯದು. ಇನ್ನು ಕೇವಲ ಇದು ಶಾಸ್ತ್ರದಲ್ಲಿ ಮಾತ್ರವಲ್ಲದೆ ವೈಜ್ಞಾನಿಕವಾಗಿ ಕೂಡ ಸಾಬೀತಾಗಿರುವ ಅಂಶವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Post Author: Ravi Yadav