ರೇಷನ್ ಅಕ್ಕಿ ಬಳಸಿಕೊಂಡು ಮನೆಯ ಮಂದಿಯೆಲ್ಲ ಇಷ್ಟ ಪಡುವ ಬೇಳೆ ಕಿಚಡಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದಿನವೂ ಒಂದೇ ತರಹದ ಪದಾರ್ಥಗಳನ್ನು ತಿಂದು ತಿಂದೂ ಬೋರ್‍ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ಒಂದು ಸೂಪರ್ ಆದ ರುಚಿಕರವಾದ ರೆಸಿಪಿ ಬೇಳೆ ಕಿಚಡಿ. ಇದಕ್ಕೆ ಯಾವ ಸೋನಾ ಮಸೂರಿ ಅಕ್ಕಿಯೂ ಬೇಡ, ರೇಶನ್ ಅಕ್ಕಿ ಇದ್ದರೆ ಸಾಕು.

ಬೇಳೆ ಕಿಚಡಿ ಮಾಡಲು ಬೇಕಾಗುವ ಸಾಮಾಗ್ರಿಗಳು: ಅರ್ಧ ಕಪ್ ರೇಶನ್ ಅಕ್ಕಿ, ಮುಕ್ಕಾಲು ಕಪ್ ಹೆಸರುಬೇಳೆ, ಹಸಿಮೆಣಸಿನ ಕಾಯಿ ೩, ಗೋಡಂಬಿ ೫, ಶುಂಠಿ ಸ್ವಲ್ಪ, ಕಾಳು ಮೆಣಸು ಸ್ವಲ್ಪ, ಜೀರಿಗೆ ಸ್ವಲ್ಪ, ಕರಿಬೇವು ಸ್ವಲ್ಪ, ತುಪ್ಪ ೨ ಚಮಚ, ಇಂಗು ಚಿಟಿಕೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಹೆಸರುಬೇಳೆಯನ್ನು ಪ್ಯಾನ್ ಗೆ ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ಹುರಿಯುವಾಗ ಎಣ್ಣೆಯನ್ನು ಬಳಸದೇ ಹಾಗೆಯೇ ಡ್ರೈ ರೋಸ್ಟ್ ಮಾಡಿ. ಈಗ ಅರ್ಧ ಕಪ್ ಅಕ್ಕಿಯನ್ನು ತೊಳೆದು, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಅದಕ್ಕೆ ಅಕ್ಕಿಯನ್ನು ಹಾಕಿ ಬೇಯಿಸಲು ಇಡಿ (ಇಲ್ಲಿ ಅನ್ನ ಮಾಡಲು ಬಳಸುವುದಕ್ಕಿಂತ ತುಸು ಹೆಚ್ಚು ನೀರನ್ನೇ ತೆಗೆದುಕೊಳ್ಳಬೇಕು) ಇದಕ್ಕೆ ಹುರಿದಿಟ್ಟು ಕೊಂಡ ಬೇಳೆ ಹಾಗೂ ಉಪ್ಪನ್ನು ಸೇರಿಸಿ. ಇವೆರಡೂ ಚೆನ್ನಾಗಿ ಬೇಯಲಿ (ನೀರು ಕಡಿಮೆಯಾಗಿ ಅನ್ನ ಹಾಗೂ ಬೇಳೆ ಒಟ್ಟಿಗೆ ಚೆನ್ನಾಗಿ ಬೇಯಬೇಕು).

ನಂತರ ಒಂದು ಪ್ಯಾನ್ ಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಶುಂಠಿ, ಹಸಿಮೆಣಸು, ಗೋಡಂಬಿ, ಕರಿಬೇವು, ಇಂಗು ಇವೆಲ್ಲವನ್ನೂ ಹಾಕಿ ಫ್ರೈ ಮಾಡಿ. ನಂತರ ಇದನ್ನು ಬೆಂದ ಅನ್ನ ಬೇಳೆ ಮಿಶ್ರಣಕ್ಕೆ ಸೇರಿಸಿದರೆ ಬೇಳೆ ಕಿಚಡಿ ರೆಡಿ. ಅರ್ಧ ಕಪ್ ಅಕ್ಕಿಯಲ್ಲಿ ಸುಮಾರು ಮೂರರಿಂದ ನಾಲ್ಕು ಜನರಿಗೆ ಸಾಕಾಗುವಷ್ಟು ಕಿಚಡಿ ಸಿದ್ದವಾಗುತ್ತದೆ.

Post Author: Ravi Yadav