ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಪ್ಪು ಮೂವಿ ಗಳನ್ನು ನಿಲ್ಲಿಸಬೇಡಿ, ಅಪ್ಪು ರವರ ಸ್ಥಾನವನ್ನು ತುಂಬಬಲ್ಲಂತಹ ಏಕೈಕ ನಟ ಇವರೇ ಎಂದ ಪುನೀತ್ ಫ್ಯಾನ್ಸ್. ಯಾರಂತೆ ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಕಳೆದುಕೊಂಡು ಈಗಾಗಲೇ ಅಭಿಮಾನಿಗಳು ಹಾಗೂ ಕನ್ನಡಿಗರು ಕಂಗಾಲಾಗಿದ್ದಾರೆ. ಅವರನ್ನು ಕಳೆದುಕೊಂಡಿರುವ ದುಃಖವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸಲಾಗಿದೆ. ಅಭಿಮಾನಿಗಳು ಸಾಗರೋಪಾದಿಯಲ್ಲಿ ಅಪ್ಪು ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಟಿಸಬೇಕಾಗಿದ್ದ ಹಲವಾರು ಚಿತ್ರಗಳು ಅವರ ಹಠಾತ್ ಅಗಲಿಕೆಯಿಂದಾಗಿ ಅರ್ಧಕ್ಕೆ ನಿಂತಿವೆ. ಪವನ್ ಕುಮಾರ್ ರವರ ಜೊತೆಗೆ ನಟಿಸಬೇಕಾಗಿದ್ದ ದ್ವಿತ್ವ, ಸಂತೋಷ್ ಆನಂದ್ ರಾಮ್, ಕೃಷ್ಣ ಹಾಗೂ ದಿನಕರ್ ತೂಗುದೀಪ ಜೊತೆಗೆ ನಟಿಸಬೇಕಾಗಿದ್ದ ಚಿತ್ರಗಳು ಪ್ರಾರಂಭವಾಗುವ ಮುನ್ನವೇ ಮುಕ್ತಯವಾಗಿವೆ. ಇನ್ನು ಇದಕ್ಕೆ ಅಭಿಮಾನಿಗಳು ಟ್ವಿಟ್ಟರ್ ಅಭಿಯಾನವೊಂದನ್ನು ಕೈಗೊಂಡಿದ್ದಾರೆ.

ಅದೇನೆಂದರೆ ನಿರ್ದೇಶಕರನ್ನು ಟ್ಯಾಗ್ ಮಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ಡ್ರಾಪ್ ಮಾಡಬೇಡಿ ಆ ಕಥೆಗಳಿಗೆ ದೊಡ್ಡ ಮನೆಯ ಮೂರನೇ ಕುಡಿಯಾಗಿರುವ ಯುವರಾಜ್ ಕುಮಾರ್ ರವರನ್ನು ನಾಯಕನನ್ನಾಗಿ ಮಾಡಿ ಎಂಬುದಾಗಿ ಕೇಳಿಕೊಂಡಿದ್ದಾರೆ. ಅಭಿಮಾನಿಗಳು ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನು ಯುವರಾಜ್ ಕುಮಾರ್ ರಲ್ಲಿ ಕಾಣುತ್ತಿದ್ದಾರೆ. ಅಭಿಮಾನಿಗಳ ಪ್ರಕಾರ ಅಪ್ಪುರವರ ಸ್ಥಾನವನ್ನು ಯುವರಾಜ್ ಕುಮಾರ್ ರವರು ತುಂಬಬಹುದು ಎನ್ನುವ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಚಿಕ್ಕಪ್ಪ ನಿರ್ವಹಿಸಿಕೊಂಡು ಬಂದಿರುವ ಸಿನಿಮಾ ಸಾಧನೆಯನ್ನು ಮುಂದುವರೆಸಿಕೊಂಡು ಹೋಗಬೇಕೆನ್ನುವುದೇ ಅಭಿಮಾನಿಗಳ ಅಭಿಪ್ರಾಯ ಹಾಗೂ ಮಹದಾಸೆ.

Get real time updates directly on you device, subscribe now.