ಬುಲೆಟ್ ಪ್ರಕಾಶ್ ರವರು ತೀರಿಕೊಂಡಾಗ ಅಪ್ಪು ಮಾಡಿದ್ದು ಏನಂತೆ ಗೊತ್ತೇ?? ಸತ್ಯ ತಿಳಿಸಿದ ಬುಲೆಟ್ ಪ್ರಕಾಶ್ ಮಗ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಪ್ಪು ಅಂದರೇ ಪುನೀತ್ ರಾಜ್ ಕುಮಾರ್ ನಿಜ ಜೀವನದಲ್ಲಿಯೂ ರಾಜಕುಮಾರನೇ. ಏಡಗೈಲಿ ಮಾಡಿದ ಸಹಾಯ ಬಲಗೈಗೂ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದು, ಪುನೀತ್ ರಾಜ್ ಕುಮಾರ್ ರವರ ವಿಶೇಷ ಗುಣಲಕ್ಷಣಗಳಲ್ಲೊಂದು. ಪುನೀತ್ ನಮ್ಮನ್ನ ಅಗಲಿದ ನಂತರ, ಅಪ್ಪು ಮಾಡುತ್ತಿದ್ದ ಬೆಟ್ಟದಷ್ಟು ಸಹಾಯಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಅಪ್ಪು ಅಂತಿಮ ಯಾತ್ರೆಗೆ ಮಹಾತ್ಮಾ ಗಾಂಧೀಜಿಯವರ ಅಂತಿಮ ಯಾತ್ರೆಗಿಂತಲೂ ಜಾಸ್ತಿ ಜನ ಸೇರಿದ್ದು ಅಪ್ಪುರವರ ಸಮಾಜ ಸೇವೆ ಹಾಗೂ ಜನಪ್ರಿಯತೆಗೆ ಸಾಕ್ಷಿ.

ಪುನೀತ್ ರಾಜ್ ಕುಮಾರ್ ಬಡವರಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ, ಚಿತ್ರರಂಗದ ಕಲಾವಿದರಿಗೆ, ತಂತ್ರಜ್ಞರಿಗೆ ಹೀಗೆ ಪ್ರತಿಯೊಬ್ಬರಿಗೂ ಬೆಟ್ಟದಷ್ಟು ಸಹಾಯ ಮಾಡುತ್ತಿದ್ದರು. ಆದರೇ ಅದನ್ನ ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಇನ್ನು ಸಹಾಯ ಪಡೆದವರಿಗೂ ಸಹ ಇದನ್ನ ಯಾರಿಗೂ ಹೇಳಬೇಡಿ ಎಂದು ಕಟ್ಟಪ್ಪಣೆ ಹೊರಡುಸುತ್ತಿದ್ದರಂತೆ. ಇದು ಪುನೀತ್ ರಾಜ್ ಕುಮಾರ್ ರವರ ವಿಶೇಷ ಗುಣಗಳೊಲ್ಲೊಂದು.

ಇನ್ನು ಪುನೀತ್ ರಾಜ್ ಕುಮಾರ್ ರವರ ಬಗ್ಗೆ ಮಾತನಾಡಿರುವ ಬುಲೆಟ್ ಪ್ರಕಾಶ್ ಮಗ ಒಂದು ಸತ್ಯ ಘಟನೆ ಬಿಚ್ಚಿಟ್ಟಿದ್ದಾರೆ. ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಳೆದ ವರ್ಷ ನಮ್ಮನ್ನ ಬಿಟ್ಟು ಹೋದರು. ಅವರ ಕುಟುಂಬ ಸಂಕಷ್ಟದಲ್ಲಿತ್ತು. ಕೆಲವು ದಿನಗಳ ನಂತರ ಬುಲೆಟ್ ಪ್ರಕಾಶ್ ಮನೆಗೆ ಬಂದ ಪುನೀತ್ ರಾಜ್ ಕುಮಾರ್, ಬುಲೆಟ್ ಪತ್ನಿಗೆ ಸಾಂತ್ವನ ಹೇಳಿದರು. ಅದಲ್ಲದೇ ಜೊತೆಗೆ ಯಾರಿಗೂ ತಿಳಿಯದಂತೆ ಒಂದು ಹಣ ತುಂಬಿದ ಕವರ್ ನ್ನ ಅಲ್ಲಿಯೇ ಬಿಟ್ಟು ಹೊರಟರಂತೆ. ಅದು ಹಣದ ಕವರ್ ಎಂದು ತಿಳಿದು ಅವರು ಪುನಃ ಪ್ರಶ್ನಿಸಿದಾಗ ಅಪ್ಪು ಏನನ್ನೂ ಪ್ರತಿಕ್ರಿಯಿಸದೇ, ನಾನು ಕೊಟ್ಟದನ್ನ ಯಾರಿಗೂ ಹೇಳಬೇಡಿ ಎಂದು ಹೊರಟು ಹೋದರಂತೆ. ಅಲ್ಲಿದ್ದವರಿಗೆಲ್ಲಾ ಒಮ್ಮೆ ದಿಗ್ಭ್ರಮೆ ಉಂಟಾಯಿತಂತೆ. ಇದು ಪುನೀತ್ ರಾಜ್ ಕುಮಾರ್ ರವರ ಸರಳತೆ. ಇಂತಹ ಯುವರತ್ನ ಇನ್ನು ನೆನಪು ಮಾತ್ರ. ಅಪ್ಪು ಅಭಿಮಾನಿಗಳ ಹೃದಯದಲ್ಲಿ ಸದಾ ಅಜರಾಮರ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav