ಅಪ್ಪು ಆತ್ಮದ ಜೊತೆ ಗುರೂಜಿ ಡಾ. ಶ್ರೀ ರಾಮಚಂದ್ರ ಮಾತುಕತೆ, ಅಪ್ಪುಗೆ ಪುನರ್ಜನ್ಮವಿದೆಯೇ? ಇದ್ದರೇ ಪುನರ್ಜನ್ಮ ಎಲ್ಲಾಗುತ್ತದೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪುನೀತ್ ನಮನ ಕಾರ್ಯಕ್ರಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮೊನ್ನೆ ಅರಮನೆ ಮೈದಾನದಲ್ಲಿ ಸಾವಿರಾರು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ನಡೆದಿದೆ. ಇನ್ನು ಇತ್ತೀಚಿಗೆ ಪುನೀತ್ ರಾಜಕುಮಾರ್ ರವರ ಆತ್ಮದ ಜೊತೆಗೆ ವಿದೇಶಿ ತಜ್ಞನೊಬ್ಬ ಮಾತನಾಡುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೊಮ್ಮೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆತ್ಮದೊಂದಿಗೆ ಮಾತನಾಡಲು ಮತ್ತೊಬ್ಬ ವ್ಯಕ್ತಿ ಸಜ್ಜಾಗಿದ್ದಾರೆ.

ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಆತ್ಮದೊಂದಿಗೆ ಮಾತನಾಡಲು ಹೊರಟಿರುವುದು ಇನ್ಯಾರು ಅಲ್ಲ ಕನ್ನಡದ ಮೂಲದ ಅಂತರಾಷ್ಟ್ರೀಯ ಆಧ್ಯಾತ್ಮ ಚಿಂತಕರು ಹಾಗೂ ಆತ್ಮ ತಜ್ಞರು ಆಗಿರುವ ಶ್ರೀ ರಾಮಚಂದ್ರ ಗುರೂಜಿಗಳು. ನಿಮಗೆಲ್ಲ ತಿಳಿದಿರುವಂತೆ ರಾಮಚಂದ್ರ ಗುರೂಜಿ ಅವರು ಹಲವಾರು ವರ್ಷಗಳಿಂದ ಆತ್ಮಗಳ ಜೊತೆಗೆ ಮಾತನಾಡುತ್ತಾ ಬಂದಿದ್ದಾರೆ. ಇನ್ನು ಈ ಕುರಿತಂತೆ ಹಲವಾರು ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮಗಳನ್ನು ಕೂಡ ಮಾಡಿದ್ದಾರೆ ರಾಮಚಂದ್ರ ಗುರೂಜಿಗಳು.

ಕೆಲವಾರು ವರ್ಷಗಳ ಹಿಂದೆ ಶಿರಡಿ ಸಾಯಿಬಾಬಾ ರವರ ಆತ್ಮವನ್ನು ಒಬ್ಬ ವ್ಯಕ್ತಿಯ ಮೇಲೆ ತರಿಸಿ ಅವರ ಕುರಿತಂತೆ ಮಾತನಾಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಈಗ ಪುನೀತ್ ರಾಜಕುಮಾರ್ ರವರ ಆತ್ಮದ ಜೊತೆಗೆ ಕೂಡ ಇದೇ ರೀತಿಯ ಕಾರ್ಯಕ್ರಮವನ್ನು ಮಾಡಲು ರಾಮಚಂದ್ರ ಗುರೂಜಿಗಳು ಅಭಿಲಾಶೆ ವ್ಯಕ್ತಪಡಿಸಿದ್ದಾರಂತೆ. ಒಂದು ವೇಳೆ ಹೀಗಾದರೆ ಪುನೀತ್ ರಾಜಕುಮಾರ್ ರವರ ಕೊನೆಯ ಗಳಿಗೆಯಲ್ಲಿ ಏನಾಯಿತು ಆಸ್ಪತ್ರೆಯಲ್ಲಿ ಏನು ನಡೆಯಿತು ಮತ್ತು ಅವರ ಪುನರ್ಜನ್ಮ ಎಲ್ಲಿ ನಡೆಯಲಿದೆ ಎಂಬುದರ ಕುರಿತಂತೆ ವಿವರಗಳು ದೊರಕಲಿದೆ. ಆದರೆ ಇದೆಲ್ಲ ಸಾಧ್ಯವಾಗಲು ಮೊದಲಿಗೆ ಪುನೀತ್ ರಾಜಕುಮಾರ್ ರವರ ಕುಟುಂಬಸ್ಥರು ಈ ಕಾರ್ಯಕ್ಕೆ ರಾಮಚಂದ್ರ ಗುರೂಜಿ ಗಳಿಗೆ ಒಪ್ಪಿಗೆ ಏನು ನೀಡಬೇಕಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Post Author: Ravi Yadav