ಪುನೀತ್ ರವರ ನಿಧನದ ವಿಷಯದಲ್ಲಿಯೂ ಕೂಡ ಲಾಭವನ್ನು ಪಡೆಯಲು ಪ್ರಯತ್ನ ಪಟ್ಟರೇ ರಜನಿ, ಅಪ್ಪು ಫ್ಯಾನ್ಸ್ ಅಂತು ಫುಲ್ ಗರಂ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲಾ ಅಗಲಿ ಹಲವಾರು ದಿನಗಳು ಕಳೆದಿವೆ. ಇನ್ನು ರಜನಿಕಾಂತ್ ಅವರು ಈ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇನ್ನು ಇದೇ ಸಂದರ್ಭದಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಜನಿಕಾಂತ್ ರವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು‌.

ಶಸ್ತ್ರಚಿಕಿತ್ಸೆಯನ್ನು ಮುಗಿಸಿ ಮನೆಗೆ ಬಂದನಂತರ ಅಪ್ಪು ಅವರ ನಿಧನಕ್ಕೆ ಭಾವನಾತ್ಮಕ ಸಂತಾಪವನ್ನು ಕೋರಿದ್ದಾರೆ ಆದರೆ ಇದಕ್ಕೆ ಈಗ ಅಪ್ಪು ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಹೌದು ಅಪ್ಪು ಅವರ ನಿಧನದ ಸುದ್ದಿಯನ್ನು ಕೂಡ ತಮ್ಮ ಮಗಳ ಹೂಟೆ ಆಪ್ ನ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ ಎಂಬುದಾಗಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಹೌದು ಗೆಳೆಯ ರಜನಿಕಾಂತ್ ಅವರು ತನ್ನ ಮಗಳ ಹೂಟೆ ಆಪ್ ನಲ್ಲಿ ಅಪ್ಪು ಅವರಿಗೆ ಸಂತಾಪವನ್ನು ಕೋರಿ ಅದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ.

ಇನ್ನು ಸಂತಾಪದಲ್ಲಿ ಪುನೀತ್​ ನನ್ನ ಕಣ್ಣಮುಂದೆ ಬೆಳೆದ ಪ್ರೀತಿಪಾತ್ರ ಮಗು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ನಮ್ಮನ್ನು ಅವರು ಅಗಲಿದರು. ಕನ್ನಡ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಮಾತುಗಳೇ ಬರುತ್ತಿಲ್ಲ. ಪುನೀತ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಆದರೂ ಅವರು ಈ ಸಂದೇಶವನ್ನು ಹಂಚಿಕೊಂಡ ರೀತಿಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ರವರ ನಿಧನದ ಸುದ್ಧಿಯನ್ನು ಕೆಲವು ಡಯಾಗ್ನೊಸ್ಟಿಕ್ ಸಂಸ್ಥೆಗಳು ಕೂಡ ಲಾಭಕ್ಕಾಗಿ ಬಳಸಿಕೊಂಡಿದ್ದವು. ರಜನಿಕಾಂತ್ ರವರು ಸಂತಾಪವನ್ನು ಸೂಚಿಸಿರುವ ರೀತಿಯ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav