ಅಪ್ಪು ಇರುವಾಗಲೇ ಸಮಾಜಸೇವೆಗೆ ಇಳಿದಿದ್ದ ಅಪ್ಪು ಹಿರಿಯ ಪುತ್ರಿ ಧೃತಿ, ಚಿಕ್ಕ ವಯಸ್ಸಿನಲ್ಲಿಯೇ ಇವರು ಏನು ಮಾಡಿದ್ದರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಕ್ಟೋಬರ್ 29 ಎಂದಾಗ ನಮಗೆ ಕನ್ನಡ ಚಿತ್ರರಂಗದ ಕರಾಳ ದಿನದ ನೆನಪಾಗುತ್ತದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೇವಲ 46ನೇ ವಯಸ್ಸಿಗೆ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋದಂತಹ ದಿನ. ಅಷ್ಟೊಂದು ಆರೋಗ್ಯವಂತರಾಗಿದ್ದ ಪುನೀತ್ ರವರು ಹೃದಯಾಘಾತದಿಂದ ಅಕಾಲಿಕ ಮರಣವನ್ನು ಅಪ್ಪುತ್ತಾರೆ ಎಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ.

ಆದರೆ ಈಗಾಗಲೇ ನಾವು ಅವರನ್ನು ಕಳೆದುಕೊಂಡು ಹಲವಾರು ದಿನಗಳು ಕಳೆದುಹೋಗಿವೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು 22 ವರ್ಷಗಳ ಕಾಲ ತುಂಬ ಸಂಸಾರವನ್ನು ನಡೆಸಿದ್ದಾರೆ. ಇಬ್ಬರು ಕೂಡ ಯಾವುದೇ ರೀತಿಯ ಕೆಟ್ಟ ಸುದ್ದಿಗೆ ಆಹಾರ ವಾಗಿರಲಿಲ್ಲ. ಅಪ್ಪು ಅವರನ್ನು ಇಡೀ ಕನ್ನಡ ಚಿತ್ರರಂಗವೇ ಮೆಚ್ಚಿಕೊಂಡಿತ್ತು. ಅದಕ್ಕಾಗಿ ಅವರನ್ನು ಅಜಾತಶತ್ರು ಎಂಬ ಮಾತುಗಳಿಂದ ಕರೆಯುತ್ತಿತ್ತು ಕನ್ನಡ ಚಿತ್ರರಂಗ.

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆಯಿಂದ ಅದೆಷ್ಟೋ ಯುವ ಹಾಗೂ ಹೊಸ ಪ್ರತಿಭೆಗಳಿಗೆ ಅವರ ಪ್ರತಿಭೆಯನ್ನು ಅನಾವರಣ ಮಾಡುವ ಅವಕಾಶವನ್ನು ನೀಡಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಸುವರ್ಣ ಅವಕಾಶವನ್ನು ನೀಡಿದ್ದರು. ಕನ್ನಡ ಚಿತ್ರರಂಗವನ್ನು ಜಾಗತಿಕವಾಗಿ ಬೆಳೆಸುವ ಆಲೋಚನೆಯನ್ನು ಕೂಡ ಹೊಂದಿದ್ದರು.

ಇಷ್ಟೇ ಏಕೆ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಕಾರ್ಯಗಳಲ್ಲಿ ಕೂಡ ಸದಾ ಮುಂದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಮೊನ್ನೆಯಷ್ಟೇ ಪುನೀತ್ ರಾಜಕುಮಾರ್ ರವರ 12ನೇ ದಿನದ ಅಂಗವಾಗಿ ಮೂವತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮಕ್ಕಳು ಹಾಗೂ ಶಿವಣ್ಣ ಮತ್ತು ರಾಘಣ್ಣ ದೊಡ್ಡಮನೆಯ ಕುಟುಂಬಸ್ಥರು ಅಡುಗೆಯನ್ನು ಬಡಿಸಿದ್ದರು. ಈ ಸಂದರ್ಭದಲ್ಲಿ ಭಾವುಕರಾಗಿದ್ದರು ಕೂಡ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ಚಿಕ್ಕಂದಿನಿಂದಲೂ ಕೂಡ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಈ ಹಿಂದೆ ದೃತಿ ಅವರು ಅಂದ ಮಕ್ಕಳ ಪಾಲಿಗೆ ನೆರವಾಗಿದ್ದು ಹಾಗೂ ಅವರ ಜವಾಬ್ದಾರಿಯನ್ನು ಸಂಪೂರ್ಣ ತಮ್ಮ ಖರ್ಚಿನಲ್ಲಿ ವಹಿಸಿಕೊಂಡಿದ್ದು ಸುದ್ದಿಯಾಗಿತ್ತು. ಇನ್ನು ದೃತಿ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಬುದ್ಧಿವಂತಿಕೆಯ ಮೂಲಕ ಸ್ಕಾಲರ್ಶಿಪ್ ಪಡೆದು ಅಮೆರಿಕದ ಯೂನಿವರ್ಸಿಟಿಯಲ್ಲಿ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾಭ್ಯಾಸವನ್ನು ಕಲಿಯುತ್ತಿದ್ದರು.

ಇನ್ನು 11ನೇ ದಿನದ ಕಾರ್ಯಕ್ರಮದಲ್ಲಿ ಪುನೀತ್ ಅವರ ಎರಡನೇ ಮಗಳು ಕೂಡ ಪೂಜೆಯನ್ನು ಮುಗಿಸಿ ಎಸೆಸೆಲ್ಸಿ ಪರೀಕ್ಷೆಯನ್ನು ನೀಡಲು ಹೋಗಿದ್ದರು. ಪುನೀತ್ ರವರ ಇಬ್ಬರು ಹೆಣ್ಣುಮಕ್ಕಳು ಕೂಡ ತಂದೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಸಾಕಷ್ಟು ಪ್ರಯತ್ನವನ್ನು ಪಡುತ್ತಿದ್ದಾರೆ. ಇನ್ನು ಪುನೀತ್ ರವರ ಕಾಲಾನಂತರ ಅವರು ಮಾಡುತ್ತಿದ್ದ ಎಲ್ಲಾ ಒಳ್ಳೆಯ ಕೆಲಸಗಳನ್ನು ಅಶ್ವಿನಿ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದು ಇದಕ್ಕೆ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ಬೆಂಬಲವಾಗಿ ನಿಲ್ಲುತ್ತಿದ್ದಾರೆ.

ಶಿವಣ್ಣ ಹಾಗೂ ರಾಘಣ್ಣ ನವರು ಕೂಡ ಅಪ್ಪು ಕುಟುಂಬಕ್ಕೆ ಈಗ ಆಧಾರವಾಗಿ ನಿಂತಿದ್ದಾರೆ. ದೊಡ್ಮನೆ ಕುಟುಂಬದಿಂದ ಇನ್ನಷ್ಟು ಕೆಲಸಗಳು ಸಾಮಾಜಿಕ ಕಳಕಳಿ ದೃಷ್ಟಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ಆಸೆ. ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ರವರಿಂದ ಬಂದಂತಹ ಈ ಪರೋಪಕಾರಿ ಗುಣ ಅವರ ಮಕ್ಕಳಿಂದ ಈಗ ಮೊಮ್ಮಕ್ಕಳಿಗೂ ಕೂಡ ಬಂದಿರುವುದು ಬಹಳಷ್ಟು ಸಂತಸ ಪಡುವ ವಿಷಯ. ಅಣ್ಣಾವ್ರ ಕುಟುಂಬ ಎಂದರೆ ಕೈಯೆತ್ತಿ ದಾನವನ್ನು ಮಾಡುವಂತಹ ಕುಟುಂಬ ಎಂಬುದು ಕೇವಲ ಮಾತಾಗದೆ ನಿಜವಾಗಿಯೂ ಕೂಡ ನಡೆಯುತ್ತಿದೆ. ಮುಂದಿನ ತಲೆಮಾರು ಕೂಡ ಹೀಗೆ ನಡೆಯಲಿ ಎಂಬುದು ನಮ್ಮ ಆಸೆ.

Post Author: Ravi Yadav