ವಿರಾಟ್,ರೋಹಿತ್ ಗಿಂತ ಈತನಿಗೆ ಬೌಲ್ ಮಾಡುವುದು ಕಷ್ಟ ಎಂದ ಡೇಲ್ ಸ್ಟೇಯ್ನ್, ಆ ಆಟಗಾರ ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಡೇಲ್ ಸ್ಟೇಯ್ನ್ ವಿಶ್ವ ಕಂಡ ಶ್ರೇಷ್ಠ ವೇಗದ ಬೌಲರ್. ದಕ್ಷಿಣ ಆಫ್ರಿಕಾ ತಂಡದ ಬೆನ್ನೆಲುಬಾಗಿದ್ದವರು. ಇವರು ಐಪಿಎಲ್ ನಲ್ಲಿ ಆರ್ಸಿಬಿ ತಂಡದಲ್ಲಿಯೂ ಸಹ ಆಡಿದ್ದವರು. ತಮ್ಮ ವೇಗದ ಎಸೆತಗಳಿಂದ ಎದುರಾಳಿ ಬ್ಯಾಟ್ಸಮನ್ ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಅಂತಹ ಡೇಲ್ ಸ್ಟೇಯ್ನ್ ತೀರಾ ಇತ್ತಿಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೇಟ್ ನಿಂದ ನಿವೃತ್ತಿ ಹೊಂದಿದರು.

ನಿವೃತ್ತಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ಸ್ಟೇಯ್ನ್ , ಆಗಾಗ ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಏರ್ಪಡಿಸಿಕೊಳ್ಳುತ್ತಾರೆ. ಅಭಿಮಾನಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಇವರ ವಿಶೇಷಗಳಲ್ಲೊಂದು. ಇನ್ನು ಇತ್ತಿಚೆಗಷ್ಟೇ ನಡೆದ ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬ, ಸದ್ಯದ ಕ್ರಿಕೇಟ್ ಆಡುವವರಲ್ಲಿ ನೀವು ಯಾವ ಬ್ಯಾಟ್ಸಮನ್ ಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಭಾವಿಸುತ್ತಿರಿ ಎಂದು ಕೇಳಿದ. ಆಗ ಡೇಲ್ ಸ್ಟೇಯ್ನ್ ಕೊಟ್ಟ ಉತ್ತರ ಈಗ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.

ಹೌದು ಡೇಲ್ ಸ್ಟೇಯ್ನ್ ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜೋ ರೂಟ್ ಹೆಸರು ಹೇಳಬಹುದು ಎಂದು ನೀರಿಕ್ಷಿಸಲಾಗಿತ್ತು. ಆದರೇ ಡೇಲ್ ಸ್ಟೇಯ್ನ್ ಹೇಳಿದ ಹೆಸರು ಮಾತ್ರ ಸಂಪೂರ್ಣ ಭಿನ್ನ‌ . ಹೌದು ಆ ಆಟಗಾರ ಬೇರಾರೂ ಅಲ್ಲ, ಕನ್ನಡಿಗ ಕೆ.ಎಲ್.ರಾಹುಲ್. ಹೌದು ಕನ್ನಡಿಗ ಕೆ.ಎಲ್.ರಾಹುಲ್ ಗೆ ಬೌಲಿಂಗ್ ಮಾಡುವುದು ಡೇಲ್ ಸ್ಟೇಯ್ನ್ ಗೆ ಕಠಿಣವಾಗುತ್ತದೆಯಂತೆ. ಭಾರತ ವಿಶ್ವಕಪ್ ನಿಂದ ಹೊರಬಿದ್ದರೂ, ರಾಹುಲ್ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧ ಶತಕ ಭಾರಿಸುವ ಮೂಲಕ ಉತ್ತಮ ಲಯದಲ್ಲಿದ್ದಾರೆ. ಅವರಿಗೆ ಬೌಲಿಂಗ್ ಮಾಡುವುದು ಸ್ವಲ್ಪ ಕಠಿಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ಭಾರಿಯ ವಿಶ್ವಕಪ್ ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂಬ ಪ್ರಶ್ನೆಗೆ, ಇಂತಹದೇ ತಂಡ ಎಂದು ನಾನೂ ಎಲ್ಲಿಯೂ ಹೇಳುವುದಿಲ್ಲ. ಆದರೇ ಪಾಕಿಸ್ತಾನ ತಂಡ ಉತ್ತಮವಾಗಿ ಆಡುತ್ತಿದೆ. ಅವರಿಗೆ ಗೆಲ್ಲಲು ಹೆಚ್ಚು ಅವಕಾಶಗಳು ಇರುವುದಂತೂ ಸತ್ಯ ಎಂದು ಹೇಳಿದರು‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav